Advertisement

ಚಿಕ್ಕಬಳ್ಳಾಪುರ :ಮನೆ ಮಂಜೂರಾತಿ ಪತ್ರ ನಾಶಪಡಿಸಿದ ಆರೋಪ : ಜಿಪಂ ಮಾಜಿ ಸದಸ್ಯ ಪೊಲೀಸರ ವಶಕ್ಕೆ

04:41 PM Jun 22, 2022 | Team Udayavani |

ಚಿಕ್ಕಬಳ್ಳಾಪುರ : ಜರಬಂಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ 27 ಜನ ಪಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಆದೇಶದಂತೆ ಜರಬಂಡಹಳ್ಳಿ ಗ್ರಾಮ ಪಂಚಾಯ್ತಿಯ ಮನೆ ಮಂಜೂರಾತಿ ಪತ್ರಗಳನ್ನು ನಾಶಪಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಜಿಪಂ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್ ಸೇರಿ 4 ಜನರ ವಿರುದ್ಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜರಬಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ವಿ.ಶ್ರೀನಾಥ್ ಹಾಗೂ ಗ್ರಾಪಂ ಅಭಿವೃಧ್ಧಿ ಅಧಿಕಾರಿ ಮುನೇಗೌಡ ಅವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಮಂಚೇನಹಳ್ಳಿ ಪೋಲಿಸರು ಜಿಪಂ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜರಬಂಡಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ 2021-22 ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವ ವಸತಿಯೋಜನೆಗೆ ಸಂಬಂದಪಟ್ಟಂತೆ ಜರಬಂಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ 27 ಜನ ಪಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಆದೇಶದಂತೆ ಜರಬಂಡಹಳ್ಳಿ ಗ್ರಾಮ ಪಂಚಾಯ್ತಿಯ ಮನೆ ಮಂಜೂರಾತಿ ಪತ್ರಗಳನ್ನು ಆಯ್ಕೆ ಫಲಾನುಭವಿಗಳಿಗೆ ವಿತರಣೆ ಮಾಡಲು ಸಿದ್ದ ಪಡಿಸಿಕೊಂಡಿದ್ದು ಆದರೇ ಪಿ.ಎನ್.ಪ್ರಕಾಶ್, ಜರಬಂಡಹಳ್ಳಿ ಗ್ರಾಮದವರಾದ ಜೆ.ವಿ.ಮೋಹನ್ ಕುಮಾರ್, ಆರ್. ಆದಿನಾರಾಯಣ, ಮಿಥುನ್ ಸೇರಿ ಮನೆ ಮಂಜೂರಾತಿ ಆದೇಶ ಪತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ವಸತಿ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ಹೆಸರು ಮತ್ತು ಛಾಯಾ ಚಿತ್ರಗಳನ್ನು ಮನೆ ಮಂಜೂರಾತಿ ಪತ್ರದಲ್ಲಿ ಮುದ್ರಣಪಡಿಸಿದ್ದು ಇದಕ್ಕೆ ಸರ್ಕಾರದ ಆದೇಶ ಅಥವಾ ಸುತ್ತೋಲೆ ಅಥವಾ ಶಿಷ್ಠಾಚಾರ ಇದ್ದರೆ ತಿಳಿಸಿ ಎಂದು 5 ಮಂಜೂರಾತಿಪತ್ರವನ್ನು ಪಡೆದುಕೊಂಡು ಇನ್ನೂಳಿದ 22 ಫ್ರೇಮ್‍ಗಳ ಹಕ್ಕುಪತ್ರಗಳನ್ನು ನಾಶಪಡಿಸಿದ್ದಾರೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ದೂರು ನೀಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಅಮೆರಿಕಾದಲ್ಲಿ ಗುಂಡೇಟು ತಗುಲಿ ಭಾರತೀಯ ಮೂಲದ ಯುವಕ ನಿಗೂಢ ಸಾವು

ಮಂಚೇನಹಳ್ಳಿ ಪೊಲೀಸ್ ಠಾಣೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಲು ಸಜ್ಜಾಗುತ್ತಿದ್ದ ವೇಳೆಯಲ್ಲಿ ಬಂದಿದ್ದ ಜಿಪಂ ಮಾಜಿ ಸದಸ್ಯ ಪ್ರಕಾಶ್ ಅವರನ್ನು ಮಂಚೇನಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಇದೇ ವೇಳೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ಅಧಿಕಾರ ಎಷ್ಟು ದಿನ ಇರುತ್ತೆ ನೋಡುತ್ತೇನೆ ಎಂದು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next