Advertisement

Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

10:40 PM Feb 16, 2024 | Team Udayavani |

ರಾಜ್ಯ ಆಯವ್ಯಯದಲ್ಲಿ ಎಂದಿನಂತೆ ಬೆಂಗಳೂರು ಮಹಾನಗರಕ್ಕೆ ಸಿಂಹಪಾಲು ದೊರೆತಿದೆ. ಬಾಗಲಕೋಟೆ, ಹಾಸನ, ಕೋಲಾರ ಜಿಲ್ಲೆಗಳಿಗೆ ಅತ್ಯಂತ ಕಡಿಮೆ ಸೌಕರ್ಯಗಳನ್ನು ನೀಡಲಾಗಿದೆ. ಕೊಪ್ಪಳ, ಕಲಬುರಗಿ ಸೇರಿದಂತೆ ಇನ್ನಷ್ಟು ಜಿಲ್ಲೆಗಳಿಗೂ ಆದ್ಯತೆ ನೀಡಲಾಗಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು- ಮೈಸೂರು- ಮಂಡ್ಯ ಬಿಟ್ಟರೆ ಇನ್ನಿತರ ಪ್ರದೇಶಗಳಿಗೆ ಸಾಮಾನ್ಯ ಆದ್ಯತೆಗೆ ಮೀಸಲು ಮಾಡಲಾಗಿದೆ. ಈ ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ ಈ ಬಾರಿ ಕರಾವಳಿ ಭಾಗಕ್ಕೆ ಹೆಚ್ಚು ಮಾನ್ಯತೆ ನೀಡಿದಂತೆ ಕಾಣುತ್ತಿಲ್ಲ. ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ. ಬೆಂಗಳೂರು ನಗರದ ಒತ್ತಡವನ್ನು ನಿಭಾಯಿಸಲು ಜಿಲ್ಲಾಮಟ್ಟದಲ್ಲಿ ಟೌನ್‌ಶಿಪ್‌ ಸ್ಥಾಪನೆ ಹಾಗೂ ನಾವೀನ್ಯತಾ ಕೇಂದ್ರಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ.

Advertisement

ಬೆಳಗಾವಿ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-500 ಕೋಟಿ ವೆಚ್ಚದಲ್ಲಿ ವಿಟಿಯು ಅನ್ನು ಐಐಟಿ ಮಾದರಿ ಅಭಿವೃದ್ಧಿ
-ಖಾನಾಪುರದಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು
-ಗೋಕಾಕ್‌ ಜಲಪಾತ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ

ಗದಗ
-ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಶಿರಹಟ್ಟಿಯಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಡಿಯಾಕ್‌ ಯೂನಿಟ್‌ ಸ್ಥಾಪನೆ
-ರೋಣ ಮಲ್ಲಾಪುರದಲ್ಲಿ ರೈಲು ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ

ಕೊಪ್ಪಳ
-ಯಲಬುರ್ಗಾ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಯಲಬುರ್ಗಾ- ಕುಕನೂರಿನ 38 ಕೆರೆಗಳಿಗೆ ನೀರು
-ಕುಕನೂರು-ಯಲಬುರ್ಗಾಗಳಲ್ಲಿ ಕೆರೆ, ಬ್ರಿಡ್ಜ್ಗಳ ನಿರ್ಮಾಣ
-ಕೊಪ್ಪಳದ ತಳಕಲ್‌ನಲ್ಲಿ ಜಿಟಿಟಿಸಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
-ಹುಲಿಗೆಮ್ಮ ದೇಗುಲ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ

ಹುಬ್ಬಳ್ಳಿ-ಧಾರವಾಡ 
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಬೆಣ್ಣೆಹಳ್ಳದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಹು-ಧಾರವಾಡದಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ

Advertisement

ವಿಜಯನಗರ
-ಐಪಿಎಚ್‌ಎಲ್‌ ಪ್ರಯೋಗಾಲಯ ಸ್ಥಾಪನೆ
-ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.

