Advertisement

ಚಿಕ್ಕರಾಯಪ್ಪ ಅಮಾನತುಆದೇಶ ರದ್ದು?

11:16 AM Jun 03, 2017 | Team Udayavani |

ಬೆಂಗಳೂರು: ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿದ್ದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ರದ್ದು ಪಡಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Advertisement

ನೋಟು ಅಪಮೌಲ್ಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ.30ರಂದು ಚಿಕ್ಕರಾಯಪ್ಪ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು.ಈ ವೇಳೆ ಅಕ್ರಮ ಹಣ ಸಂಗ್ರಹವನ್ನು ಪತ್ತೆ ಹಚ್ಚಿದ್ದರು. ಇದು ಸಾಕಷ್ಟು ಚರ್ಚೆಗೆ ಒಳಗಾಗಿ ಕಟು ಟೀಕೆ ವ್ಯಕ್ತವಾದಾಗ ಸರ್ಕಾರ ಚಿಕ್ಕರಾಯಪ್ಪ ಅವರ ವಿರುದ್ಧ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿತ್ತು. 

ಸರ್ಕಾರದ ನಿಯಮಾವಳಿ ಪ್ರಕಾರ ನೌಕರರ ಅಮಾನತು ಆದೇಶ 6 ತಿಂಗಳಿಗೆ ಸೀಮೀತವಾಗಿರುತ್ತದೆ. ಅಷ್ಟರೊಳಗೆ ವಿಚಾರಣೆ ನಡೆಸಿ ವರದಿ ನೀಡಬೇಕು. ನಿಗದಿತ ಸಮಯದಲ್ಲಿ ವರದಿ ನೀಡಲು ವಿಫ‌ಲವಾದಲ್ಲಿ ಸಹಜವಾಗಿಯೇ ಅಮಾನತು ಆದೇಶ ರದ್ದಾಗುತ್ತದೆ. ಚಿಕ್ಕರಾಯಪ್ಪ ಪ್ರಕರಣದಲ್ಲಿ ಸಹ ಸರ್ಕಾರ ಅವರನ್ನು ಅಮಾನತು ಮಾಡಿ ಆರು ತಿಂಗಳು ಆಗಿದ್ದರಿಂದ ಅವರ ಅಮಾನತು ಆದೇಶ ತೆರವುಗೊಂಡಿದೆ ಎಂದು ಹೇಳಲಾಗಿದೆ. ತಮ್ಮ ಮೇಲೆ ಯಾವುದೇ ಗುರುತರ ಆರೋಪಗಳನ್ನು ಸಾಬೀತು ಪಡಿಸಲು ತನಿಖಾ ಸಂಸ್ಥೆಗಳು ವಿಫ‌ಲವಾದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ರದ್ದು ಪಡಿಸಬೇಕೆಂದು ಚಿಕ್ಕರಾಯಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next