Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇ 27 ರಿಂದ 31ರವರೆಗೆ ಸಂಪೂರ್ಣ ಲಾಕ್‍ಡೌನ್ : ಜಿಲ್ಲಾಧಿಕಾರಿ

07:03 PM May 23, 2021 | Team Udayavani |

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಜಾರಿಗೊಳಿಸಿದ್ದ ಲಾಕ್‍ಡೌನ್‍ನಿಂದ ಅನುಕೂಲವಾಗಿದ್ದು ಸೋಮವಾರದಿಂದ ಮೂರು ದಿನಗಳು ದಿನಸಿ ಸಹಿತ ಅಗತ್ಯ ವಸ್ತುಗಳನ್ನು ಖರೀದಿಗೆ ಅವಕಾಶ ಕಲ್ಪಿಸಿ ಜಿಲ್ಲೆಯ ಜನರ ಆರೋಗ್ಯದ ದೃಷ್ಠಿಯಿಂದ ಮೇ 27 ರಿಂದ 31ರ ಬೆಳಿಗ್ಗೆ 6 ಗಂಟೆಯವರೆಗ ವರೆಗೆ ಮತ್ತೊಮ್ಮೆ ಜಿಲ್ಲಾದ್ಯಂತ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲು ಜಿಲ್ಲಾ ಕಾರ್ಯಪಡೆ ನಿರ್ಧಾರ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಮೇ 20 ರಿಂದ 23 ವರೆಗೆ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು ಅದರಿಂದ ಸಾಕಷ್ಟು ಅನುಕೂಲಗಳು ಆಗಿದ್ದು ಜೊತೆಗೆ ಪರಿಣಾಮಕಾರಿ ಸಹ ಆಗಿದೆ ಮುಂದಿನ 4-5 ದಿನಗಳ ನಂತರ ಲಾಕ್‍ಡೌನ್ ಫಲಿತಾಂಶ ಸ್ಪಷ್ಟವಾಗಿ ಲಭಿಸಲಿದೆ ಎಂದರು.

ರಾಜ್ಯ ಸರ್ಕಾರ ಈಗಾಗಲೇ 07 ಜೂನ್ ವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಿದೆ ಹೀಗಾಗಿ ಮೇ 24-26 ವರೆಗೆ ಸೋಮವಾರ-ಮಂಗಳವಾರ ಬುಧವಾರ ಬೆಳಿಗ್ಗೆ 6 ಗಂಟೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಒದಗಿಸಲಾಗಿದೆ ನಂತರ ಮೇ 27 ರಿಂದ 31ರ ಬೆಳಿಗ್ಗೆ 6 ಗಂಟೆವರೆಗೆ ಅಂದರೆ ಗುರುವಾರ-ಶುಕ್ರವಾರ,ಶನಿವಾರ,ಭಾನುವಾರ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಈ ಅವಧಿಯಲ್ಲಿ ಹಾಲಿನ ಮಳಿಗೆಗಳು ಮಾತ್ರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಕಾರ್ಯನಿರ್ವಹಿಸಲಿದ್ದು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಸಮೀಪ ಇರುವ ಹೋಟಲ್‍ಗಳಲ್ಲಿ ಪಾರ್ಸಲ್ ನೀಡಲು ಅವಕಾಶ ಒದಗಿಸಲಾಗಿದೆ ಎಂದರು.

ಇದನ್ನೂ ಓದಿ :ಡಿಸಿಎಂ ಹೇಳಿದ ಮರುದಿನವೇ ಹಾಸನಕ್ಕೆ 30 ವೆಂಟಿಲೇಟರ್, 25 ಆಮ್ಲಜನಕ ಸಾಂದ್ರಕ

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್‍ಗಳು ತೆರೆದಿರುತ್ತದೆ ನಗರ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಎಪಿಎಂಸಿಗಳು ಬಂದ್ ಇರುತ್ತದೆ ಚಿಂತಾಮಣಿ ಮತ್ತು ಬಾಗೇಪಲ್ಲಿಯಲ್ಲಿ ಮಾತ್ರ ಟೊಮೇಟೋ ಮಾರಾಟ ಮಾಡಲು ಶುಕ್ರವಾರ ಮತ್ತು ಭಾನುವಾರ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡುತ್ತೇವೆ ಗುರುವಾರ ಮತ್ತು ಶನಿವಾರ ಬಂದ್ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