ಉತ್ತರ ಕನ್ನಡ
-ಹೊನ್ನಾವರದ ಮಂಕಿ/ಕಾಸರಕೋಡದಲ್ಲಿ ಮೀನುಗಾರಿಕಾ ಸಂಶೋಧನೆ ಕೇಂದ್ರ ಸ್ಥಾಪನೆ
-ಮುರುಡೇಶ್ವರದಲ್ಲಿ ಮೀನುಗಾರಿಕೆ ಹೊರ ಬಂದರು ಸ್ಥಾಪನೆ
-ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಅಳವಡಿಕೆ ಕಾಮಗಾರಿ
-ದಾಂಡೇಲಿಯಲ್ಲಿ ಇಂಟರ್‌ ಪ್ರಿಟೇಷನ್‌ ಸೆಂಟರ್‌ಗಳನ್ನು ಜೆಎಲ್‌ಆರ್‌ ಸಂಸ್ಥೆ ಮೂಲಕ ನಿರ್ಮಾಣ

ಹಾವೇರಿ
-ರಾಣೆಬೆನ್ನೂರು ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ, ಮೆಗಾ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ
-ಹಿರೇಕೆರೂರಲ್ಲಿ ವಚನಕಾರ ಸರ್ವಜ್ಞನ ಸ್ಮಾರಕ ಅಭಿವೃದ್ಧಿಗೆ ಕ್ರಮ

ದಾವಣಗೆರೆ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಜಿಲ್ಲಾಸ್ಪತ್ರೆಯಲ್ಲಿ ಕಾಲೊ³àಸ್ಕೋಪಿ ಉಪಕರಣ ಖರೀದಿಗೆ ಒತ್ತು

ಶಿವಮೊಗ್ಗ
-ಸೋಗಾನೆಯಲ್ಲಿ ಆಹಾರ ಪಾರ್ಕ್‌ ನಿರ್ಮಾಣ, ಆಧುನಿಕ ಮೀನು ಮಾರುಕಟ್ಟೆ, ಐಪಿಎಚ್‌ಎಲ್‌ ಲ್ಯಾಬೊರೇಟರಿ ಸ್ಥಾಪನೆ
-ಸೊರಬ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಸ್‌/ಬ್ಯಾರೇಜ್‌
-ರೈಲು ಮೇಲು- ಕೆಳ ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ
-ಮಾಜಿ ಸಿಎಂ ಎಸ್‌.ಬಂಗಾರಪ್ಪನವರ ಸ್ಮಾರಕ ನಿರ್ಮಾಣ

ಉಡುಪಿ
-ಸ್ವರ್ಣ- ಸಿದ್ದಾಪುರ ಏತನೀರಾವರಿಗೆ ಒತ್ತು
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಜಿಲ್ಲಾಸ್ಪತ್ರೆಯಲ್ಲಿ ಕಾಲ್ಪೋಸ್ಕೋಪಿ ಉಪಕರಣ ಖರೀದಿಗೆ ಒತ್ತು
-ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

ಚಿಕ್ಕಮಗಳೂರು
-ಸ್ಪೈಸ್‌ ಪಾರ್ಕ್‌ ನಿರ್ಮಾಣ
-ಶೃಂಗೇರಿಯಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ಐಪಿಎಚ್‌ಎಲ್‌ ಪ್ರಯೋಗಾಲಯ ಸ್ಥಾಪನೆ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ

ದಕ್ಷಿಣ ಕನ್ನಡ
-ಮಂಗಳೂರಿನ ಮಾರುಕಟ್ಟೆಯಲ್ಲಿ ಕೃಷಿ ಸಂಕೀರ್ಣ ಸ್ಥಾಪನೆ
-ಮಂಗಳೂರಿನಲ್ಲಿ ಹಜ್‌ ಭವನ ನಿರ್ಮಾಣ
-ಮಂಗಳೂರು ಬಂದರಿನಿಂದ ಬೆಂಗಳೂರುವರೆಗೆ ಕಾರಿಡಾರ್‌
-ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ವಾಹನಗಳ ಡಿಜಿಟಲೀಕರಣ| ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ

ಹಾಸನ
-ಐಪಿಎಚ್‌ಎಲ್‌ ಪ್ರಯೋಗಾಲಯ ಸ್ಥಾಪನೆ
-ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ ಬಾಕಿ 30 ಕೋಟಿ ಬಿಡುಗಡೆ

ಕೊಡಗು
-ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಪಿ ಮಾದರಿ ಕಾರ್ಡಿಯಾಕ್‌ ಯೂನಿಟ್‌ ಆರಂಭ ಮತ್ತು ವೈರಲ್‌ -ರೀಸರ್ಚ್‌ ಮತ್ತು ಡಯಾಗ್ನಾಸ್ಟಿಕ್‌ ಲ್ಯಾಬೋರೇಟರಿ ಸ್ಥಾಪನೆ
-ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ
-ವಿರಾಜಪೇಟೆಯಲ್ಲಿ ಹೊಸ ಕೋರ್ಟ್‌ ಸಂಕೀರ್ಣ ನಿರ್ಮಾಣ

ಮೈಸೂರು
-ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಹುಣಸೂರಿನ ಮರದೂರು ಕೆರೆ ತುಂಬಿಸಲು ಒತ್ತು
-ವರುಣಾ ಕ್ಷೇತ್ರದ ನಾಲೆಗಳ ಅಭಿವೃದ್ಧಿ
-ಮಹಾರಾಣಿ ಕಾಲೇಜು ಹಾಸ್ಟೆಲ್‌ ಕಟ್ಟಡ ನಿರ್ಮಾಣ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಹ್ಯೂಮನ್‌ ಮಿಲ್ಕ್ ಬ್ಯಾಂಕ್‌ ಘಟಕ ಸ್ಥಾಪನೆ
-ಕೆ. ಆರ್‌. ಆಸ್ಪತ್ರೆ ಬಳಿ ಹೊರ ರೋಗಿ ವಿಭಾಗ ಕಟ್ಟಡ ನಿರ್ಮಾಣ
-ವರುಣಾದಲ್ಲಿ ಜಿಟಿಟಿಸಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
-ಪ್ರಖ್ಯಾತ ಲ್ಯಾನ್ಸ್‌ಡೌನ್‌ ಕಟ್ಟಡ ಮತ್ತು ದೇವರಾಜ ಅರಸು ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ
-ಕುಕ್ಕರಹಳ್ಳಿ ಬಳಿ ರೈಲು ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ನಂಜನಗೂಡಿನ ತಾ.ಬದನವಾಳಿನಲ್ಲಿ ಖಾದಿಗೆ ಪ್ರೋತ್ಸಾಹ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ
-ಕಬಿನಿಯಲ್ಲಿ ಇಂಟರ್‌ ಪ್ರಿಟೇಷನ್‌ ಸೆಂಟರ್‌ಗಳ ನಿರ್ಮಾಣ
-ಬಂಡೀಪುರದಲ್ಲಿ ಚಿರತೆ, ಆನೆ ಕಾರ್ಯಪಡೆ ರಚನೆ
-ಕೆ.ಆರ್‌.ನಗರ ಕೆಸ್ತೂರು ಕೊಪ್ಪಲು ಏತನೀರಾವರಿ

ಮಂಡ್ಯ
-ವಿ.ಸಿ. ಪಾರಂನಲ್ಲಿ ಕೃಷಿ ವಿವಿ ಸ್ಥಾಪನೆಗೆ ತಜ್ಞರ ಸಮಿತಿ ರಚನೆ
-ಕೆಆರ್‌ಎಸ್‌ ಉದ್ಯಾನ ವಿಶ್ವದರ್ಜೆಗೇರಿಸಲು ಒತ್ತು
-ಮಳವಳ್ಳಿ ಮಾದವ ಮಂತ್ರಿ ನಾಲೆ, ಮದ್ದೂರು ಕೆಮ್ಮಣ್ಣು ನಾಲೆ ಆಧುನೀಕರಣ
-ಕೆಆರ್‌ಎಸ್‌ ರಸ್ತೆಯಲ್ಲಿ ರೈಲುಗಳಿಗೆ ಸೇತುವೆ ನಿರ್ಮಾಣ
-ಮೈಶುಗರ್‌ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ

