Advertisement

ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಸ್ಥಾನ: ಕೈಗೆ ಸೋಲು, ಬಂಡಾಯಕ್ಕೆ ಗೆಲುವು

02:36 PM Oct 23, 2019 | Suhan S |

ಚಿಕ್ಕಬಳ್ಳಾಪುರ: ಜಿಪಂ ಅಧ್ಯಕ್ಷ  ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪಿ.ಎನ್.ಪ್ರಕಾಶ್ ಗೆ ಸೋಲಾಗಿದ್ದು ಬಂಡಾಯ ಅಭ್ಯರ್ಥಿ ಚಿಕ್ಕ ನರಸಿಂಹಯ್ಯ ಗೆಲುವು ಸಾಧಿಸಿದ್ದಾರೆ.

Advertisement

ಒಟ್ಟು 28 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 21 , ಜೆಡಿಎಸ್ 5, ಸಿಪಿಎಂ ಹಾಗೂ ಬಿಜೆಪಿ ತಲಾ ಒಂದು ಸದಸ್ಯರನ್ನು ಹೊಂದಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಿಕ್ಕ ನರಸಿಂಹಯ್ಯ ಪರ 15, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪಿ.ಎನ್.ಪ್ರಕಾಶ್ ಪರ 13 ಮತಗಳು ಬಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಿಕ್ಕನರಸಿಂಹಯ್ಯ ಗೆಲುವು ಸಾಧಿಸಿದರು.

ಕಾಂಗ್ರೆಸ್ ಪಕ್ಷ ವಿಪ್ ಜಾರಿ ಮಾಡಿದ್ದರೂ 9 ಮಂದಿ ಸದಸ್ಯರು ವಿಪ್ ಉಲ್ಲಂಘಿಸಿ ಚಿಕ್ಕ ನರಸಿಂಹಯ್ಯ ಗೆ ಮತ ಹಾಕಿದರು. ಜೊತೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಿಕ್ಕ ನರಸಿಂಹಯ್ಯ ಗೆ ಜೆಡಿಎಸ್ 5 , ಸಿಪಿಎಂ 1 ಹಾಗೂ 1 ಬಿಜೆಪಿ ಸದಸ್ಯರು ಮತ ಹಾಕಿದರು.

ಶಿವಶಂಕರರೆಡ್ಡಿ ಬಣಕ್ಕೆ ಮುಖಭಂಗ:  ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಚುನಾವಣೆಯನ್ನು ಪ್ರತಿಷ್ಟೆಯಾಗಿ ಪರಿಗಣಿಸಿದ್ದ ಮಾಜಿ ಸಚಿವ ಶಿವಶಂಕರರೆಡ್ಡಿ, ಮಾಜಿ ಸಂಸದ ವೀರಪ್ಪ ಮೊಯ್ಲಿ, ಶಾಸಕರಾದ ವಿ.ಮುನಿಯಪ್ಪ. ಎಸ್.ಎನ್.ಸುಬ್ಬಾರೆಡ್ಡಿಗೆ ಮುಖಭಂಗ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next