Advertisement
ಅಲ್ಲದೆ, ಸಚಿವ ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಜತೆ ನಡೆದಿದ್ದ ಸಭೆಯಲ್ಲಿ ಶಿವಶಂಕರ ರೆಡ್ಡಿ ಒಂದಿಷ್ಟು ಬೇಡಿಕೆಗಳನ್ನಿಟ್ಟಿದ್ದು, ಅವುಗಳನ್ನು ಈಡೇರಿಸುವುದಾದರೆ ಮಾತ್ರ ಕೆಲಸ ಮಾಡುವುದಾಗಿ ಹೇಳಿದ್ದರು. ರವಿವಾರ ಬೆಂಬಲಿಗರ ಸಭೆ ಕರೆದಿದ್ದು, ಮುಂದಿನ ದಾರಿ ನಿಗೂಢವಾಗಿದೆ. ಅದೇ ರೀತಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಸಚಿವ ಬೋಸರಾಜು ಅಸಮಾಧಾನಗೊಂಡಿದ್ದು ಅಭ್ಯರ್ಥಿ ಕುಮಾರ್ ನಾಯಕ್ ಪರ ಕೆಲಸಮಾಡಲು ನಿರುತ್ಸಾಹ ತೋರಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಕ್ಕ ವೀಣಾ ಕಾಶಪ್ಪನವರ್ ಕೂಡ ಪ್ರಚಾರಕ್ಕೆ ಬರುತ್ತಾರೆ, ಅವರೂ ಕಾಂಗ್ರೆಸ್‌ನ ಭಾಗ, ಕಾಂಗ್ರೆಸ್‌ನ್ನು ಗೆಲ್ಲಿಸಲು ಬಂದೇ ಬರುತ್ತಾರೆ ಎನ್ನುತ್ತಲೇ ಇದ್ದಾರೆ. ಆದರೆ, ಟಿಕೆಟ್ ಕೈತಪ್ಪಿರುವ ಅಸಮಾಧಾನ ಹಾಗೇ ಮುಂದುವರಿದಿದೆ.