ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆಯ ಆರ್ಭಟ ಮುಂದುವರೆದಿದ್ದು, ಸಖರಾಯಪಟ್ಟಣದ ಅಯ್ಯನಕೆರೆ ಕೋಡಿ ಬಿದ್ದು ಕೆರೆಯ ನೀರು ಜಮೀನುಗಳಿಗೆ ನುಗ್ಗಿ ಜಮೀನು ಜಲಾವೃತಗೊಂಡಿರುವ ಘಟನೆ ಜಿಲ್ಲೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೇತುವೆಯ ಕಾಮಗಾರಿ ಅಪೂರ್ಣವಾಗಿದ್ದು, ಇದರಿಂದ ಪಿಳ್ಳೇನಹಳ್ಳಿ ಗ್ರಾಮದ ಬಳಿ ಕೆರೆಯ ನೀರು ನುಗ್ಗಿ ರೈತರಿಗೆ ಸಂಕಷ್ಟದಲ್ಲಿದ್ದಾರೆ. ಹಳ್ಳದ ಅಂಚಿನ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ನಾಲ್ಕೈದು ಅಡಿ ನೀರು ತುಂಬಿ ಅಡಿಕೆ ತೋಟಗಳು ಮುಳುಗಡೆಯಾಗಿದೆ.
ಇದನ್ನೂ ಓದಿ: ಬಂಟ್ವಾಳ : ಕಮರಿಗೆ ಬಿದ್ದ ಕಾರು, 6 ತಿಂಗಳ ಮಗು ಸೇರಿ ಕಾರಿನಲ್ಲಿದ್ದವರು ಪವಾಡಸದೃಶ ಪಾರು
ಮಳೆಯ ಕಾಟದಿಂದ ಜಿಲ್ಲೆಯ ತರೀಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದ ರಸ್ತೆಗಳು ಆರ್ಭಟಕ್ಕೆ ಕೆಸರಗದ್ದೆಯಂತಾಗಿದ್ದು, ಶಾಲಾ ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಗಿದೆ.
ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವಾರು ಮನೆಗಳು ಕುಸಿದು ಬಿದ್ದಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬರಿಗೆ ಗ್ರಾಮದಲ್ಲಿ ಮಳೆಯ ಅವಾಂತರಕ್ಕೆ ಬುಧವಾರ ಮತ್ತೊಂದು ಮನೆಗೆ ಹಾನಿಯಾಗಿದೆ.
ವನಜಾಕ್ಷಿ ಮೊಟಯ್ಯ ಎಂಬುವರ ಮನೆ ಇದಾಗಿದ್ದು, ಮಳೆಗೆ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು,ಗೋಡೆಯು ಕುಸಿದು ಬಿದ್ದಿದೆ.