Advertisement
ನಗರಸಭೆಯಲ್ಲಿ ಒಟ್ಟು 35 ಮತಗಳಿದ್ದವು. 31 ನಗರಸಭಾ ಸದಸ್ಯರು,ಸಂಸದ ಡಾ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಮತ್ತು ಇಬ್ಬರು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರ ಮತವಿತ್ತು.
Related Articles
ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಸೀತಾರಾಂ ಅವರು ಮತದಾನ ಮಾಡಲು ಅರ್ಹರಲ್ಲ ಎಂದು ಸಂಸದ ಡಾ. ಸುಧಾಕರ್ ಬೆಂಬಲಿಗರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮತದಾನಕ್ಕೆ ಅವಕಾಶ ಮಾಡಿಕೊಟ್ಟು ಚುನಾವಣೆ ಮುಗಿದರೂ ಫಲಿತಾಂಶ ರಿಟ್ ಅರ್ಜಿಯ ತೀರ್ಪಿಗೆ ಒಳಪಟ್ಟಿರುವುದಾಗಿ ಆದೇಶಿಸಿದೆ. ಚುನಾವಣೆ ಮುಗಿದರೂ ಚುನಾವಣಾಧಿಕಾರಿ ಅಧಿಕೃತ ಫಲಿತಾಂಶ ಪ್ರಕಟ ಮಾಡಿಲ್ಲ.
Advertisement
ಬಿಜೆಪಿಗರ ವಿಜಯೋತ್ಸವಅಧಿಕಾರ ಸಿಕ್ಕಿರುವುದು ತಿಳಿಯುತ್ತಿದ್ದಂತೆ ಡಾ.ಸುಧಾಕರ್ ಸೇರಿ ಬಿಜೆಪಿ ಸದಸ್ಯರು, ವಿಜಯೋತ್ಸವ ಆಚರಿಸಿದರು. ಈ ವೇಳೆ ನಗರಸಭೆ ಆವರಣದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಸೇರಿ 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರದೀಪ್ ಈಶ್ವರ್ ಕೆಂಡಾಮಂಡಲ ; ಪ್ರತಿಜ್ಞೆ!!
ಅಧಿಕಾರ ಕಳೆದುಕೊಂಡ ಬಳಿಕ ಕೆಂಡಾಮಂಡಲವಾದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲೇ ಡಾ.ಸುಧಾಕರ್ ವಿರುದ್ಧ ಕಿಡಿ ಕಾರಿದರು. ‘ಅವನಪ್ಪ ಬಂದರೂ ನನ್ನನ್ನೂ ಏನೂ ಮಾಡಲು ಆಗುವುದಿಲ್ಲ. ಅವನ ಕೋಟೆಯಲ್ಲೇ ಅವನನ್ನು ಹೊಡೆದಿದ್ದೇನೆ. ಕೋವಿಡ್ ಕಳ್ಳನನ್ನು ಜೈಲಿಗೆ ಕಳುಹಿಸದೆ ವಿರಮಿಸುವುದಿಲ್ಲ’ ಎಂದು ಕಿಡಿ ಕಾರಿದರು. ನಗರಸಭೆ ಚುನಾವಣೆಗೆ 7-8 ಕೋಟಿ ರೂಪಾಯಿ ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಲಾಗಿದೆ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಸುಧಾಕರ್ ಹರ್ಷ
‘ಅಧಿಕಾರ ಸಿಕ್ಕಿರುವುದು ಖಚಿತವಾಗುತ್ತಿದಂತೆ ಮಾತನಾಡಿದ ಡಾ.ಸುಧಾಕರ್ ‘ನಮ್ಮ ಸದಸ್ಯರನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಲು ಭಾರೀ ಪ್ರಯತ್ನ ಮಾಡಿದರು. ಪ್ರದೀಪ್ ಈಶ್ವರ್ ಉಡಾಫೆ ಮಾತುಗಳು, ದ್ವೇಷದ ರಾಜಕಾರಣ ನನಗೆ ಹೂಮಾಲೆಯಾಗಿ ನನ್ನ ಕೊರಳಿಗೆ ಬಿದ್ದಿದೆ. ಇನ್ನೂ ಮೂರು ವರ್ಷ ಹೀಗೆ ಮಾಡಲಿ ಆಮೇಲೆ ರಾಜ್ಯ, ದೇಶದಲ್ಲಿ ಎಲ್ಲೂ ಅವರಿಗೆ ಅವಕಾಶ ಇಲ್ಲ’ ಎಂದರು.