Advertisement

ಕೋವಿಡ್ ಉದಾಸೀನ ಸಲ್ಲ: ಚಂದ್ರಪ್ಪ

06:08 PM Apr 22, 2020 | Naveen |

ಚಿಕ್ಕಜಾಜೂರು: ಮುಂದುವರೆದ ರಾಷ್ಟ್ರಗಳಾದ ಅಮೇರಿಕಾ, ಫ್ರಾನ್ಸ್‌, ಇಟಲಿಯಲ್ಲಿ ಕೋವಿಡ್ ಸೋಂಕಿನ ಹತೋಟಿಯ ಉದಾಸೀನತೆಯಿಂದ ದಿನ ನಿತ್ಯ ಹೆಣಗಳ ರಾಶಿ ಬೀಳುತ್ತಿವೆ. ಅಂತಹ ತಪ್ಪನ್ನು ನಾವು ಮಾಡಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಚ್ಛತೆ ಬಗ್ಗೆ ಗಮನ ಹರಿಸಿ ಸರ್ಕಾರದ ನಿಯಮಗಳನ್ನು ಅನುಸರಿಸಿದರೆ ಮಹಾಮಾರಿ ಕೋವಿಡ್ ಅನ್ನು ಹಿಮ್ಮೆಟ್ಟಿಸುವಲ್ಲಿ ಯಶ ಗಳಿಸುತ್ತೇವೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ಬಿ. ದುರ್ಗ ಹೋಬಳಿಯ ಅಂದನೂರು, ಮುತ್ತಗದೂರು, ಬಿ. ದುರ್ಗ, ಚಿಕ್ಕಜಾಜೂರು ಗ್ರಾಮ ಯತ್‌ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ಚರಂಡಿ, ರಸ್ತೆಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತಾ ಕಾರ್ಮಿಕರಿಗೆ ಉತ್ತಮವಾದ ಮಾಸ್ಕ್, ಕರಗವಚ, ಕಾಲುಗಳಿಗೆ ಶೂಗಳನ್ನು ಕೊಡಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಅ ಧಿಕಾರಿಗಳು ಈ ಭಾಗದಲ್ಲಿರುವ ಎಲ್ಲಾ ಗ್ರಾಮಗಳ ಮೇಲೆ ನಿಗಾ ವಹಿಸಬೇಕು. ಅನಾವಶ್ಯಕವಾಗಿ ವಾಹನಗಳಲ್ಲಿ ಓಡಾಡುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕಜಾಜೂರು ಗ್ರಾಪಂ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು. ಪಿಎಸ್‌ಐ ಮೋಹನ್‌ಕುಮಾರ್‌, ಬಿಜೆಪಿ ತಾಲೂಕು ಬಿಜೆಪಿ ಯುವ ಘಟಕದ ಅಧ್ಯಕ್ಷ ಸಿದ್ದೇಶ್‌, ಗ್ರಾಪಂ ಅಧ್ಯಕ್ಷ ಡಿ.ಸಿ. ಮೋಹನ್‌, ಡಾ| ಪ್ರದೀಪ್‌, ರವಿಕುಮಾರ್‌, ಪಿಡಿಒ ಪುನೀತ್‌, ಹಾಲೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next