Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಜನತೆಯ ಕ್ಷಮೆ ಕೇಳಲಿ

12:01 PM May 29, 2018 | Team Udayavani |

ಜಗಳೂರು: ರೈತರ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ವ್ಯಾಪಾರ ವಹಿವಾಟು ಎಂದಿನಂತೆ ಆರಂಭವಾಯಿತು. 8:30ರ ಸುಮಾರಿಗೆ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಟಯರ್‌ ಸುಡಲು ತಯಾರಿ ನಡೆಸಿದರು. ಇದನ್ನ ಅರಿತ ಪೊಲೀಸರು ಟಯರ್‌ ವಶಕ್ಕೆ ಪಡೆದು ಬಂದ್‌ ಆಚರಿಸದಂತೆ ಸ್ಥಳದಲ್ಲಿ ನೋಟಿಸ್‌ ಜಾರಿ ಮಾಡಿದರು.

ಇದಕ್ಕೂ ಕ್ಯಾರ್‌ ಎನ್ನದೆ ಪ್ರತಿಭಟನಾಕಾರರು ಗಾಂಧಿವೃತ್ತದಿಂದ ಹೊಸ ಬಸ್‌ನಿಲ್ದಾಣದವರೆಗೆ ರ್ಯಾಲಿ ನಡೆಸಿದರು. ದಾರಿಯುದ್ದಕ್ಕೂ ಬಾಗಿಲು ತೆರೆದು ವ್ಯಾಪಾರು ವಹಿವಾಟು ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿದರು. 

ಬಂದ್‌ ವೇಳೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿನ ಮುಂಭಾಗದಲ್ಲಿ ವಿಶೇಷ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಉಳಿದ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿದ್ದವು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ
ಕಾರ್ಯನಿರ್ವಹಿಸಿದರು. ಸಾರಿಗೆ ಸಂಚಾರಕ್ಕೆ ಯಾವುದೇ ಅಡ್ಡಿಯಿರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದವು.

ಮಧ್ಯಾಹ್ನ 3 ಗಂಟೆಯ ವೇಳೆಗೆ ಪಟ್ಟಣ ಸಹಜ ಸ್ಥಿತಿಗೆ ಮರಳಿತು. ವ್ಯಾಪಾರಿಗಳು ಅಂಗಡಿಮುಂಗಟ್ಟುಗಳು ಬಾಗಿಲು
ತೆರೆದು ವ್ಯಾಪಾರ ಆರಂಭಿಸಿದರು. ಬ್ಯಾಂಕ್‌ಗಳು ಕೂಡಾ ಕಾರ್ಯನಿರ್ವಹಿಸಿದವು. ಬಂದ್‌ ಶಾಂತಿಯುತವಾಗಿ ಅಂತ್ಯ
ಕಂಡಿತು. ಈ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದ್‌ ಏರ್ಪಡಿಸಲಾಗಿತ್ತು.

Advertisement

ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ: ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ಬಂದ್‌
ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಡಾ| ಬಿ.ಆರ್‌.
ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಜೆಡಿಎಸ್‌ ಅದಿಕಾರಕ್ಕೆ ಬಂದರೆ
24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೂ ಸಾಲ ಮನ್ನಾ ಮಾಡುವ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ ಎಂದು ದೂರಿದರು. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರ ಸಾಲ ಮನ್ನಾ
ಮಾಡಬೇಕು. ಇಲ್ಲವೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಬಿಜೆಪಿ ತಾಲೂಕಾಧ್ಯಕ್ಷ ಡಿ.ವಿ ನಾಗಪ್ಪ, ಅರಸಿಕೆರೆ ಹೋಬಳಿಯ ದ್ಯಾಮೇಗೌಡ, ಜಿಪಂ ಸದಸ್ಯ ಎಸ್‌.ಕೆ. ಮಂಜುನಾಥ್‌, ತಾಪಂ ಸದಸ್ಯ ಸಿದ್ದೇಶ್‌, ಬಿಸ್ತುವಳ್ಳಿ ಬಾಬು, ಕಾನನಕಟ್ಟೆ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಚಟ್ನಹಳ್ಳಿ ರಾಜಣ್ಣ, ಜೆ.ವಿ. ನಾಗರಾಜ್‌, ಮಲ್ಲಿಕಾರ್ಜುನ ಬಾಬು, ಚಂದ್ರಪ್ಪ, ಕುಬೇರಪ್ಪ, ಹನುಮಂತಪ್ಪ ಇತರರು ಬಂದ್‌ ನೇತೃತ್ವವಹಿಸಿದ್ದರು.

ಹಸಿರು ಟವಲ್‌ಗಾಗಿ ಪೈಪೋಟಿ: ಚುನಾವಣೆಯ ಸಂದರ್ಭದಲ್ಲಿ ಕೇಸರಿ ಟವಲ್‌ ಬಳಸಿದ್ದ ಬಿಜೆಪಿ ಕಾರ್ಯಕರ್ತರು ಇಂದು ನಡೆದ ಬಂದ್‌ನಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಹಸಿರು ಟವಲ್‌ ಬಳಸುವ ಮೂಲಕ ಗಮನ ಸೆಳೆದರು. ಗಾಂಧಿ ವೃತ್ತದಲ್ಲಿ ಮೂಟೆಗಟ್ಟಲೆ ತಂದ ಹಸಿರು ಟವಲ್‌ಗಾಗಿ ಕಾರ್ಯಕರ್ತರು ಪೈಪೋಟಿ ನಡೆಸಿದ್ದು ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next