ಸಂಗ್ರಹವಾಗಿದ್ದ ಅಂದಾಜು 3 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ಅಪರಿಚಿತರು ತಮ್ಮ ಕೈ ಚಳಕ ನಡೆಸಿ ಕಳವು ಮಾಡಿರುವ ಘಟನೆ ನಡೆದಿದೆ.
Advertisement
ಈ ಸಂಬಂಧ ವರನ ತಂದೆ ಮುನಿರಾಜು ಎಂಬುವರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ಬಿಬಿ ರಸ್ತೆಯಲ್ಲಿರುವ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಫೆ.18 ಮತ್ತು 19 ರಂದು ವಿವಾಹವಾಗಿದ್ದು, ಫೆ.18 ರಂದು ಸಂಜೆ ಅಕ್ಷರತೆಯಲ್ಲಿ ನೆಂಟರು, ಸ್ನೇಹಿತರಿಂದ ಹಣ ಸಂಗ್ರವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅರಕ್ಷತೆ ಮುಗಿದ ಬಳಿಕ ಫೆ.19 ಬೆಳಗ್ಗೆ 6:20 ರ ಸಮಯದಲ್ಲಿ ಮುನಿರಾಜು ಹಣವಿದ್ದ ಬ್ಯಾಗನ್ನು ಎತ್ತಿಕೊಂಡು ಕಲ್ಯಾಣ ಮಂಟಪದಿಂದ ಹೊರಗೆ ಬಂದಿದ್ದು, ಕಲ್ಯಾಣ ಮಂಟಪದ ಬಳಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿಟ್ಟಿದ್ದು, ಚದಲಪುರದ ಮನೆಗೆ ಹೋಗಬೇಕಾದುದರಿಂದ ಕಲ್ಯಾಣ ಮಂಟಪದ ಒಳಗೆ ಹೋಗಿ, ತನ್ನ ಪತ್ನಿ ಪದ್ಮ ಬಳಿ ಮನೆಯ ಕೀ ತೆಗೆದುಕೊಂಡು ವಾಪಸು ಕಾರಿನ ಬಳಿ ಬರುವಷ್ಟರಲ್ಲಿ ಬ್ಯಾಗ್ ಕಳ್ಳತನ ಆಗಿದೆ. ತತ್ ಕ್ಷಣ ಮುನಿರಾಜು ಹರ್ಷೋದಯ ಕಲ್ಯಾಣ ಮಂಟಪದ ಉಸ್ತುವಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಳ್ಳತನದ ವಿಚಾರವನ್ನು ತಿಳಿಸಿ, ಚದಲಪುರದ ಮನೆಗೆ ಹೋಗಿದ್ದಾರೆ. ಕಲ್ಯಾಣ ಮಂಟಪದ ಸಿ.ಸಿ. ಟಿವಿ ಕೆಮರಾ ರೂಂನಲ್ಲಿ ಉಸ್ತುವಾರಿ ಇದ್ದರು. ಕಳ್ಳತನದ ಬಗ್ಗೆ ಪರಿಶೀಲಿಸಲು ಸಿ.ಸಿ. ಟಿವಿ ದೃಶ್ಯಾವಳಿಯನ್ನು ತೋರಿಸುವಂತೆ ಮನವಿ ಮಾಡಿದ್ದಾರೆ. ಬ್ಯಾಗ್ ಕಳ್ಳತನವಾಗಿರುವ ಸಮಯದಲ್ಲಿ ಕಾರು ನಿಲ್ಲಿಸಿದ್ದ ಸ್ಥಳದ ಬಳಿ ಇದ್ದ ಸಿಸಿ ಕೆಮರಾ ಆಪ್ ಆಗಿರುವುದು ಕಂಡುಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ.