Advertisement

ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಬಿಜೆಪಿ ವಿಧಾನ ಪರಿಷತ್ ಸದಸ್ಯ Y A.ನಾರಾಯಣಸ್ವಾಮಿ ಆಗ್ರಹ

10:02 PM Jul 08, 2021 | Team Udayavani |

ಶಿಡ್ಲಘಟ್ಟ  : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಗೊಂಡಿರುವ ಹಿನ್ನೆಲೆಯಲ್ಲಿ ಅನ್‍ಲಾಕ್-03 ಜಾರಿಗೊಳಿಸಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಿರುವ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಲು ಸಹ ಸರ್ಕಾರ ಅನುಮತಿ ನೀಡಬೇಕೆಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ತಿನ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.

Advertisement

ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಶಾಲೆಯಲ್ಲಿ ಡಾ.ವೈ.ಎ.ಎನ್. ಹಾಗೂ ಚಿದಾನಂದ್ ಎಂ.ಗೌಡ ಅವರ ಬಳಗದಿಂದ ಅನುದಾನರಹಿತ ಶಿಕ್ಷಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು ಕೊರೊನಾ ಸೋಂಕಿನ ಪ್ರಭಾವದಿಂದ ಅನೇಕ ಶಿಕ್ಷಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಸಂಬಂಧಗಳು ನಾಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿ ರಾಜ್ಯಾದ್ಯಂತ 27 ಸಾವಿರ ಖಾಸಗಿ ಶಾಲೆಗಳ ಶಿಕ್ಷಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ಜನತಾ ಕರ್ಫಯೂ ಮತ್ತು ಲಾಕ್‍ಡೌನ್ ಜಾರಿಗೊಳಿಸಿತ್ತು ಪ್ರಸ್ತುತ ಕೋವಿಡ್-19 ಪಾಸಿಟಿವ್ ದರ ಕಡಿಮೆಯಾಗಿದ್ದರಿಂದ ಅನ್‍ಲಾಕ್-03 ರ ಮೂಲಕ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಆದರೇ ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ತಕಾರರು ತೆಗೆಯುವುದು ಸೂಕ್ತವಲ್ಲ ಸರ್ಕಾರ ಕೂಡಲೇ ಶಾಲೆಗಳನ್ನು ಆರಂಭಿಸಿ ಮಕ್ಕಳಿಗೆ ಶಿಸ್ತುಬದ್ದ ಶಿಕ್ಷಣದ ವ್ಯವಸ್ಥೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ : ಕೋವಿಡ್ ಸಮಸ್ಯೆ ಎದುರಿಸಲು 23,000 ಕೋಟಿ ಪ್ಯಾಕೇಜ್ : ನೂತನ ಆರೋಗ್ಯ ಸಚಿವರ ಕ್ವಿಕ್ ಆ್ಯಕ್ಶನ್

ಆನ್‍ ಲೈನ್-ಆಫ್‍ಲೈನ್ ಪ್ರಯೋಜನವಿಲ್ಲ: ಕೊರೊನಾ ಸೋಂಕಿನ ನೆಪದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ತರಗತಿಗಳನ್ನು ನಡೆಸುವ ವ್ಯವಸ್ಥೆ ಜಾರಿಯಲ್ಲಿದೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಮಕ್ಕಳಿಗೆ ಶಾಲೆಯಲ್ಲಿ ಶಿಸ್ತು ಬರುತ್ತದೆ ಆನ್‍ಲೈನ್ ಮತ್ತು ಆಫ್‍ಲೈನ್‍ನಿಂದ ಮೌಲ್ಯಾಧಾರಿತ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ ಕೋವಿಡ್-19 ಮಾರ್ಗಸೂಚಿಗಳನ್ನು ಕಠಿಣವಾಗಿ ಜಾರಿಗೊಳಿಸಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

