Advertisement
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ 23 ನೇ ವಾರ್ಡಿನ ಡಿ.ಎಸ್. ಆನಂದ್‍ರೆಡ್ಡಿ ಹಾಗೂ 24 ನೇ ವಾರ್ಡಿನ ಕಾಂಗ್ರೆಸ್‍ನ ಅಂಬಿಕಾ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನ ಬಿ.ಸಿ.ಎಂ.ಎ. ವರ್ಗಕ್ಕೆ ಮೀಸಲಾಗಿದ್ದರಿಂದ 25 ನೇ ವಾರ್ಡಿನ ಜೆಡಿಎಸ್‍ನ ವೀಣಾರಾಮು ಅವರು ಏಕೈಕ ನಾಮಪತ್ರ ಸಲ್ಲಿಸಿದರು.
Related Articles
Advertisement
ಚುನಾವಣೆಯ ಫಲಿತಾಂಶದ ನಂತರ ಹೊರ ಬಂದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಅವರ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು ಇದೇ ವೇಳೆಯಲ್ಲಿ ತೆರೆದ ಕಾರಿಗೇರಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಅಭಿಮಾನಿಗಳಿಗೆ ಬಿಜೆಪಿ ಬಾವುಟ ಹಿಡಿದು ಅಭಿನಂದಿಸಿದರು.
3 ಕಾಂಗ್ರೆಸ್ ಸದಸ್ಯರು ಗೈರು: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅನೇಕ ರೀತಿಯ ನಾಟಿಕೀಯ ಬೆಳವಣಿಗೆಗಳು ಕಂಡು ಬಂದವು ಕಾಂಗ್ರೆಸ್ ಪಕ್ಷ ಬಹುಮತ ಇದ್ದರು ಸಹ ಅಧಿಕಾರವನ್ನು ಕಳೆದುಕೊಂಡು ಮುಖಭಂಗವನ್ನು ಅನುಭವಿಸುವಂತಾಯಿತು ಇದರ ಜೊತೆಗೆ ಕಾಂಗ್ರೆಸ್ ಪಕ್ಷದ 4 ಮಂದಿ ಸದಸ್ಯರು ಪಕ್ಷೇತರ ಸದಸ್ಯನಿಗೆ ಬೆಂಬಲ ಸೂಚಿಸಿ ಅಚ್ಚರಿ ವ್ಯಕ್ತಪಡಿಸಿದರಲ್ಲದೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‍ನ 3 ಮಂದಿ ಸದಸ್ಯರು ಗೈರು ಹಾಜರಾಗುವ ಮೂಲಕ ಗಮನ ಸೆಳೆದರು.
ಜೆಡಿಎಸ್‍ಗೆ ಒಲಿದ ಅದೃಷ್ಠ: ರಾಜಕೀಯದಲ್ಲಿ ಯಾರು ಯಾರಿಗೂ ಶತ್ರು ಅಲ್ಲ ಮಿತ್ರನೂ ಅಲ್ಲ ಎಂಬುದು ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಾಕ್ಷಿಯಾಯಿತು ಕೇವಲ 2 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಪಕ್ಷದ ವೀಣಾರಾಮು ಅವರಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೇರಲು ಬೆಂಬಲಿಸಿ ಸುಲುಭವಾಗಿ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡರು ನಗರಸಭೆಯ ಚುನಾವಣೆಯಲ್ಲಿ ಕೇವಲ ಜೆಡಿಎಸ್ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲಿಸಿ ಹೊಸ ಪದ್ದತಿಗೆ ನಾಂದಿಹಾಡಿದರು.
ನಿಷೇದಾಜ್ಞೆ ಉಲಂಘನೆ: ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಬಾರದೆಂದು ತಾಲೂಕು ದಂಡಾಧಿಕಾರಿಗಳು ನಗರಸಭೆಯ ಸುತ್ತಮುತ್ತಲಿನ 2 ಕಿಮಿ ಪ್ರದೇಶದಲ್ಲಿ ನಿಷೇದಾಜ್ಞೆ ಆದೇಶವನ್ನು ಜಾರಿಗೊಳಿಸಿದರು ಆದರೇ ಚುನಾವಣೆಯ ವೇಳೆಯಲ್ಲಿ ನಿಷೇದಾಜ್ಞೆಯನ್ನು ಸ್ಪಷ್ಟವಾಗಿ ಉಲಂಘಿಸಿದ್ದು ವಿಶೇಷವಾಗಿತ್ತು.
ಸಾಮಾಜಿಕ ಅಂತರಕ್ಕೆ ತಿಲಾಂಜಲಿ: ನಗರಸಭೆಯ ಚುನಾವಣೆಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಂಭ್ರಮದ ಭರದಲ್ಲಿ ಸಾಮಾಜಿಕ ಅಂತರವನ್ನು ಮರೆತುಬಿಟ್ಟರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು.
ಪೋಲಿಸರ ಸರ್ಪಗಾವಲು: ಚುನಾವಣೆ ವೇಳೆಯಲ್ಲಿ ಹೈಡ್ರಾಮಗಳು ಮತ್ತು ನಾಟಿಕೀಯ ಬೆಳವಣಿಗೆಗಳು ನಡೆಯಬಹುದೆಂದು ಶಂಕಿಸಿ ಒಂದು ಕಡೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಮತ್ತೊಂದಡೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಹೆಜ್ಜೆಹೆಜ್ಜೆಗೂ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು.