Advertisement

ಇಂದಿನಿಂದ ಚಿಗರಿ ಸಂಚಾರ

09:37 AM Jun 05, 2020 | Suhan S |

ಹುಬ್ಬಳ್ಳಿ: ಸರಕಾರದ ಅನುಮತಿಯಂತೆ ಜೂ. 5ರಿಂದ ಅವಳಿನಗರ ಮಧ್ಯೆ ಹವಾನಿಯಂತ್ರಿತ ಚಿಗರಿ ಬಸ್‌ ಸೇವೆ ಆರಂಭಿಸಲಾಗುತ್ತಿದೆ.

Advertisement

ಕೋವಿಡ್‌-19 ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಆರಂಭಿಕ ಹಂತದಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಹುಬ್ಬಳ್ಳಿಯ ಕೇಂದ್ರೀಯ ಬಸ್‌ ನಿಲ್ದಾಣ ಹಾಗೂ ಧಾರವಾಡದ ಬಿಆರ್‌ಟಿಎಸ್‌ ನಿಲ್ದಾಣಗಳ ಮಧ್ಯೆ ಜನದಟ್ಟಣೆಗೆ ಅನುಗುಣವಾಗಿ ಸೇವೆ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಸಂಚಾರಕ್ಕೆ ಅನುಗುಣವಾಗಿ ಕಾರ್ಯಾಚರಣೆ ಹೆಚ್ಚಿಸಲಾಗುವುದು. ಮಾ. 21ರ ನಂತರ ಮಾನ್ಯತೆ ಹೊಂದಿದ ಮಾಸಿಕ ಬಸ್‌ ಪಾಸ್‌ ಸ್ಮಾರ್ಟ್‌ ಕಾರ್ಡ್‌ ಹೊಂದಿದ ಪ್ರಯಾಣಿಕರು ಮುಂದಿನ ಮಾನ್ಯತಾ ಅವಧಿಗೆ ಪಿಒಎಸ್‌ ಕೌಂಟರ್‌ ಗಳಲ್ಲಿ ನೀಡುವ ಕ್ಯುಆರ್‌ ಮಾಸಿಕ ಪಾಸ್‌ ಟಿಕೆಟ್‌ಗಳನ್ನು ತಮ್ಮ ಸ್ಮಾರ್ಟ್‌ ಕಾರ್ಡ್‌ ತೋರಿಸಿ ಪ್ರತಿ ಪ್ರಯಾಣದ ಸಮಯದಲ್ಲಿ ಪಡೆದುಕೊಳ್ಳಬಹುದು. ಮಾನ್ಯತೆ ಇರುವ ಮಾಸಿಕ ಪಾಸುದಾರರಿಗೆ ಜೂ. 13ರ ವರೆಗೆ ಮಾತ್ರ ಕ್ಯುಆರ್‌ ಮಾಸಿಕ ಪಾಸ್‌ ಟಿಕೆಟ್‌ ವಿತರಿಸಲಾಗುವುದು. ಕೋವಿಡ್‌-19 ಹರಡುವುದನ್ನು ತಪ್ಪಿಸಲು ಹಾಗೂ ಸಮಯ ಉಳಿಸಲು ಇ-ಪರ್ಸ್‌ ಸ್ಮಾರ್ಟ್‌ ಕಾರ್ಡ್‌ಗಳನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದು ವಾಕರಸಾ ಸಂಸ್ಥೆ ಹು-ಧಾ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next