Advertisement

ಶಸ್ತ್ರಾಸ್ತ್ರ ಸ್ವಾವಲಂಬನೆಗೆ ಸಿದ್ಧರಾಗಿ; ವಿದೇಶಿ ಆಯುಧಗಳ ಮೇಲಿನ ಅತಿಯಾದ ಅವಲಂಬನೆ ಸರಿಯಲ್ಲ

08:34 AM May 12, 2020 | Hari Prasad |

ಹೊಸದಿಲ್ಲಿ: ವಿದೇಶಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ತರಿಸಿಕೊಳ್ಳಲು ನಾವೇನು ಪ್ರಪಂಚದಾದ್ಯಂತ ದಂಡ ಯಾತ್ರೆ ಕೈಗೊಳ್ಳುತ್ತಿಲ್ಲ, ಯಾರ ಮೇಲೂ ಯುದ್ಧ ಮಾಡುತ್ತಿಲ್ಲ.

Advertisement

ಹೀಗಾಗಿ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ‘ಮೇಕ್‌ ಇನ್‌ ಇಂಡಿಯ’ ಕಾರ್ಯಕ್ರಮವನ್ನು ಮುನ್ನೆಲೆಗೆ ತರುವ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಅಭಿಪ್ರಾಯಪಟ್ಟಿದ್ದಾರೆ.

‘ದ ಟೈಮ್ಸ್‌ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಶಸ್ತ್ರ ಪಡೆಗಳು ವಿದೇಶಿ ಶಸ್ತ್ರಾಸ್ತ್ರ ಗಳ ಮೇಲಿನ ಅತಿಯಾದ ಅವಲಂಬ ನೆಯಿಂದ ಹೊರಬಂದು, ದೇಶಿ ನಿರ್ಮಿತ ಆಯುಧಗಳನ್ನು ಬಳಸುವ ಮೂಲಕ ‘ಮೇಕ್‌ ಇನ್‌ ಇಂಡಿಯಾ’ ಕೇವಲ ಘೋಷಣೆಯಲ್ಲ ಎಂಬುದನ್ನು ಸಾಬೀತು ಪಡಿಸಬೇಕು.

ಕೋವಿಡ್ ವೈರಸ್ ಎಲ್ಲರನ್ನೂ ಬಾಧಿಸುತ್ತಿರುವ ಈ ಸಂದರ್ಭದಲ್ಲಿ ವಾಸ್ತವ ಅರಿತು, ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಅಗತ್ಯ ಮೀರಿ ಆಯುಧ ಆಮದು ಮಾಡಿಕೊಳ್ಳುವ ಬದಲು ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ಆಯುಧಗಳ ನಿರ್ಮಾಣ, ಅಭಿವೃದ್ಧಿ ಮತ್ತು ತಯಾರಿಕೆಗೆ ಒತ್ತು ನೀಡಬೇಕು ಎಂದಿದ್ದಾರೆ.

ಬಾಕಿ ಇರುವ ಯೋಜನೆಗಳು
– ಹೊಸ ಪೀಳಿಗೆಯ ಸ್ಟೆಲ್ತ್‌ ಜಲಾಂತರ್ಗಾಮಿಗಳು
– ಮೈನ್‌ಸ್ವೀಪರ್‌ಗಳು
– ಭೂ ಸೇನೆ ಯುದ್ಧ ವಾಹನಗಳು
– ಯುದ್ಧ ಸಾಮಗ್ರಿ ಸರಬರಾಜು ವಿಮಾನಗಳು
– ಯುದ್ಧ ವಿಮಾನಗಳು (ಫೈಟರ್‌ ಜೆಟ್‌)
– ಲಘು ಉಪಯೋಗದ ಹೆಲಿಕಾಪ್ಟರ್‌ಗಳು

Advertisement

ಮಾರುತಿ 800 ಕಾರನ್ನು ನಮ್ಮ ನೆಲದಲ್ಲೇ ನಿರ್ಮಿಸುವ ಮೂಲಕ ದೇಶಿ ಉತ್ಪಾದನೆ ಆರಂಭಿಸಿದ ಭಾರತ ಇಂದು ವಾಹನ ಉತ್ಪಾದನೆಯಲ್ಲಿ ವಿಶ್ವದ ಗಮನಸೆಳೆದಿದೆ. ಹಾಗೇ ಆಯುಧಗಳ ಉತ್ಪಾದನೆ, ನಿರ್ಮಾಣದಲ್ಲೂ ಸ್ವಾವಲಂಬನೆ ಸಾಧಿಸಬೇಕಿದೆ.
– ಜ. ಬಿಪಿನ್‌ ರಾವತ್‌, ರಕ್ಷಣಾ ಪಡೆಗಳ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next