Advertisement

ಚಿಕ್ಕಬಳ್ಳಾಪುರ: ಏರುತ್ತಲಿದೆ ಕೋವಿಡ್‌ ಸಾವು

06:30 AM Jul 11, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕೋವಿಡ್‌ 19 ಮಹಾಮಾರಿ ಆರ್ಭಟ ಜಿಲ್ಲೆಯಲ್ಲಿ ಮುಂದುವರಿದಿದ್ದು, ಶುಕ್ರವಾರ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಸೇರಿ ಒಟ್ಟು 19 ಮಂದಿಗೆ ಕೋವಿಡ್‌-19 ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆ ಫ‌ಲಿಸದೇ  ಸೋಂಕಿಗೆ ಇಬ್ಬರು ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಸಾವಿನ ಪ್ರಮಾಣ ಏರುತ್ತಲೇ ಇದೆ.

Advertisement

ಸೋಂಕಿತರ ಸಂಖ್ಯೆ 351ಕ್ಕೇರಿಕೆ: ಜಿಲ್ಲೆಯಲ್ಲಿ 19 ಹೊಸ ಪ್ರಕರಣಗಳು ಸೇರಿ ಇದುವರೆಗೂ 351 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಸದಾಗಿ ಕಂಡು ಬಂದಿರುವ 19 ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ 9, ಬಾಗೇಪಲ್ಲಿ ಹಾಗೂ  ಚಿಂತಾಮಣಿ ತಾಲೂಕಿನಲ್ಲಿ ತಲಾ 2 ಹಾಗೂ ಶಿಡ್ಲಘಟ್ಟದಲ್ಲಿ 4 ಹಾಗೂ ಗೌರಿಬಿದನೂರು ಮತ್ತು ಗುಡಿಬಂಡೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. 19 ಮಂದಿಯಲ್ಲಿ 11 ಮಂದಿ ಮಹಿಳೆಯರು, 8 ಮಂದಿ ಪುರುಷರಾಗಿದ್ದಾರೆ.

218 ಮಂದಿ ಡಿಸ್ಚಾರ್ಜ್‌: ಜಿಲ್ಲೆಯಲ್ಲಿ ಒಟ್ಟಾರೆ 351 ಮಂದಿ ಸೋಂಕಿತರ ಪೈಕಿ ಇದುವರೆಗೂ ಒಟ್ಟು ಶುಕ್ರವಾರ ಬಿಡುಗಡೆಗೊಂಡ 10 ಮಂದಿ ಸೇರಿ 218 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರೆ, ಇನ್ನೂ  120 ಸಕ್ರಿಯ ಪ್ರಕರಣಗಳಿದ್ದು ಸೋಂಕಿತರನ್ನು ಹಳೆ ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್‌-19 ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ.

ನಗರಸಭೆ ಆಯುಕ್ತರಿಗೂ ಪಾಸಿಟಿವ್‌: ಸ್ಥಳೀಯ ನಗರಸಭೆ ಆಯುಕ್ತರಿಗೂ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಇದುವರೆಗೂ ಆಯುಕ್ತರ ಸಂಪರ್ಕದಲ್ಲಿದ್ದ ನಗರಸಭೆ ಅಧಿಕಾರಿ, ಸಿಬ್ಬಂದಿ ಯಲ್ಲಿ ಆತಂಕ ಶುರುವಾಗಿದೆ. ನಗರಸಭೆಯನ್ನು  ಸಂಪೂರ್ಣ ಕ್ರಿಮಿನಾಶಕ ಸಿಂಪಡಿಸಿ ಯಾರು ಪ್ರವೇಶಿಸದಂತೆ ಕಚೇರಿ ಸೇರಿ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಆಯುಕ್ತರ ಸಂಪರ್ಕಕ್ಕೆ ಬಂದಿದ್ದವರನ್ನು ಹುಡುಕಾಟ ನಡೆಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next