Advertisement
ಸಿದ್ದರಾಮಯ್ಯ ಈ ಹಿಂದೆ ದ.ಕ., ಉಡುಪಿ ಜಿಲ್ಲೆಗಳಲ್ಲಿ ಹಲವು ಬಾರಿ ಪ್ರವಾಸ ಕೈಗೊಂಡಿದ್ದರೂ ವಾಸ್ತವ್ಯ ಹೂಡಿರಲಿಲ್ಲ. ಆದ್ದರಿಂದ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮುಂದಿನ ವಿಧಾನಸಭೆ ಚುನಾವಣೆಯ ಲೆಕ್ಕಾಚಾರವನ್ನು ಇರಿಸಿಕೊಂಡೇ ಅವರು ಮಂಗಳೂರು ಹಾಗೂ ಉಡುಪಿಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ತಂಗುತ್ತಾರೆ. ಜ. 8ರಂದು ಉಡುಪಿಗೆ ತೆರಳುತ್ತಾರೆ. ಮುಖ್ಯಮಂತ್ರಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ ಸಕೀìಟ್ ಹೌಸ್‌ನ ಹೊಸ ಕಟ್ಟಡವನ್ನು ಸಜ್ಜುಗೊಳಿಸಲಾಗುತ್ತಿದೆ. ಜ. 8ರಂದು ಉಡುಪಿ ಜಿಲ್ಲೆಯ ವಿವಿಧೆಡೆ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಬೈಂದೂರಿನ ಪ್ರೌಢ ಶಾಲೆಯ ಮುಂಭಾಗ ಸಾಧನಾ ಸಮಾವೇಶವು ಬೆಳಗ್ಗೆ 10.45ಕ್ಕೆ ಆರಂಭಗೊಳ್ಳಲಿದೆ. 490.97 ಕೋ.ರೂ. ಮೊತ್ತದ
ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ನಡೆಸಲಿದ್ದಾರೆ.ಮಧ್ಯಾಹ್ನ 2ಕ್ಕೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಒಟ್ಟು 509 ಕೋ.ರೂ. ಮೊತ್ತದ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ ಹಾಗೂ 72 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಕಾಪು ಕ್ಷೇತ್ರದಲ್ಲಿ ಸಂಜೆ 4ಕ್ಕೆ 445 ಕೋ. ರೂ. ವೆಚ್ಚದ ನಾನಾ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ಮಾಡಲಿದ್ದಾರೆ.
Related Articles
ಸಿದ್ದರಾಮಯ್ಯ ಜ. 4ರಿಂದ 9ರ ವರೆಗಿನ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದ.ಕ., ಉಡುಪಿ, ಮಡಿಕೇರಿ
ಜಿಲ್ಲೆಗಳಲ್ಲಿ ಪ್ರವಾಸ ಸಂದರ್ಭ ವಾಸ್ತವ್ಯಕ್ಕೆ ಸರಕಾರಿ ಅತಿಥಿ ಗೃಹಗಳನ್ನೇ ಆಯ್ಕೆ ಮಾಡಿದ್ದಾರೆ. ಈ ಮೂಲಕ ಸಂಪುಟದ ಇತರ ಸಚಿವರಿಗೆ ಹೊಸ ಮಾದರಿ ಹಾಕಿಕೊಟ್ಟಿದ್ದಾರೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮಂಗಳೂರಿಗೆ ಆಗಮಿಸಿ, ಸಕೀìಟ್ ಹೌಸ್‌ನಲ್ಲೇ ಉಳಿದುಕೊಂಡಿದ್ದರು.
Advertisement
ಮುಖ್ಯಮಂತ್ರಿಗಳ ರಾತ್ರಿಯ ಭೋಜನಕ್ಕೆ ಖಾದ್ಯಗಳ ಪಟ್ಟಿಯಲ್ಲಿ ಅಪ್ಪೆ ಮಿಡಿ ಉಪ್ಪಿನಕಾಯಿ, ತೊಂಡೆ ಹಾಗೂ ಗೇರುಬೀಜ ಪಲ್ಯ, ನೀರು ದೋಸೆ, ಚಪಾತಿ, ನಾಟಿಕೋಳಿಯ ಗಸಿ, ಚಪಾತಿ, ಮಟನ್ ಕೂರ್ಮಾ, ಎಟ್ಟಿ ಗಸಿ, ನಾಟಿಕೋಳಿಯ ಸುಕ್ಕ, ಬೆಂಡೆಕಾಯಿ ಪುಳಿಮುಂಚಿ, ಪಾಂಪ್ಲೆಟ್ ರವಾ ಫ್ರೈ, ಕಾಣೆ ರವಾ ಫ್ರೈ, ಚಿಕನ್ ಬಿರಿಯಾನಿ, ಸಲಾಡ್, ಬಾಸ್ಮತಿ ಅನ್ನ, ಕುಚುಲಕ್ಕಿ ಅನ್ನ, ಸಾರು, ತೋವೆ, ಮೊಸರು, ಐಸ್‌ಕ್ರೀಮ್, ಹಣ್ಣಿನ ಹೋಳುಗಳು, ಲೆಮನ್ ಟೀ ಸೇರಿವೆ.