Advertisement
ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಕಛೇರಿಯ ಸಭಾಂಗಣದಲ್ಲಿ ನಡೆದ ಸರ್ಕಾರಿ ವಾಹನ ಚಾಲಕರ ಸಂಘದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ರಾಜ್ಯ ಸಂಘದ ಮಾರ್ಗದರ್ಶನದಂತೆ ಜಿಲ್ಲಾ ಮತ್ತು ತಾಲೂಕು ಸಂಘಗಳು ಸಕ್ರಿಯವಾಗಿ ಕೆಲಸ ಮಾಡಿದಾಗ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ನಾನು ಅಧ್ಯಕ್ಷನಾದ ನಂತರ ಸಂಘಟನೆ ಮತ್ತು ಹೋರಾಟದ ಮೂಲಕ ಸರ್ಕಾರಿ ವಾಹನ ಚಾಲಕರಿಗೆ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ನೀಡಲಾಗಿದೆ ಎಂದರು.
ಮಂಡ್ಯ ಜಿಲ್ಲಾ ಸಂಘದ ಅಧ್ಯಕ್ಷರಾದ ಆನಂದ್ ಮಾತನಾಡಿ, ಸಂಘಟನೆಗಳಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಯಾವುದೆ ಜಾತಿ, ಬೇಧ ಮಾಡದೆ ನಮಗೆ ದೊರೆತ ಅವಕಾಶವನ್ನು ಅತ್ಯಂತ ಜವಾಬ್ದಾರಿಯಾಗಿ ನಿರ್ವಹಿಸಿ ಇತರರಿಗೆ ಆದರ್ಶವಾಗಿರಬೇಕು ಎಂದರು.
ನೂತನ ಜಿಲ್ಲಾಧ್ಯಕ್ಷ ಎಂ.ಪಿ. ಗೋಪಾಲ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಂಘಕ್ಕೆ ನಿವೇಶನವಿದ್ದು, ನನ್ನ ಅವಧಿಯಲ್ಲಿ ಸಮುದಾಯ ಭವನ ನಿರ್ಮಿಸಲು ಹೆಚ್ಚಿನ ಶ್ರಮ ಹಾಕುತ್ತೇನೆ. ಜಿಲ್ಲೆಯ ಎಲ್ಲ ವಾಹನ ಚಾಲಕ ಮಿತ್ರರು ಮತ್ತು ಸದಸ್ಯರು ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಿ ತಮ್ಮ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತಿಗೊಂಡ ಸರ್ಕಾರಿ ವಾಹನ ಚಾಲಕರನ್ನು ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಜಿ. ಹಾಲೇಶ್, ರಾಜ್ಯ ಸಂಘದ ಖಜಾಂಚಿ ಚೆಲುವರಾಜ್, ಸಂಚಾಲಕ ರಮೇಶ್, ಜಿಲ್ಲಾಕಾರ್ಯದರ್ಶಿ ರಮೇಶ್, ಸದಸ್ಯರಾದ ಶ್ಯಾಮ್‌ಸುಂದರ್, ಸೋಮಶೇಖರ್, ಶಂಕರೇಗೌಡ, ಜಾಫರ್, ಅಜ್ಮುಲಖಾನ್, ಅಬೂಬ್ಬಕರ್, ರಾಮು, ಶಶಿಕುಮಾರ್, ಹರೀಶ್ ಉಪಸ್ಥಿತರಿದ್ದರು.