ಚಿಕ್ಕಬಳ್ಳಾಪುರ: ಕೊರೊನಾ, ಒಮಿಕ್ರಾನ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಸತತ ಎರಡು ವಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದರಿಂದ ವ್ಯಾಪಾರ ವಹಿವಾಟು ಇಲ್ಲದೇ ಪರದಾಡುತ್ತಿದ್ದ ವ್ಯಾಪಾರಸ್ಥರು ಈ ವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಗಳು, ಮಾರುಕಟ್ಟೆಗಳಲ್ಲಿವ್ಯಾಪಾರ ವಹಿವಾಟು ಎರಡೂ ದಿನ ನಿರಾತಂಕವಾಗಿ ನಡೆದಿದೆ.
ಆದರೆ, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಮತ್ತೂಂದೆಡೆಹೋಟೆಲ್‌ಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆದಿಲ್ಲ ಎಂಬುದು ಮಾಲಿಕರ ಅಳಲಾಗಿತ್ತು.
ಆರೋಗ್ಯ ಕಾಪಾಡಿಕೊಳ್ಳಿ: ಕಳೆದ ಎರಡು ವಾರ ವೀಕೆಂಡ್ ಕರ್ಫ್ಯೂನಿಂದ ಸಂಕಷ್ಟಕ್ಕೆ ಸಿಲುಕಿದ ಜನ, ಈ ವಾರ ಮುಕ್ತವಾಗಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಸಾರ್ವಜನಿಕರು ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆದಿದ್ದಾರೆ ಎಂದು ಮೈಮರೆಯದೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾಮತ್ತು ತಾಲೂಕು ಆಡಳಿತದ ಅಧಿ ಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಯಾಣಿಕರೇ ಬರಲಿಲ್ಲ: ಜಿಲ್ಲೆಯಲ್ಲಿ ಎರಡು ಬಾರಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದರೂ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಬಸ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಆದರೂ, ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂದು ಸುದ್ದಿಕೇಳಿ ಸಹಜವಾಗಿ ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸಿಲ್ಲ. ಸಾರಿಗೆ ಸಂಸ್ಥೆಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯವೂ ಬಂದಿಲ್ಲ. ಒಟ್ಟಾರೆ ಬಸ್‌ಸಂಚಾರಕ್ಕೆ ತೊಂದರೆ ಆಗದೆ ಅನುಕೂಲ ಕಲ್ಪಿಸಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂಸಡಿಲಗೊಳಿಸಿದ ಪರಿಣಾಮ ವ್ಯಾಪಾರಸ್ಥರಿಗೆ ಒಂದುರೀತಿಯ ಖುಷಿ. ಸರ್ಕಾರ ಸೋಂಕು ನಿಯಂತ್ರಿಸಲುಕಠಿಣ ನಿಯಮ ಜಾರಿಗೊಳಿಸಲಿ. ಆದರೆ, ವೀಕೆಂಡ್ ಕರ್ಫ್ಯೂ,ಲಾಕ್‌ಡೌನ್‌ಗೆ ಅವಕಾಶ ಕಲ್ಪಿಸಬಾರದು. ಈಗಾಗಲೇ ಕಳೆದ 2 ವರ್ಷಗಳಿಂದ ಕೊರೊನಾಸೋಂಕಿನ ಪ್ರಭಾವದಿಂದ ಜನರ ನೆಮ್ಮದಿ ಭಂಗವಾಗಿದೆ.
ಮಾಡಿರುವ ಸಾಲ ತೀರಿಸಲಾದ ಪರಿಸ್ಥಿತಿಎದುರಿಸುತ್ತಿದ್ದೇವೆ ಎಂದು ಬೀದಿಬದಿಯವ್ಯಾಪಾರಸ್ಥರು ಮತ್ತು ನಾಗರಿಕರು ವಾರಾಂತ್ಯದ ಕರ್ಫ್ಯೂ ವಿಧಿಸಿರುವ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ದಿನನಿತ್ಯ ವ್ಯಾಪಾರ ಮಾಡಿ ಜೀವನ ನಡೆಸುವ ಜನರು ಕಷ್ಟದಲ್ಲಿ ಸಿಲುಕಿಬಾರದೆಂದು ವಾರಾಂತ್ಯದಕರ್ಫ್ಯೂವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಈಗ ಜನರು ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಸೋಂಕಿನ ಪ್ರಮಾಣ ಹೆಚ್ಚಾದರೆಮುಂದಿನ ದಿನಗಳಲ್ಲಿ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.