Advertisement
ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ತಾಲೂಕಿನ 68 ಗ್ರಾ.ಪಂ.ಗಳ 1042 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 1,53,448 ಪುರುಷರು, 1,48,422 ಮಹಿಳೆಯರು ಸಹಿತ 301870 ಮತದಾರರು ಮತ ಚಲಾಯಿಸಿ ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸಿದ್ದಾರೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಅತ್ಯಾಧಿಕ 91.28%,ಗೌರಿಬಿದನೂರು ತಾಲೂಕಿನಲ್ಲಿ 88.67% ಹಾಗೂ ಗುಡಿಬಂಡೆ ತಾಲೂಕಿನಲ್ಲಿ 89.24% ಮತದಾನ ದಾಖಲಾಗಿದೆ.
Related Articles
Advertisement
ಗುಡಿಬಂಡೆ ತಾಲೂಕಿನ 08 ಗ್ರಾ.ಪಂ.ಗಳ 115 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 16950 ಪುರುಷರು 16481 ಮಹಿಳೆಯರು ಸೇರಿದಂತೆ 33431 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಡೆದ ದ್ವಿತೀಯ ಹಂತೆದ ಗ್ರಾ.ಪಂ. ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಚುನಾವಣೆ ಅಂಗವಾಗಿ ಮತದಾನ ಮಾಡಲು ಬರುವ ಮತದಾರರಿಗೆ ಮತಗಟ್ಟೆ ಕೇಂಧ್ರದ ಬಳಿ ಆಶಾ ಕಾರ್ಯಕರ್ತರು ಥರ್ಮಲ್‍ಸ್ಕ್ಯಾನರ್‍ಗಳ ಮೂಲಕ ಆರೋಗ್ಯ ತಪಾಸಣೆ ಮಾಡಲು ಅನುವು ಮಾಡಿಕೊಟ್ಟರು.
ಸಾಮಾನ್ಯವಾಗಿ ವಿಧಾನಸಭೆಯ ಚುನಾವಣೆಯ ಮಾದರಿಯಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೊನೆಯ ಕ್ಷಣವರೆಗೂ ಸಹ ಮತದಾರರ ಮನ ವೊಲಿಸುವ ಕಸರತ್ತು ನಡೆಸಿದರು. ಆಟೋ ಕಾರುಗಳಲ್ಲಿ ಮತದಾರರನ್ನು ಕರೆ ತಂದು ಪುನಃ ಮನೆಗಳಿಗೆ ವಾಪಸ್ ಬಿಟ್ಟು ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದಿತು.
ಮತದಾನ ಕೇಂದ್ರದ ಸಮೀಪ ಮತದಾರರಿಗೆ ಮಾರ್ಗದರ್ಶನ ಮಾಡಲು ವಿವಿಧ ಪಕ್ಷಗಳ ಕಾರ್ಯಕರ್ತರುಗಳ ಮುಖಂಡರು ಪ್ರತ್ಯೇಕ ಶಾಮಿಯಾನಗಳನ್ನು ಹಾಕಿದರು. ಮತದಾನ ಮಾಡಲು ಮತಗಟ್ಟೆಗೆ ತೆರಳುತ್ತಿದ್ದ ಮತದಾರರನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರು.
ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು ಭಾನುವಾರದಂದು ನಡೆದ ದ್ವಿತೀಯ ಹಂತದಲ್ಲಿ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ತಾಲೂಕಿನಲ್ಲಿಯೂ ಸಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಚುನಾವಣೆ ಶಾಂತಿಯುತವಾಗಿ ನಡೆದಿದೆ ಜಿಲ್ಲೆಯಲ್ಲಿ ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮುತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಕೈಗೊಂಡಿದ್ದ ಕ್ರಮಗಳಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ಅಪರ ಜಿಲ್ಲಾಧಿಕಾರಿ ಅಮರೇಶ್ ಅವರು ನಂದಿ, ಸುಲ್ತಾನಪೇಟೆ, ಯಲುವಹಳ್ಳಿ ಮತಗಟ್ಟೆ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸಗೊಂಡಿದೆ. ಈ ಹಿಂದೆ ಸುಮಾರು ಶೇ.90 ರಷ್ಟು ಮತದಾನ ದಾಖಲಾಗಿತ್ತು ಅದು ದಾಟಿದರೆ ರಾಜ್ಯದಲ್ಲಿ ದ್ವಿತೀಯ ಅಥವಾ ತೃತೀಯ ಸ್ಥಾನವನ್ನು ಜಿಲ್ಲೆ ಪಡೆದುಕೊಳ್ಳಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಗ್ರಾ.ಪಂ.ಯ ಚುನಾವಣೆಯಲ್ಲಿ ಅಗಲಗುರ್ಕಿ ಗ್ರಾಮ ಪಂಚಾಯಿತಿಯ ಜಡಲತಿಮ್ಮನಹಳ್ಳಿ ಮತಗಟ್ಟೆ ಕೇಂದ್ರಕ್ಕೆ ರಾಧಮ್ಮ ಎಂಬ ವಿಕಲಚೇತನ ಮಹಿಳೆಯೊಬ್ಬರು ಯಾರ ಸಹಾಯವೂ ಇಲ್ಲದೆ ಮನೆಯಿಂದ ಮತಗಟ್ಟೆಗೆ ತೆವಲುಕೊಂಡು ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ.