ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಐಪಿಸ್ ಅಧಿಕಾರಿಗಳು ಸಹಿತ 134 ಮಂದಿ ಅಧಿಕಾರಿ-ಸಿಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಎ.2ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೋರಮಂಗಲದಲ್ಲಿರುವ 3ನೇ ಕೆಎಸ್‌ಆರ್‌ಪಿ ಪಡೆ ಆವರಣದಲ್ಲಿ ಆಯೋಜಿಸಲಾಗಿದೆ.
ಎಫ್ಎಸ್‌ಎಲ್‌ನ ನಿರ್ದೇಶಕ ಧರ್ಮೇಂದ್ರ ಕುಮಾರ್ ಮೀನಾ, ದಕ್ಷಿಣ ಸಂಚಾರ ವಿಭಾಗ ಡಿಸಿಪಿ ಎಂ.ಎಸ್. ಮೊಹಮ್ಮದ್ ಸುಜಿತ, ವಿವಿಐಪಿ ಸೆಕ್ಯೂರಿಟಿ ವಿಭಾಗದ ಡಿಸಿಪಿ ಎಚ್.ಮಂಜುನಾಥ್ ಬಾಬು, ಸಿಐಡಿ ಡಿವೈಎಸ್ಪಿ ಬಿ.ಎನ್.ಶ್ರೀನಿವಾಸ್, ರಾಜ್ಯ ಗುಪ್ತವಾರ್ತೆ(ಹು-ಧಾ) ಸಹಾಯಕ ನಿರ್ದೇಶಕ ಲಕ್ಷ್ಮಣ ನಾಯಕ್ ಶಿರ್ಕೊಳ್, ಬೆಳಗಾವಿ ಡಿಸಿಆರ್‌ಬಿ ಡಿವೈಎಸ್ಪಿ ವೀರೇಶ್ ಟಿ. ದೊಡ್ಡಮನಿ, ಕೆಎಸ್‌ಆರ್‌ಪಿ1ನೇ ಪಡೆ ಸಹಾಯಕ ಕಮಾಂಡೆಂಟ್ ಎಂ.ಜಿ.ಸುರೇಶ್, ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಪಡೆ ಸಹಾಯಕ ಕಮಾಂಡೆಂಟ್ ರಾಚಪ್ಪ ಬಿ.ಕಾಜಗರ್ ಸೇರಿ 134 ಮಂದಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.