Advertisement

Chikkaballapur: ಜಿಲ್ಲೆಯಲ್ಲಿ ಅಕ್ರಮ-ಸಕ್ರಮ: ತಿರಸ್ಕೃತ ಅರ್ಜಿಗಳೇ ಹೆಚ್ಚು!

02:47 PM Sep 23, 2023 | Team Udayavani |

ಚಿಕ್ಕಬಳ್ಳಾಪುರ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಅವಕಾಶ ಕಲ್ಪಿಸಿ ಸಾರ್ವಜನಿಕರಿಂದ ಸ್ಪೀಕರಿಸಿದ್ದ ಅರ್ಜಿಗಳ ಪೈಕಿ ತಿರಸ್ಕೃತಗೊಳಿಸಿದ ಅರ್ಜಿಗಳೇ ಹೆಚ್ಚಾಗಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ.

Advertisement

ಜಿಲ್ಲಾಡಳಿತ ಇಲ್ಲಿವರೆಗೂ ಜಿಲ್ಲೆ ಅಕ್ರಮ ಸಕ್ರಮ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 10,568 ಹಾಗೂ ನಗರ ಪ್ರದೇಶದಲ್ಲಿ 2,233 ಸೇರಿ ಒಟ್ಟು 12,804 ಅರ್ಜಿಗಳನ್ನು ಸ್ಪೀಕರಿಸಿತ್ತು. ಆದರೆ ಅವುಗಳ ಪೈಕಿ ನಗರ, ಗ್ರಾಮೀಣ ಭಾಗದಲ್ಲಿ ಸಕ್ರಮಗೊಳಿಸಿದ ಅರ್ಜಿಗಳ ಸಂಖ್ಯೆ ಬರೀ 3,767 ಅರ್ಜಿಗಳು ಮಾತ್ರ ಉಳಿದ ಪೈಕಿ ಬರೋಬ್ಬರಿ 8,075 ಅರ್ಜಿಗಳು ತಿರಸ್ಕೃತಗೊಂಡಿವೆ. ಏನಿದು ಅಕ್ರಮ ಸಕ್ರಮ?: 2015 ರ ಪೂರ್ವದಲ್ಲಿ ಅನಧಿಕೃತವಾಗಿ ಸರ್ಕಾರಿ ಜಮೀನುಗಳಲ್ಲಿ ಯಾರಾದರೂ ಮನೆ ನಿರ್ಮಿಸಿಕೊಂಡಿದ್ದಲ್ಲಿ ಅವುಗಳನ್ನು ಸಕ್ರಮಗೊಳಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 94ಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಅದರಂತೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 10,568 ಅರ್ಜಿಗಳನ್ನು ಸ್ಪೀಕರಿಸಿದ್ದು. ಆ ಪೈಕಿ 6,187 ಅರ್ಜಿಗಳು ತಿರಸ್ಕೃತಗೊಂಡಿದ್ದು ಕೇವಲ 3,505 ಅರ್ಜಿಗಳು ಮಾತ್ರ ಸಕ್ರಮಗೊಳಿಸಲಾಗಿದೆ. ಉಳಿದಂತೆ 876 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಇನ್ನೂ ನಗರ ಭಾಗದಲ್ಲಿ ಒಟ್ಟು 2,236 ಅರ್ಜಿಗಳು ಅಕ್ರಮ ಸಕ್ರ,ಮ ಯೋಜನೆಯಡಿ ಸಲ್ಲಿಕೆ ಆಗಿದ್ದು, ಆ ಪೈಕಿ ಬರೀ 262 ಅರ್ಜಿಗಳು ಮಾತ್ರ ಸಕ್ರಮಗೊಳಿಸಲಾಗಿದ್ದು ಉಳಿದ ಅರ್ಜಿಗಳಲ್ಲಿ 1,888 ಅರ್ಜಿಗಳು ತಿರಸ್ಕೃತಗೊಳಿಸಲಾಗಿದೆ. ಬಾಕಿ ಇನ್ನೂ 86 ಅರ್ಜಿಗಳು ಇವೆಯೆಂದು ಜಿಲ್ಲಾಡಳಿತ ಕಂದಾಯ ಇಲಾಖೆ ಸಚಿವರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ

– ಕಾಗತಿ ನಾಗರಾಜಪ್ಪ

 

Advertisement
Advertisement

Udayavani is now on Telegram. Click here to join our channel and stay updated with the latest news.

Next