Advertisement
ಹಾಲು ಉತ್ಪಾದನೆಯಲ್ಲಿ ಚೇತರಿಕೆ: ಸದ್ಯ ಮಳೆಗಾಲ ಶುರುವಾಗುತ್ತಿದ್ದಂತೆ ಹಾಲು ಉತ್ಪಾದನೆಯಲ್ಲಿ ಚೇತರಿಕೆ ಕಂಡುಹೈನುಗಾರರು ನಿಟ್ಟುಸಿರು ಬಿಡುವಂತಾಗಿದೆ. ಬೇಸಿ ಗೆಯಲ್ಲಿ ಜಿಲ್ಲೆಯ ಹಾಲಿನ ಉತ್ಪಾ ದನೆ ಪ್ರತಿ ನಿತ್ಯ ಸರಾಸರಿ 3.40 ಲಕ್ಷ ಲೀ.ಗೆ ಕುಸಿದಿತ್ತು. ಇದು ಪರೋಕ್ಷ ವಾಗಿ ರೈತರ ಆದಾಯದ ಮೇಲೆ ದುಷ್ಪರಿಣಾಮ ಬೀರಿತ್ತು. ಹೈನು ದ್ಯೋವನ್ನೆ ನಂಬಿ ಜೀವನ ನಡೆಸುವ ರೈತರಿಗೆ ಹಾಲು ಉತ್ಪಾದನೆ ಕುಸಿತದಿಂದ ಬೇಸಿಗೆ ಕಳೆಯು ವವರೆಗೂ ಸಂಕಷ್ಟದಲ್ಲಿ ಜೀವನ ನಡೆಸಬೇಕಿತ್ತು.
Related Articles
Advertisement
ಕೋಚಿಮುಲ್ ವತಿಯಿಂದ ಶೇ. 4 ಪ್ಯಾಟ್, 8.5 ಎಸ್‌ಎನ್‌ಎಫ್ ಇದ್ದರೆ ರೈತರು ಪೂರೈಸುವ ಪ್ರತಿ ಲೀ.ಹಾಲಿಗೆ 33.90 ರೂ. ದರ ನೀಡಲಾಗುತ್ತಿದೆ. ಶೇ.4ಕ್ಕಿಂತ ಅಧಿಕ ಪ್ಯಾಟ್ ಇರುವ ಪ್ರತಿ ಲೀ.ಹಾಲಿಗೆ ಇನ್ನೂ ಹೆಚ್ಚಿನ ದರ ಸಿಗುತ್ತದೆ. ಕಡಿಮೆ ಇದ್ದರೆ ದರ ಕೂಡ ಕಡಿಮೆ ಆಗುತ್ತದೆ. ಒಟ್ಟಾರೆ ಜಿಲ್ಲೆಯ ರೈತರಿಗೆ ಸರ್ಕಾರದ ಪ್ರೋತ್ಸಾಹ ಹೊರತುಪಡಿಸಿ ಪ್ರತಿ ಲೀ.ಹಾಲಿಗೆ 33.90 ರೂ. ನೀಡಲಾಗುತ್ತಿದೆ.
ಪ್ರತಿ ಲೀ.ಗೆ ಕನಿಷ್ಠ 50 ರೂ. ಕೊಡಬೇಕು
ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿದಿತ್ತು. ಆದರೆ ಈಗ ಮಳೆಗಾಲ ಆರಂಭವಾಗಿ ರುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ರೈತರಿಗೆ ಪ್ರತಿ ಲೀ.ಹಾಲಿಗೆ ಕನಿಷ್ಠ 50 ರೂ. ನಿಗದಿಪಡಿಸಬೇಕು. ಬೂಸು, ಚಕ್ಕೆ ಮತ್ತಿತರ ಪಶು ಆಹಾರ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ.
ಬೇಸಿಗೆಯಲ್ಲಿ ಕೇವಲ 3.40 ಲಕ್ಷ ಲೀ. ಹಾಲು ಮಾತ್ರ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತಿತ್ತು. ಮಳೆಗಾಲ ಶುರುವಾದ ಬಳಿಕ ಹಾಲಿನಉತ್ಪಾದನೆಯಲ್ಲಿ ಏರಿಕೆ ಕಂಡಿದ್ದು ನಿತ್ಯ ಸರಾಸರಿ 3.90 ಲಕ್ಷ ಲೀ.ಹಾಲು ಚಿಮೂಲ್‌ಗೆ ಸರಬರಾಜು ಆಗುತ್ತಿದೆ.
●ಗುರುಮೂರ್ತಿ, ಪ್ರಭಾರಿ ಎಂಡಿ,
ಚಿಮೂಲ್ ಚಿಕ್ಕಬಳ್ಳಾಪುರ