Advertisement

ಕನ್ನಡ ಬೆಳವಣಿಗೆಗೆ ಅಡ್ಡಿಪಡಿಸಿದರೆ ಸಹಿಸಲಾರೆ

06:15 AM Jan 23, 2018 | Team Udayavani |

ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಯಾರೇ ಅಡ್ಡಿಯಾದರೂ ಸಹಿಸುವುದಿಲ್ಲ. ಹೀಗೆ ಅಡ್ಡಿಪಡಿಸುವವರನ್ನು ಹೆಡೆಮುರಿ ಕಟ್ಟುವ ಶಕ್ತಿ ನಮಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

Advertisement

ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿದ ಸವಿನೆನಪಿಗೆ ನಿರ್ಮಿಸಲಾದ ಶತಮಾನೋತ್ಸವ ಭವನ ಉದ್ಘಾಟಿಸಿ ಅವರು ಮಾತನಾಡಿದರು.

“”ಜನರ ಹಿತ, ನಾಡಿನ ನೆಲ-ಜಲದ ರಕ್ಷಣೆ ನಮಗೆ ಮುಖ್ಯ. ಇದಕ್ಕೆ ಕೊಕ್ಕೆ ಹಾಕುವವರನ್ನು ಸಹಿಸುವುದಿಲ್ಲ. ಜನ ಹಿತ ಇದ್ದರೆ, ಅಧಿಕಾರಿಗಳ ಮಾತು ಕೇಳುವ ಪ್ರಮೇಯವೇ ಬರುವುದಿಲ್ಲ. ಅಧಿಕಾರಿಗಳು ಉಂಟುಮಾಡುವ ತೊಡಕುಗಳನ್ನು ನಿವಾರಿಸುವ ಶಕ್ತಿ ಜನಪ್ರತಿನಿಧಿಗಳಿಗೆ ಇದೆ. ಹಾಗಂತ, ಎಲ್ಲ ಅಧಿಕಾರಿಗಳೂ ಕೊಕ್ಕೆ ಹಾಕುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

19 ತಿಂಗಳಲ್ಲಿ 10 ಯೋಜನೆ: ಕಳೆದ 19 ತಿಂಗಳಲ್ಲಿ “ಕಾಯಕ ಪಥ’ದಡಿ 10 ಹೊಸ ಕಾರ್ಯಕ್ರಮಗಳನ್ನು
ಪರಿಷತ್ತು ಜಾರಿಗೊಳಿಸಿದೆ. ಸರ್ಕಾರದ ನೆರವಿನಿಂದ ಶತಮಾನೋತ್ಸವ ಭವನ ಕೂಡ ನಿರ್ಮಾಣ ಗೊಂಡಿದೆ.
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಪರಿಷತ್ತಿನ ಭವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಣಕಾಸಿನ ಭರವಸೆ ನೀಡಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಈಗ ನಿರ್ಮಿಸಲಾಗಿರುವ ಶತಮಾನೋತ್ಸವ ಭವನವು ಪರಿಷತ್ತಿನ ಹಿಂದಿನ ಅಧ್ಯಕ್ಷ ದಿವಂಗತ ಪುಂಡಲೀಕ ಹಾಲಂಬಿ ಅವರ ಕನಸಿನ ಕೂಸು. ಅಂದು ಅವರು ಬಿತ್ತಿದ ಬೀಜ ಈಗ ಭವನದ ರೂಪದಲ್ಲಿ ಬೆಳೆದುನಿಂತಿದೆ. ಇದರ ಶ್ರೇಯಸ್ಸು ಹಾಲಂಬಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

Advertisement

ಕಸಾಪ ಸಿಬ್ಬಂದಿ ಇನ್ನು ಸರ್ಕಾರಿ ನೌಕರರು: ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಯೂ ಇನ್ಮುಂದೆ ಸರ್ಕಾರದ
ಸಿಬ್ಬಂದಿ ಮತ್ತು ನೇಮಕಾತಿ ನಿಯಮಾವಳಿಗೆ ಒಳಪಡಲಿದ್ದಾರೆ. ಇದರಿಂದ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳು ಇವರಿಗೂ ದೊರೆಯಲಿವೆ ಎಂದು ಸ್ವತಃ ಸಿದ್ದರಾಮಯ್ಯ ಘೋಷಿಸಿದರು.

ಪರಿಷತ್ತಿನ ಸಿಬ್ಬಂದಿಯನ್ನು ಸಿಆಂಡ್‌ ಆರ್‌ ನಿಯಮಗಳ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಹೇಳಿದರು. ಪ್ರಸ್ತುತ ಧಾರವಾಡದ ವಿದ್ಯಾವರ್ಧಕ ಸಂಘ, ರಾಮನಗರದ ಜಾನಪದ ಪರಿಷತ್ತಿನ ಸಿಬ್ಬಂದಿಗೆ ಮಾತ್ರ ಈ ನಿಯಮಗಳು ಅನ್ವಯಿಸುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೂ ಇದನ್ನು ಅನ್ವಯಿಸಲಾಗುವುದು ಎಂದರು. ಇದರಿಂದ ಪರಿಷತ್ತಿನಲ್ಲಿ 50 ಜನ ಸಿಬ್ಬಂದಿ ಇದ್ದು, ಅವರೆಲ್ಲರಿಗೂ ಈ ನಿಯಮ ಅನ್ವಯ ಆಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next