ಚಾಮರಾಜನಗರ
-ಯಳಂದೂರು 100 ಹಾಸಿಗೆ ತಾಲೂಕು ಆಸ್ಪತ್ರೆ ನಿರ್ಮಾಣ
-ಬಂಡೀಪುರದಲ್ಲಿ ಅರಿವು ಮೂಡಿಸಲು ಕೇಂದ್ರ ನಿರ್ಮಾಣ

ರಾಮನಗರ
-ಅರ್ಕಾವತಿ ನದಿ ತೀರ ಅಭಿವೃದ್ಧಿಗೆ ಒತ್ತು
-ಕನಕಪುರ ಹೆಗ್ಗನೂರು ಕೆರೆ ತುಂಬಿಸಲು ಯೋಜನೆ
-ಬಿಡದಿ ಮತ್ತು ಮಾಗಡಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ ಅಭಿವೃದ್ಧಿ
– ಚನ್ನಪಟ್ಟಣ-ಬೈರಾಪಟ್ಟಣ ರೈಲು ಮೇಲು ಹಾಗೂ ಕೆಳ ಸೇತುವೆಗಳ ನಿರ್ಮಾಣಕ್ಕೆ ಕ್ರಮ

ಬೆಂ. ಗ್ರಾಮಾಂತರ
-ಪೂಜೇನಹಳ್ಳಿಯಲ್ಲಿ ಆಹಾರ ಪಾರ್ಕ್‌ ನಿರ್ಮಾಣ
-ಆನೇಕಲ್‌, ಹೊಸಕೋಟೆ, ನೆಲಮಂಗಲದಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ಟೌನ್‌ಶಿಪ್‌ ಅಭಿವೃದ್ಧಿ
-ಶ್ರೀ ಘಾಟಿ ದೇಗುಲ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ

ಬಾಗಲಕೋಟೆ
-ಹುನಗುಂದದಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.
-ಕೆಎಸ್‌ಟಿಡಿಪಿಯಿಂದ ಐಹೊಳೆಯಲ್ಲಿ ಸುಸಜ್ಜಿತ ಹೋಟೆಲ್‌ ನಿರ್ಮಾಣ, ರೋರಿಚ್‌, ದೇವಿಕಾರಾಣಿ ಎಸ್ಟೇಟ್‌ -ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ

ವಿಜಯಪುರ
-ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್‌ ನಿರ್ಮಾಣ
-ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
-ಆಲಮಟ್ಟಿ ಒಳನಾಡು ಮೀನುಗಾರಿಕೆ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆ
-ಬಸವನ ಬಾಗೇವಾಡಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ
-ಸಿದ್ಧರಾಮೇಶ್ವರರ ಬದುಕು ಬರಹ ಅಧ್ಯಯನಕ್ಕಾಗಿ ಅಕ್ಕಮಹಾದೇವಿ ಮಹಿಳಾ ವಿವಿ ಅಧ್ಯಯನ ಪೀಠ ಸ್ಥಾಪನೆ
-ಕರೇಜ್‌ ನೀರು ವ್ಯವಸ್ಥೆ ತಾಂತ್ರಿಕ ನೆರವಿನೊಂದಿಗೆ ಪುನಶ್ಚೇತನ

ಬೀದರ
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-1 ಕೋಟಿ ವೆಚ್ಚದಲ್ಲಿ ನಾನಕ್‌ ಝೀರಾ ಸಾಹೇಬ್‌ ಗುರುದ್ವಾರದ ಅಭಿವೃದ್ಧಿ.
-ಬೀದರ್‌ ಹಾಗೂ ಬೆಂಗಳೂರು ನಡುವೆ ಕಾರಿಡಾರ್‌ ಅಭಿವೃದ್ಧಿ
-ಕರೇಜ್‌ ನೀರು ವ್ಯವಸ್ಥೆ ತಾಂತ್ರಿಕ ನೆರವಿನೊಂದಿಗೆ ಪುನಶ್ಚೇತನ
-ಹೊನ್ನಿಕೆರೆ ಮೀಸಲು ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು
-ಭಾಲ್ಕಿಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಡಿಜಿಟಲೀಕರಣ ಜಾರಿ

