ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಕಾದಾಟ ಶುರುವಾಗಿದೆ ಹಾಲಿ ಶಾಸಕ ವಿ ಮುನಿಯಪ್ಪ ಮತ್ತು ರಾಜೀವ್‌ಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಕ್ರಾಸ್ ಬಳಿ ಇರುವ ಕೃಷ್ಣ ಕನ್ವೆನÒನ್ ಹಾಲ್‌ನಲ್ಲಿ ನಡೆದ ಕೆಪಿಸಿಸಿ ವೀಕ್ಷರ ಮುಂದೆ 5 ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿಗಳ ಆಯ್ಕೆ ಸಮಿತಿಯ ಸದಸ್ಯರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ,ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯಿಲಿ, ಕೆಎಚ್ ಮುನಿಯಪ್ಪ ಅವರ ಮುಂದೆ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನವನ್ನು ಮಾಡಿ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಲಾಬಿ ಮಾಡಿದರು.
ಅದರಲ್ಲೂ ವಿಶೇಷವಾಗಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಹಾಲಿ ಶಾಸಕ ವಿ ಮುನಿಯಪ್ಪ ಮತ್ತು ಟಿಕೆಟ್ ಆಕಾಂಕ್ಷಿ ರಾಜೀವ್‌ಗೌಡ ಬೆಂಬಲಿಗರು ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ವಿ ಮುನಿಯಪ್ಪ ಅವರಿಗೆ ಮುಂಬರುವ ಚುನಾವಣೆಗೆ ಟಿಕೆಟ್‌ನೀಡಬೇಕೆಂದು ಅವರ ಅಪಾರ ಬೆಂಬಲಿಗರು ಪಕ್ಷದ ನಾಯಕರನ್ನು ಮನವಿ ಮಾಡಿದರು. ಇದೇ ವೇಳೆಯಲ್ಲಿ ಎಬಿಡಿ ಗ್ರೂಪಿನ ಅಧ್ಯಕ್ಷ ರಾಜೀವ್‌ಗೌಡ ಬೆಂಬಲಿಗರು ಸಹ ಮನವಿ ಮಾಡಿದರು.
ವೇಳೆಯಲ್ಲಿ ಶಾಸಕ ವಿ ಮುನಿಯಪ್ಪ ಮತ್ತು ರಾಜೇಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ನಂತರ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಗೊಳಿಸಿ ವಾಪಸ್ ಕಳಿಸಿದರು ಶಾಸಕ ವಿ ಮುನಿಯಪ್ಪ ಈಗಾಗಲೇ ತಮ್ಮ ಪುತ್ರ ಡಾಕ್ಟರ್ ಶಶಿಧರ್ ಮುನಿಯಪ್ಪ ಅವರನ್ನು ಉತ್ತರಾಕಾರಿಯಾಗಿ ಘೋಷಣೆ ಮಾಡಿದ್ದಾರೆ ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರ ಸ್ಪರ್ಧೆ ಮಾಡಲಿದ್ದು ಆತನಿಗೆ ನನ್ನಂತೆ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲವನ್ನು ನೀಡಬೇಕೆಂದು ಈಗಾಗಲೇ ಅವರು ಶಾಸಕರು ಕ್ಷೇತ್ರದ ಮತದಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ ಇಂದು ಡಾ.ಶಶಿಧರ್ ಮುನಿಯಪ್ಪ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಮುಖಂಡರು ಶಾಸಕ ವಿ,ಮುನಿ ಯಪ್ಪ ಅಥವಾ ಅವರ ಮಗನಿಗೆ ಟಿಕೆಟ್ ನೀಡ ಬೇಕೆಂದು ಆಗ್ರಹಿಸಿ ಶಕ್ತಿ ಪ್ರದರ್ಶನ ಮಾಡಿದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ, ಎಸ್‌ಎನ್ ಕ್ರಿಯಾ ಟ್ರಸ್ಟಿನ ಅಧ್ಯಕ್ಷ ಆಂಜಿನಪ್ಪ(ಪುಟ್ಟು), ಎಪಿಎಂಸಿ ಮಾಜಿ ನಿರ್ದೇಶಕ ದೊಗರನಾಯಕನಹಳ್ಳಿ ವೆಂಕಟೇಶ ಆಕಾಂಕ್ಷಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ ಮೂರು ಜನರು ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ ಒಂದೇ ಕ್ಷೇತ್ರದಲ್ಲಿ ನಾಲ್ವರು ಆಕಾಂಕ್ಷಿಯಾಗಿದ್ದು ಸಹಜವಾಗಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಹ ತಲೆ ನೋವು ಉಂಟಾಗಿದೆ.