Advertisement

ಮನೆ ಬಾಗಿಲಿಗೆ ಚಿಕ್ಕ ಮೇಳ

11:08 AM Jun 06, 2018 | Team Udayavani |

ಪುತ್ತೂರು: ಯಕ್ಷಗಾನವನ್ನು ಪ್ರತಿ ಮನೆಮನೆಗೆ ತಲುಪಿಸುವ ದಿಶೆಯಲ್ಲಿ ಮನೆ ಬಾಗಿಲಿಗೆ ತೆರಳಿ ಪ್ರದರ್ಶನ ನೀಡುತ್ತಿರುವ ಚಿಕ್ಕಮೇಳದ ತಿರುಗಾಟಕ್ಕೆ ಮಂಗಳವಾರ ಸಂಜೆ ಪುತ್ತೂರಿನಲ್ಲಿ ಚಾಲನೆ ನೀಡಲಾಯಿತು. 

Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಮುಂಭಾಗ ಯಕ್ಷಗಾನ ಪ್ರದರ್ಶನ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕನ್ಯಾನದ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಕೃಪಾಶ್ರಿತ ಮನೆ ಮನೆ ಯಕ್ಷಗಾನ ತಂಡ ಮುಂದಿನ ಆರು ತಿಂಗಳು ಪುತ್ತೂರಿನ ನೆಹರೂನಗರ ಆಸುಪಾಸು ತಿರುಗಾಟ ನಡೆಸಲಿದೆ.

ತಂಡದಲ್ಲಿ 7 ಕಲಾವಿದರಿದ್ದು, ದೇವಿಪ್ರಸಾದ್‌ ಆಚಾರ್ಯ ಭಾಗವತರಾಗಿ, ಸುಕುಮಾರ್‌ ಬಲ್ಲಾಳ್‌ ಮದ್ದಳೆಯಲ್ಲಿ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ರಕ್ಷಿತ್‌ ಕಾವೂರ್‌ ಹಾಗೂ ಅಕ್ಷಯ್‌ ಕಾರ್ಕಳ ಕಾಣಿಸಿಕೊಳ್ಳಲಿದ್ದಾರೆ. ಜಗದೀಶ್‌ ಕನ್ಯಾನ ವ್ಯವಸ್ಥಾಪಕರಾಗಿ ಹಾಗೂ ವರುಣ್‌, ಅಕ್ಷಯ್‌ ಸಹಕಾರ ನೀಡಲಿದ್ದಾರೆ.

ದಿನಕ್ಕೆ 15ರಿಂದ 20ರಷ್ಟು ಮನೆಗಳಿಗೆ ಇವರು ಭೇಟಿ ನೀಡಲಿದ್ದಾರೆ. ಮುಂದಿನ ದೀಪಾವಳಿವ ರೆಗೂ ಇವರ ತಿರುಗಾಟ ಮುಂದುವರಿಯಲಿದೆ. ಕಳೆದ ವರ್ಷ 5 ತಂಡವಿದ್ದ ಈ ಮೇಳದಲ್ಲಿ, ಈ ವರ್ಷ 8 ತಂಡಗಳಾಗಿವೆ. ಜಿಲ್ಲೆಯಾದ್ಯಂತ ಆಯ್ದ ಗ್ರಾಮೀಣ ಭಾಗಕ್ಕೆ ತೆರಳಿ ಪ್ರದರ್ಶನ ನೀಡುತ್ತಿದ್ದಾರೆ. ಮನೆಯವರು ನೀಡಿದ ಕಾಣಿಕೆಯನ್ನು ಸಂಗ್ರಹಿಸಿ, ಬಡವಿದ್ಯಾರ್ಥಿಗಳಿಗೆ, ಬಡವರಿಗೆ ಸಹಾಯ ನೀಡುತ್ತಾ ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next