ಕಲಬುರಗಿ
-ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ-ಕಾಗಿಣಾ ನದಿಗಳ ನೀರು ತುಂಬಿಸಲು ಯೋಜನೆ
-ಚಿತ್ತಾಪುರ ಕೆರೆ, ಜೇವರ್ಗಿಯ ಬಾಂದೂರು ಕೆರೆ ತುಂಬಿಸಲು ಒತ್ತು
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-ಐಸಿಡಿಟಿ ಕೇಂದ್ರಗಳ ಬಲವರ್ಧನೆ
-ಕಲಬುರಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಘಟಕ ಸ್ಥಾಪನೆ
-ಜಿಟಿಟಿಸಿ ಬಹು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
-ಕಲಬುರಗಿಯಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ಕಲಬುರಗಿ ಮೆಗಾ ಟೆಕ್ಸ್‌ಟೈಲ್‌ ಯೋಜನೆಗೆ 50 ಕೋಟಿ ವೆಚ್ಚದಲ್ಲಿ ಪೂರಕ ಮೂಲ ಸೌಕರ್ಯ

ಯಾದಗಿರಿ
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ

ರಾಯಚೂರು
-ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-25ಕೋ. ವೆಚ್ಚದಲ್ಲಿ ಒಣಮೆಣಸಿನ ಕಾಯಿ ಮಾರುಕಟ್ಟೆ ನಿರ್ಮಾಣ
-ಚಿಕ್ಕಲಪರ್ವಿ ಬಳಿ ತುಂಗಭದ್ರಾ ನದಿಗೆ ಬಿಸಿಬಿ ನಿರ್ಮಾಣ, ಕುರ್ಡಿ ಕೆರೆ ತುಂಬಿಸಲು ಒತ್ತು
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-ಹ್ಯೂಮನ್‌ ಮಿಲ್ಕ್ ಬ್ಯಾಂಕ್‌ ಸ್ಥಾಪನೆ
-ನೂತನ ಜವುಳಿ ಪಾರ್ಕ್‌ ಸ್ಥಾಪನೆ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ
-ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಬಳಿ ಬ್ರಿಡ್ಜ್ /ಬ್ಯಾರೇಜ್‌ ನಿರ್ಮಾಣ

ಬಳ್ಳಾರಿ
-ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಹ್ಯೂಮನ್‌ ಮಿಲ್ಕ್ ಬ್ಯಾಂಕ್‌ ಘಟಕ ಸ್ಥಾಪನೆ
-ಸಂಡೂರಿನಲ್ಲಿ ಸ್ಕಿಲ್‌ ಅಕಾಡೆಮಿ ಸ್ಥಾಪನೆ
-ಜಿಟಿಟಿಸಿ ಕೇಂದ್ರ ಸ್ಥಾಪನೆ
-ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ಬಳ್ಳಾರಿಯಲ್ಲಿ ಜೀನ್ಸ್‌ ಅಪಾರೆಲ್‌ ಪಾರ್ಕ್‌,ಸಾಮಾನ್ಯ ಸೌಲಭ್ಯ ಕೇಂದ್ರ ಅಭಿವೃದ್ಧಿ
-10 ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ

ಚಿತ್ರದುರ್ಗ
-ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗದಲ್ಲಿ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆಗೆ ಒತ್ತು
-ವೈದ್ಯಕೀಯ ಕಾಲೇಜು, ವಸತಿ ಗೃಹಗಳ ಪೂರ್ಣಕ್ಕೆ ಕ್ರಮ
-ಜಿಟಿಟಿಸಿ ಕೇಂದ್ರ ಸ್ಥಾಪನೆ

ತುಮಕೂರು
-ಗುಬ್ಬಿಯ ಮಠದಹಳ್ಳಿ ಕುಡಿವ ನೀರು ಯೋಜನೆಗೆ ಒತ್ತು
-ಶಿರಾ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.
-ವಸಂತನರಸಾಪುರದಲ್ಲಿ ಇಂಟಿ ಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ತಂತ್ರಜ್ಞಾನಗಳಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ
-ಮಧುಗಿರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

ಚಿಕ್ಕಬಳ್ಳಾಪುರ
-ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ 2-ನೇ ಹಂತ ಅಭಿವೃದ್ಧಿ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಚಿಕ್ಕಬಳ್ಳಾಪುರದಲ್ಲಿ ರೈಲು ಮೇಲು- ಕೆಳ ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

