Advertisement
ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆಯ ಉದ್ದೇಶ ಇದರದ್ದು.ಈ ವೇಳೆ ಅವರು ತಾವು ಓದಿದ, ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಸರಕಾರಿ ಶಾಲೆಯ ಮಕ್ಕಳೊಡನೆ ಸಂವಾದ ನಡೆಸಿದರು. ಹಾಗೆಯೇ ತಾವು ಓದಿದ ಶಾಲೆಗಳಿಗೆ 10 ಲಕ್ಷ ರೂ. ದೇಣಿಗೆ ನೀಡಿದರು.
– ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳಿಗೆ ಕೊಡುಗೆ ನೀಡುವುದೇ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಯೋಜನೆ.
-ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಿ, ಆ ಶಾಲೆಗಳನ್ನು ಶೈಕ್ಷಣಿಕ ಮತ್ತು ಭೌತಿಕವಾಗಿ ಬಲವರ್ಧನೆಗೊಳಿಸಲಾಗುತ್ತದೆ.
– ಶಾಲೆಗೆ ಅಗತ್ಯವಿರುವ ಗ್ರಂಥಾಲಯ, ಕ್ರೀಡಾಲಯ, ಪ್ರಯೋಗಾಲಯ,
ಸ್ಮಾರ್ಟ್ ಕ್ಲಾಸ್, ಇ ಕಲಿಕಾ ಕೇಂದ್ರ, ಪಾಠೊಪಕರಣ, ಪೀಠೊಪಕರಣ ಮುಂತಾದವುಗಳಿಗೆ ಹಳೆಯ ವಿದ್ಯಾರ್ಥಿಗಳ ನೆರವು ಪಡೆಯಲಾಗುತ್ತದೆ.