Advertisement

ಜೆಡಿಯು-ಬಿಜೆಪಿ ಮೈತ್ರಿ ಭದ್ರ : ಬಿಹಾರ ಚುನಾವಣೆ ನಿತೀಶ್ ಮುಂದಾಳತ್ವದಲ್ಲೇ

09:49 AM Jan 17, 2020 | Hari Prasad |

ಪಟ್ನಾ: ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಎದುರಿಸಲು ಬಿಜೆಪಿ-ಜೆಡಿಯು ಮೈತ್ರಿ ನಿರ್ಧರಿಸಿದೆ. ಈ ಎರಡು ಮಿತ್ರ ಪಕ್ಷಗಳ ಮೈತ್ರಿ ಕುರಿತಾಗಿ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ತೆರೆ ಎಳೆದಿದ್ದಾರೆ.

Advertisement

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಹಾಲಿ ಮುಖ್ಯಮಂತ್ರಿ ಮತ್ತು ಜೆಡಿಯು ಪಕ್ಷದ ಮುಖಂಡ ನಿತೀಶ್ ಕುಮಾರ್ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಅಮಿತ್ ಶಾ ಅವರು ಇಂದಿಲ್ಲಿ ಖಚಿತಪಡಿಸಿದ್ದಾರೆ. ಮತ್ತು ನಿತೀಶ್ ಕುಮಾರ್ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅವಿತ್ ಶಾ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಮೈತ್ರಿ ಸರಕಾರವನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್-ಆರ್.ಜೆ.ಡಿ. ಮತ್ತು ಆರ್.ಎಲ್.ಎಸ್.ಪಿ. ಪಕ್ಷಗಳು ತಮ್ಮ ಚುನಾವಣಾ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಜೆಡಿಯು ಬೆಂಬಲಿಸಿದರೂ ಜೆಡಿಯು ಪಕ್ಷದ ಉಪಾಧ್ಯಕ್ಷ ಹಾಗೂ ಚುನಾವಣಾ ತಂತ್ರಗಾರ ಚತುರ ಪ್ರಶಾಂತ್ ಕಿಶೋರ್ ಅವರು ಈ ಕಾಯ್ದೆಯನ್ನು ವಿರೋಧಿಸಿದ್ದರು. ಆ ಬಳಿಕ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿ ಕುರಿತಾದಂತೆ ಹಲವಾರು ಸಂಶಯಗಳು ಎದ್ದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next