ದೇಶದ ಮಾದರಿ ಯೋಜನೆ: ಕೊರೊನಾ ಸಂಕಷ್ಟದಲ್ಲಿರುವ ಸಿಲುಕಿದ ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ಒದಗಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಮನವಿಗೆ ಸ್ಪಂದಿಸಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಅತಿ ಶೀಘ್ರದಲ್ಲಿ ಶಾಲಾ ಶಿಕ್ಷಕರ ಖಾತೆಗಳಿಗೆ ಹಣ ಜಮಾ ಆಗಲಿದ್ದು ಈ ನಿಟ್ಟಿನಲ್ಲಿ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಇದರಲ್ಲಿ ಗೋಲ್‍ಮಾಲ್ ಮಾಡಿದರೆ ಮೊದಲು ನರಕಕ್ಕೆ ಹೋಗ್ತಾರೆ ಜೊತೆಗೆ ತಲೆದಂಡ ಖಾತ್ರಿಯೆಂದು ಎಚ್ಚರಿಸಿದರು.

ಆಯುಷ್ಮಾನ ಕಾರ್ಡ್ ವಿತರಣೆ: ದೇಶದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಅದೇ ರೀತಿಯಲ್ಲಿ ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್ ನೀಡಲು ಈಗಾಗಲೇ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದು ಅತಿ ಶೀಘ್ರದಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಘೋಷಣೆ ಮಾಡಲಿದೆಯೆಂದು ಭರವಸೆ ನೀಡಿದರು.

ನಾನು ಮತ್ತು ಎಂಎಲ್ಸಿ ಚಿದಾನಂದ ಎಂ ಗೌಡ ಅವರು ಶಿಕ್ಷಕರು ಮತ್ತು ಪದವಿಧರ ಕಲ್ಯಾಣಕ್ಕಾಗಿ ಜೋಡೆತ್ತುಗಳಂತೆ ಕಾರ್ಯನಿರ್ವಹಿಸುತ್ತೇವೆ ಡಿಕೆ ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿಗಳಂತೆ ಅಲ್ಲವೆಂದು ವ್ಯಂಗ್ಯವಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರದ್ದುಗೊಳಿಸಲು ಆಗ್ರಹಿಸಿದ ಕನ್ನಡ ಚಳುವಳಿ ವಾಟಾಲ್ ಪಕ್ಷದ ವಾಟಾಳ್ ನಾಗರಾಜ್ ವಿರುಧ್ಧ ವಾಗ್ದಾಳಿ ನಡೆಸಿದ ವೈ.ಎ.ಎನ್ ಡೋಂಗಿ ಬುದ್ದಿಜೀವಿಗಳ ಮಾತುಗಳಿಗೆ ಮರಳಾಗದೆ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಚಿದಾನಂದ್ ಎಂ.ಗೌಡ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಸುಲಿಗೆ ಮಾಡುತ್ತಾರೆ ಎಂಬುದು ಸುಳ್ಳು ಕೆಲವರು ಇರಬಹುದು ಇಲ್ಲ ಅನ್ನುವುದಕ್ಕೆ ಆಗುವುದಿಲ್ಲ ಆದರೇ ಎಲ್ಲರನ್ನು ಒಂದೇ ದೃಷ್ಠಿಯಿಂದ ನೋಡಬಾರದು ವಿಧಾನಪರಿಷತ್ತಿನ ಸದಸ್ಯರಾಗಿ 9 ತಿಂಗಳ ನಂತರ ಕ್ಷೇತ್ರಕ್ಕೆ ಬಂದಿಕ್ಕೆ ಮತದಾರರಲ್ಲಿ ಕ್ಷೆಮೆಯಾಚಿಸಿ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರ ಧಾವಿಸಿದೆ ಅದೇ ರೀತಿಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸಹ ಸಹಕಾರ ನೀಡಬೇಕೆಂದರು.

