Advertisement

ಮಂಗಳೂರು ಸರ್ಕಿಟ್ ಹೌಸ್‌ನಲ್ಲಿ  ಸಿಎಂ ವಾಸ್ತವ್ಯ

06:40 AM Jan 08, 2018 | Harsha Rao |

ಮಂಗಳೂರು: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ರವಿವಾರ ದ.ಕ. ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಗಳನ್ನು ಮುಗಿಸಿ ರಾತ್ರಿ ನಗರದ ಸಕೀìಟ್‌ ಹೌಸ್‌ನಲ್ಲಿ ವ್ಯಾಸ್ತವ್ಯ ಹೂಡಿದರು. 

Advertisement

ಮುಖ್ಯಮಂತ್ರಿಯಾದ ಬಳಿಕ ಸಿದ್ಧ ರಾಮಯ್ಯ ಅವರದು ಇದೇ ಮೊದಲ ಮಂಗಳೂರು ವಾಸ್ತವ್ಯ. ವೇಳಾಪಟ್ಟಿ ಪ್ರಕಾರ ಸಿಎಂ 7.50ಕ್ಕೆ ಸಕೀìಟ್‌ ಹೌಸ್‌ಗೆ ಆಗಮಿಸ ಬೇಕಿತ್ತಾದರೂ ಕಾರ್ಯಕ್ರಮ ಗಳು ತಡವಾದುದು ಹಾಗೂ ಮೃತರ ಮನೆ ಭೇಟಿಯಿಂದ ವಿಳಂಬವಾಗಿತ್ತು. 

ಸಿಎಂ ಭೋಜನ: ಸಿಎಂ ಅವರಿಗೆ ಮಂಗಳೂರಿನ ಪ್ರತಿಷ್ಠಿತ ತುಳುನಾಡ ಫುಡ್‌ ಕ್ಯಾಟರಿಂಗ್‌ ಅವರ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಸಕೀìಟ್‌ ಹೌಸ್‌ನಲ್ಲಿ ಅಪ್ಪೆ ಮಿಡಿ ಉಪ್ಪಿನಕಾಯಿ, ತೊಂಡೆ ಹಾಗೂ ಗೇರುಬೀಜ ಪಲ್ಯ, ನೀರು ದೋಸೆ-ನಾಟಿಕೋಳಿಯ ಗಸಿ, ಚಪಾತಿ-ಎಟ್ಟಿ ಗಸಿ, ಬೆಂಡೆಕಾಯಿ ಪುಳಿಮುಂಚಿ, ಅಂಜಲ್‌ ತವಾ, ಚಿಕನ್‌ ಬಿರಿಯಾನಿ, ಸಲಾಡ್‌, ಬಾಸ್ಮತಿ ಅನ್ನ, ಕುಚ್ಚಲಕ್ಕಿ ಅನ್ನ, ಸಾರು, ತೋವೆ, ಮೊಸರು, ಪಾಯಸ, ಐಸ್‌ಕ್ರೀಮ್‌, ಹಣ್ಣಿನ ಹೋಳುಗಳು, ಲೆಮನ್‌ ಟೀ ವ್ಯವಸ್ಥೆ ಮಾಡಲಾಗಿತ್ತು. 

ಜ. 8ರಂದು ಬೆಳಗ್ಗೆ ಸಿಎಂ ಅವರ ಉಪಾಹಾರಕ್ಕೆ ಇಡ್ಲಿ ವಡಾ, ಶೀರಾ ಉಪ್ಪಿಟ್ಟು , ನೀರ್‌ದೋಸೆ, ಚಹಾ-ಕಾಫಿ ವ್ಯವಸ್ಥೆ ಮಾಡ ಲಾಗಿದೆ. ಬೆಳಗ್ಗೆ 10ಕ್ಕೆ ಸಿಎಂ ಅವರು ಹೆಲಿಕಾಪ್ಟರ್‌ ಮೂಲಕ ಉಡುಪಿ ಜಿಲ್ಲೆಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next