ಸೋಂಕಿನ ಪ್ರಮಾಣ 5% ಇಳಿಸಲು ಗುರಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಂಕು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಜನರ ಆರೋಗ್ಯದ ಹಿತ ದೃಷ್ಠಿಯಿಂದ ಲಾಕ್‍ಡೌನ್ ಜಾರಿಗೊಳಿಸಿದ್ದೇವೆ ನಗರ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿರುವುದರಿಂದ ಅಲ್ಲಿನ ಕಾರ್ಯಪಡೆಗಳನ್ನು ಮತ್ತಷ್ಟು ಸಕ್ರೀಯವಾಗಿ ಕಾರ್ಯನಿರ್ವಹಿಸಲು ಆದ್ಯತೆ ನೀಡುತ್ತೇವೆ ಕಾರ್ಯಪಡೆ ಹೇಗೆ ಕಾರ್ಯನಿರ್ವಹಿಸುತ್ತಿದೆಯೆಂದು ಈಗಾಗಲೇ ವಾಟ್ಸ್‍ಆಪ್ ಗ್ರೂಪ್‍ಗಳನ್ನು ರಚಿಸಿ ಅದರಲ್ಲಿ ತಾವು ಮತ್ತು ಜಿಪಂ ಸಿಇಓ ಸಹಿತ ನೋಡಲ್ ಅಧಿಕಾರಿಗಳನ್ನು ಸೇರಿಸಿ ಕಾರ್ಯಪಡೆಗಳ ಕಾರ್ಯವೈಖರಿಯನ್ನು ಅವಲೋಕಿಸಿ ಸೋಂಕಿತರಿಗೆ ಉತ್ತಮವಾಗಿ ಚಿಕಿತ್ಸೆ ಒದಗಿಸಲು ವಿಶೇಷ ಆದ್ಯತೆ ನೀಡಲಾಗಿದೆ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಶೇ.5%ಗೆ ಇಳಿಸುವುದೇ ನಮ್ಮ ಮುಖ್ಯ ಗುರಿಯೆಂದರು.

ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಕಾರ್ಯಪಡೆಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಲು ಈಗಾಲೇ ಸೂಚನೆ ನೀಡಲಾಗಿದೆ ಜೊತೆಗೆ ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರಿಗೆ ಅವರ ಮನೆಯಲ್ಲಿ ಶೌಚಾಲಯ ಪ್ರತ್ಯೇಕ ಕೊಠಡಿ ಮತ್ತು ಸೌಲಭ್ಯಗಳು ಇದಿಯೇ? ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಈಗಾಗಲೇ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ ಒಂದು ವೇಳೆಯಲ್ಲಿ ಸೋಂಕಿತರ ಮನೆಯಲ್ಲಿ ಸೌಲಭ್ಯಗಳು ಇಲ್ಲದಿದ್ದ ಪಕ್ಷದಲ್ಲಿ ಅವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಜಿಲ್ಲೆಯಲ್ಲಿ ಲಾಕ್‍ಡೌನ್ ಪೂರ್ವ ಕೇವಲ 336 ಮಂದಿ ಮಾತ್ರ ಕೋವಿಡ್‍ಕೇರ್ ಸೆಂಟರ್‍ನಲ್ಲಿ ದಾಖಲಾಗಿದ್ದರು ಇದೀಗ ಅದರ ಸಂಖ್ಯೆ 1500ಕ್ಕೇರಿದೆ ಎಂದ ಜಿಲ್ಲಾಧಿಕಾರಿಗಳು ಕೋವಿಡ್ ಸ್ಥತಿಗತಿಗಳನ್ನು ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಕೇಂದ್ರದ ಮಟ್ಟದಲ್ಲಿ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇವೆ ಎಂದರು.