ಕೋಲಾರ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಜಿಲ್ಲಾಸ್ಪತ್ರೆಯಲ್ಲಿ ಕಾಲೊ³àಸ್ಕೋಪಿ ಉಪಕರಣ ಖರೀದಿಗೆ ಒತ್ತು
-ಕೆಜಿಎಫ್ನಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ಆದಿಮ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗೆ ಅಗತ್ಯ ನೆರವು

ಬೆಂಗಳೂರು ನಗರ
-ದಾಸನಪುರದಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಕೆ.ಸಿ.ಜನರಲ್‌ ಆಸ್ಪತ್ರೆ ಬಳಿ ತಾಯಿ- ಮಗು ಆಸ್ಪತ್ರೆ ನಿರ್ಮಾಣ
-ಬೆಂ.ಪೂರ್ವದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಆರಂಭ
-ಡಾ. ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ
-ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಾಯೋಗಿಕ ಟನೆಲ್‌ ನಿರ್ಮಾಣ
-ಆರ್ಥಿಕ ಚಟುವಟಿಕೆಗೆ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಪರಿಕಲ್ಪನೆಗೆ ಒತ್ತು
-ಬಿಎಂಟಿಸಿಗೆ 1334 ಹೊಸ ಎಲೆಕ್ಟ್ರಿಕ್‌ ಬಸ್‌, 820 ಬಿಎಸ್‌-6 ಡಿಸೇಲ್‌ ಬಸ್‌ ಸೇರ್ಪಡೆ
-ಮಹಿಳೆಯರಿಗಾಗಿ ವೆಹಿಕಲ್‌ ಟ್ರ್ಯಾಕಿಂಗ್‌ ಮೊಬೈಲ್‌ ಆ್ಯಪ್‌ ವ್ಯವಸ್ಥೆ
-28 ಜಂಕ್ಷನ್‌ಗಳಲ್ಲಿ ಏರಿಯಾ ಟ್ರಾಫಿಕ್‌ ಸಿಗ್ನಲ್‌ ಕಂಟ್ರೋಲ್‌ ಸಿಸ್ಟಮ್‌ಗೆ ಒತ್ತು
-200 ಕೋಟಿ ವೆಚ್ಚದಲ್ಲಿ ಬಿಬಿಎಂಪಿಗೆ ಸೇರಿದ 110 ಗ್ರಾಮಗಳಿಗೆ ಕುಡಿವ ನೀರಿನ ಯೋಜನೆ
-ಸರ್ವಜ್ಞನಗರ ಕ್ಷೇತ್ರದಲ್ಲಿ ಸರ್ವಜ್ಞ ಉದ್ಯಾನ ಅಭಿವೃದ್ಧಿ
-ವಿದ್ಯುತ್‌ ಬೇಡಿಕೆ ನೀಗಿಸಲು ಸಬ್‌ಸ್ಟೇಷನ್‌ ಉನ್ನತೀಕರಣ
-ಬೆಂಗಳೂರು-ಮಂಡ್ಯ-ಮೈಸೂರು ಹೊರವಲಯದ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ
-ಕೇಂದ್ರದ ನೆರವಿನೊಂದಿಗೆ 233 ಕೋಟಿಯಲ್ಲಿ ವಿಜ್ಞಾನ ನಗರಿ ಸ್ಥಾಪನೆ
-ಬೆಂ. ಉತ್ತರ ತಾಲೂಕಿನಲ್ಲಿ ಕ್ರೀಡಾನಗರ ಸ್ಥಾಪನೆ
-ಬೆಂಗಳೂರಿನಲ್ಲಿ 4 ಕಡೆ ಅತ್ಯಾಧುನಿಕ ಕ್ರೀಡಾಸಂಕೀರ್ಣ ಸ್ಥಾಪನೆ
-ಪೊಲೀಸ್‌ ಸುಲಿವನ್‌ ಮೈದಾನದಲ್ಲಿ ಆಸ್ಟ್ರೋ ಟಫ್ì ಹಾಕಿ ಪ್ರಾಂಗಣ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next