ಮಾಜಿ ಶಾಸಕ ಎಂ.ರಾಜಣ್ಣ, ರಾಜ್ಯ ಅನುದಾನಿತ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಗೋಪಿನಾಥ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಂಪಣ್ಣ, ತಾಲೂಕು ಅಧ್ಯಕ್ಷ ಗೋಪಿನಾಥ್, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಮಹದೇವ, ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿಸಿ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.

ಹಸು ಹಾಲು ಕೊಡುವುದನ್ನು ನಿಲ್ಲಿಸಿದ ತಕ್ಷಣ ಅದನ್ನು ಕಸಾಯಿಖಾನೆಗೆ ತಳ್ಳುವುದು ಸರಿಯೇ? ಯೆಂದು ಶಾಸಗಿ ಶಾಲಾ ಆಡಳಿತ ಮಂಡಳಿಯವರ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು, ಎಲ್ಲವನ್ನು ಅನ್‍ಲಾಕ್ ಮಾಡಿದ್ದೀವಿ ಎಲ್ಲಾ ಓಪನ್‍ಯಿದೆ ಆದರೇ ಶಾಲೆ ಮಾತ್ರ ಓಪನ್ ಆಗಬಾರದಂತೆ ಇದು ಯಾವ ನ್ಯಾಯವೆಂದು ಪ್ರಶ್ನಿಸಿದ ಅವರು ಕೆಲವು ಡೋಂಗಿ ಸಾಹಿತಿಗಳಿದ್ದಾರೆ ಸಮಾಜವನ್ನು ಉತ್ತರದಾಯತ್ವವಾಗಿ ತೆಗೆದುಕೊಂಡಿದ್ದಾರೆ ವಾಟಾಳ ನಾಗರಾಜ್ ಎಂಬಂತಹ ವಿಡಂಬಡಣೆಯುಳ್ಳ ವ್ಯಕ್ತಿ ಪರೀಕ್ಷೆ ಮಾಡಬಾರದೆಂದು ಇಲ್ಲದಿದ್ದರೆ ಧರಣಿ ಮಾಡುತ್ತೇನೆ ಎಂದು ಹೇಳುತ್ತಾರೆ ಅವರ ಮೊಮ್ಮಕ್ಕಳಿಗೆ ಎಕ್ಸಾಮ್ ಮಾಡದಿದ್ದರೇ ಗೊತ್ತಾಗುತ್ತದೆ ಅವರ ಮಕ್ಕಳು ಶಾಲಾ ಕಾಲೇಜಿಗೆ ಹೋಗಿದ್ದಾರಾಯೆಂದು ನೋಡಿಕೊಂಡು ಬನ್ನಿ ಹರಿಕಥೆ ದಾಸರು ಬದನೆಬಾಯಿ ಭಾಷಣ ಮಾಡದಂಗೆ ಸ್ಟೇಜ್‍ನಲ್ಲಿ ಭಾಷಣ ಮಾಡುವುದು ಅಲ್ಲ ಇವತ್ತು ಹಳ್ಳಿಯಲ್ಲಿ ಮಕ್ಕಳ ಗತಿ ಏನಾಗಿದೆ ಕೂಲಿ ಹೋಗುತ್ತಿದ್ದಾರೆ ಬಾಲ ಕಾರ್ಮಿಕರ ಸಂಖ್ಯೆ ಜಾಸ್ತಿಯಾಗಿದೆ ಮಾನಸಿಕವಾಗಿ ಎಲ್ಲೂ ಒಂದು ಕಡೆ ಈ ಶಿಕ್ಷಣ ಬೇಡವೆಂದು ಆನ್‍ಲೈನ್ ಕ್ಲಾಸೆಸ್ ಹೋಗೋಣವೆಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದರು.

ಇದನ್ನೂ ಓದಿ : ಪಶ್ಚಿಮ ಬಂಗಾಳದ ಜನರು ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಭಯಭೀತರಾಗಿದ್ದಾರೆ : ಜಾನ್ ಬಾರ್ಲಾ

Advertisement

Udayavani is now on Telegram. Click here to join our channel and stay updated with the latest news.

Next