ಅಧಿಕಾರಿಗಳಿಗೆ ಸೂಚನೆ: ಜಿಲ್ಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವನ್ನು ಒದಗಿಸಿ ಈ ಅವಧಿಯಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಲು ಕ್ರಮ ಕೈಗೊಳ್ಳಬೇಕೆಂದು ಪುರಸಭೆ/ನಗರಸಭೆ ಪೌರಾಯುಕ್ತರು ಹಾಗೂ ಗ್ರಾಮ ಪಂಚಾಯಿತಿಯ ಅಭಿವೃಧ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಜಿಲ್ಲಾಧಿಕಾರಿಗಳು ಜಿಲ್ಲೆಯನ್ನು ಸೋಂಕು ಮುಕ್ತ ಮಾಡಲು ನಾಗರಿಕರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ಅಪ್ರಾಪ್ತ ಬಾಲಕಿಯರ ಹತ್ಯೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ

138 ಕೋವಿಡ್ ಸೋಂಕಿತರ ಸಾವು: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿದ್ದು ಜಿಲ್ಲೆಯಲ್ಲಿ ಏಪ್ರಿಲ್ 23, ಮೇ ತಿಂಗಳಿನಲ್ಲಿ 115 ಮೃತಪಟ್ಟಿದ್ದಾರೆ ಕಳೆದ ಮೂರು ನಾಲ್ಕು ದಿನಗಳಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಆದರೇ ಬೇರೆ ಜಿಲ್ಲೆಗೆ ಹೋಲಿಸಿದರೆ ಮೃತರ ಸಂಖ್ಯೆ ಕಡಿಮೆಯಿದೆ ಎಂದು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಸ್ಕ್ಯಾನಿಂಗ್‍ಗೆ ನಿಗಧಿಪಡಿಸಿರುವ ದರಕ್ಕಿಂತಲೂ ಅಧಿಕ ವಸೂಲಿ ಮಾಡುತ್ತಿರುವ ಕುರಿತು ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ ಎಂದರು.
ಸುಧ್ಧಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್,ಅಪರ ಜಿಲ್ಲಾಧಿಕಾರಿ ಅಮರೇಶ್,ಉಪ ವಿಭಾಗಾಧಿಕಾರಿ ರಘುನಂದನ್,ಜಿಲ್ಲಾ ಪೋಲಿಸ್ ಜಿಲ್ಲಾ ಆರೋಗ್ಯಾಧಿಕಾರಿ ಜಿಕೆ ಮಿಥುನ್‍ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರು ಸಹ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕದ್ದುಮುಚ್ಚಿ ಮಟನ್-ಕಿಚನ್ ಮಾರಾಟವಾಗುತ್ತದೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೂಕ್ತ ರೀತಿಯ ಕ್ರಮ ಜರುಗಿಸುತ್ತಿಲ್ಲ ಕೆಲವಡೆ ಪೋಲಿಸರ ಕ್ರಮ ಕೈಗೊಳ್ಳುತ್ತಾರೆ ಇದರ ಬಗ್ಗೆ ಕಠಿಣ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನರ್ಸಿಗ್ ಕೇರ್ ಕಳಪೆಯಿದೆ ರೋಗಿಗಳಿಗೆ ಸೂಕ್ತ ರೀತಿಯ ಆರೈಕೆ ಇಲ್ಲದೇ ಮೃತಪಟ್ಟಿದ್ದಾರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಹಾಸಿಗೆಗಳು ಮೀಸಲಿಟ್ಟರು ಸಹ ಜಿಲ್ಲೆಯ ಜನರಿಗೆ ಐಸಿಯು ಬೆಡ್‍ಗಳು ಸಿಗುತ್ತಿಲ್ಲ ಬೆಂಗಳೂರು ಮತ್ತಿತರರ ಪ್ರದೇಶಗಳ ಜನರಿಗೆ ಬೆಡ್‍ಗಳು ಸಿಗುತ್ತಿದೆ ಸಿಟಿ ಸ್ಕ್ಯಾನ್ ಮಾಡಲು 1500 ಚಾರ್ಜ್ ಮಾಡುತ್ತಾರೆ ಸಿಡಿ ಕೊಡುತ್ತೇವೆ ಎಂದು 1 ಸಾವಿರ ರೂಗಳು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ ಎಂದು ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next