ಚಿಂತಾಮಣಿ: ಕೋವಿಡ್ ಕೇಂದ್ರದಲ್ಲಿಕಾರ್ಯನಿರ್ವಹಿಸಿದ ಏಳು ವೈದ್ಯರುಸೇರಿ 35 ಮಂದಿಗೆ ಮೊದಲ ತಿಂಗಳ 7.5ಲಕ್ಷ ರೂ. ವೇತನವನ್ನು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವೈಯಕ್ತಿಕವಾಗಿ ವಿತರಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದು ಸನ್ಮಾನ ಸಮಾರಂಭದಲ್ಲಿ ವೈದ್ಯರಿಗೆ ಪ್ರಶಂಸೆ ಪತ್ರ, ವೇತನ ವಿತರಿಸಿಮಾತನಾಡಿದ ಅವರು, ಪ್ರಾಣದ ಹಂಗುತೊರೆದು ಕೊರೊನಾ ಸೋಂಕಿತರಿಗೆಚಿಕಿತ್ಸೆ ನೀಡುವುದರ ಜೊತೆಗೆ ಸೋಂಕುನಿಯಂತ್ರಿಸಲು ಶ್ರಮಿಸುತ್ತಿರುವವೈದ್ಯರು, ಸಿಬ್ಬಂದಿಗೆ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದರು.
ಕೋವಿಡ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿ ಸುವ ನೌಕರರಿಗೆ ಮೂರು ತಿಂಗಳಸಂಬಳ ನೀಡಲು ನಿರ್ಧರಿಸಲಾಗಿತ್ತು.ಆದರೆ, ಈಗ ಇನ್ನೂ ಒಂದು ತಿಂಗಳುವೈದ್ಯರು ಕಾರ್ಯ ನಿರ್ವಹಿಸಿದರೆ ಆ ತಿಂಗಳಸಂಬಳ ನೀಡಲು ನಾನು ಸಿದ್ಧನಿದ್ದೇನೆಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿಮುಖಂಡ ಸತ್ಯನಾರಾಯಣ ಮಹೇಶ್,ಕೊರೊನಾ ಸೋಂಕಿತರ ಚಿಕಿತ್ಸೆ ಬೇಕಾದಸೌಲಭ್ಯವನ್ನು ಸಂಘಸಂಸ್ಥೆಗಳು ನೀಡಿದ್ದವಾದರೂ ಕೋವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು, ಚಿಕಿತ್ಸೆ ನೀಡಲು ವೈದ್ಯರಕೊರತೆ ಇದ್ದಾಗ, ಕೆಲ ಖಾಸಗಿ ವೈದ್ಯರು,ಶುಶ್ರೂಷಕಿಯರಾಗಿ ಕಾರ್ಯನಿರ್ವ ಹಿಸಲುವಿಕ್ರಂ ಕಾಲೇಜಿನ ವಿದ್ಯಾರ್ಥಿಗಳುಮುಂದೆ ಬಂದಿದ್ದರಿಂದ ಅವರಿಗೆಅಭಿನಂದನೆ ತಿಳಿಸಿದರು.
ತಹಶೀಲ್ದಾರ್ ಹನುಂತರಾಯಪ್ಪ,ಡಿವೈಎಸ್‌ಪಿ ಲಕ್ಷ್ಮಯ್ಯ, ತಾಲೂಕುಆರೋಗ್ಯಾಧಿಕಾರಿ ಡಾ.ಸ್ವಾತಿ, ವೈದ್ಯಾಧಿಕಾರಿ ಡಾ.ಸಂತೋಷ್, ನಗರಸಭೆಸದಸ್ಯರಾದ ಮಂಜುನಾಥ, ಮುರಳಿ,ಜೈಭೀಮ್ ಮುರಳಿ, ದೇವಳ್ಳಂ ಶಂಕರ್,ಮಾಜಿ ಸದಸ್ಯ ವೆಂಕಟರವಣಪ್ಪ, ಮುಖಂಡರಾದ ಡಾ.ವಿ.ಅಮರ್, ಅಬ್ಬುಗುಂಡುಮಧು, ಸಂತೆಕಲ್ಲಹಳ್ಳಿ ಮಹೇಶ್,ಪ್ರಭಾಕರ್ ಉಪಸ್ಥಿತರಿದ್ದರು.