Advertisement
ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕಾರ್ಯಕ್ರಮದಡಿಯಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಆರಂಭಿಸಿರುವ ಫ್ಲೋರೋಸಿಸ್ ಪುರ್ನವಸತಿ ಕೇಂದ್ರಕ್ಕೆ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರೋಗಪೀಡಿತರಲ್ಲಿ ಮನವಿ ಮಾಡಿದರು.
Related Articles
ವಿತರಿಸಲಾಗಿದೆ ಎಂದರು.
Advertisement
ಪುನರ್ವಸತಿ ಕೇಂದ್ರದ ಉಪಯೋಗಗಳನ್ನು ಈ ಭಾಗದ ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಫ್ಲೋರೋಸಿಸ್ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆ ಯಾಗಿದ್ದು, ಕೆಲವು ಸ್ಥಳಗಳಲ್ಲಿ ಗಂಭೀರವಾದ ಪರಿಣಾಮ ಬೀರುತ್ತದೆ.
ದಿನನಿತ್ಯ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಫ್ಲೋರೋಸಿಸ್ ಅಂಶ ಅಂದರೆ ಒಂದು ಪಿ.ಪಿ.ಎಂ (10 ಲಕ್ಷದಲ್ಲಿ ಒಂದು ಭಾಗ)ಗಿಂತಲೂ ಅಧಿಕವಾಗಿದ್ದರೆ ಫ್ಲೋರೋಸಿಸ್ ಕಾಯಿಲೆ ಉಂಟಾಗುತ್ತದೆ.
ಫ್ಲೋರೋಸಿಸ್ ರೋಗದಲ್ಲಿ ದಂತ, ಮೂಳೆಗಳ, ದೇಹದ ಇತರೆ ಭಾಗಗಳ ಫ್ಲೋರೋಸಿಸ್ ಎಂಬ ಮೂರು ವಿಧಾನಗಳಲ್ಲಿ ಬರುತ್ತದೆ. ದೃಢಪಟ್ಟ ಮೂಳೆ ಪ್ರಕರಣಗಳ ಹಾಗೂ ಸಂಧಿ ನೋವಿನ ಪ್ರಕರಣಗಳ ಜೀವನ ಗುಣಮಟ್ಟ ಹೆಚ್ಚಿಸಲು ಹಾಗೂ ರೋಗಪ್ರೇರಿತ ಅಂಗವೈಕಲ್ಯವನ್ನು ಕಡಿಮೆ ಮಾಡುವ ಸಲುವಾಗಿ ರಾಜ್ಯದಲ್ಲೇ ಮೊದಲ ಫ್ಲೋರೋಸಿಸ್ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಮೂರು ಹಂತ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ ಮಾತನಾಡಿ, ಮೂಳೆಗಳ ಫ್ಲೋರೋಸಿಸ್ ಚಿಕ್ಕವರುಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಮೊದಲನೇ ಹಂತದಲ್ಲಿ ಮೂಳೆಗಳ ನೋವು, ಕೀಲುಗಳ ಬಿಗಿತ, ಎರಡನೇ ಹಂತದಲ್ಲಿ ನಾಶಕಾರಿ ಫ್ಲೋರೋಸಿಸ್ ದೀರ್ಘಕಾಲದ ಕೀಲು ನೋವು, ನರಗಳ ಎಳೆತ, ಉದ್ದ ಮೂಳೆಗಳ ನೋವು, ಮೂರನೇ ಹಂತದಲ್ಲಿ ಸುಕ್ಕುಗಟ್ಟಿಸುವ ಫ್ಲೋರೋಸಿಸ್ ಬರುತ್ತದೆ. ಇದು ಕತ್ತಿನ ಮೂಳೆ, ಬೆನ್ನಿನ ಮೂಳೆ, ಎಲುಬುಗಳ ಬಾಗುವಿಕೆ, ಸ್ನಾಯುಗಳ ಎಳೆತ ಹಾಗೂ ಸೆಳೆತ ಮತ್ತು ನರಗಳ ತೊಂದರೆ, ಬೆನ್ನು ಮೂಳೆಗಳ ಸಂಕುಚಿತವಾಗುತ್ತವೆ. ಈ ಹಂತಗಳಲ್ಲಿ ಡಯಟ್ ಎಡಿಟಿಂಗ್ ಹಾಗೂ ಕೌನ್ಸಿಲಿಂಗ್ ಸಮೇತ ಪೂರಕ ಮಾತ್ರೆಗಳಾದ ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಸಿ ಜೊತೆಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡುವುದರಿಂದ ಫ್ಲೋರೋಸಿಸ್ ಪೀಡಿತ ರೋಗಿಯ ಜೀವನ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಹಾಗೂ ಫ್ಲೋರೋಸಿಸ್ ರೋಗ ಪ್ರೇರಿತ ಅಂಗಕಲತೆಯನ್ನು ತಡೆಗಟ್ಟಬಹುದು ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ತಾಪಂ ಇಒ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.