Advertisement
ಇತ್ತಿಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದವು. ಇದರಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಜತೆಗೆ ಕೆಲವೆಡೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೊಳಗಾಗಿ ಕೆವರು ಸಾವಿಗೀಡಾದ ಪ್ರಕರಣಗಳು ನಡೆದವು. ಆ ಹಿನ್ನೆಲೆ ಮುಖ್ಯಮಂತ್ರಿಗಳು ನಗರದಲ್ಲಿ ರಸ್ತೆಗುಂಡಿಗಳನ್ನು 15 ದಿನಗಳಲ್ಲಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
Related Articles
Advertisement
ಗುತ್ತಿಗೆದಾರರು ಸಮರ್ಪಕವಾಗಿ ರಸ್ತೆಗಳು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಇದರೊಂದಿಗೆ ಕೆಲವೊಂದು ಕಡೆಗಳಲ್ಲಿ ರಸ್ತೆ ನಿರ್ವಹಣೆಯ ಅವಧಿಯಿದ್ದರೂ ಹಣ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಯಾವ ರಸ್ತೆಗಳು ನಿರ್ವಹಣೆಯಲ್ಲಿವೆ ಎಂಬ ವಲಯವಾರು ಮಾಹಿತಿಯನ್ನು ಪಾಲಿಕೆಯ ಅಧಿಕಾರಿಗಳು ಪಾಲಿಕೆಯ ವೆಬ್‌ಸೈಟ್‌ಗೆ ಹಾಕಿದ್ದಾರೆ.
ಗುತ್ತಿಗೆದಾರರಿಂದ 530 ಕಿ.ಮೀ. ನಿರ್ವಹಣೆ: ಬಿಬಿಎಂಪಿ ಎಂಟೂ ವಲಯಗಳಲ್ಲಿ ಒಟ್ಟು 530 ಕಿಲೋ ಮೀಟರ್ ಉದ್ದದ ರಸ್ತೆಗಳ ನಿರ್ವಹಣಾ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಆ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ರಸ್ತೆಗುಂಡಿಗಳ ದುರಸ್ತಿಗಾಗಿ ಪಾಲಿಕೆಯಿಂದ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿಲ್ಲ. ಬದಲಾಗಿ ನಿರ್ವಹಣಾ ಅವಧಿ ಪೂರ್ಣಗೊಂಡ ರಸ್ತೆಗಳಲ್ಲಿನ ತುರ್ತು ಕಾಮಗಾರಿಗಾಗಿ ಮಾತ್ರ ಪಾಲಿಕೆಯಿಂದ ಹಣ ನೀಡಲಾಗಿದೆ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.
ಆಯುಕ್ತರಿಂದ ಮೆಚ್ಚುಗೆರಸ್ತೆಗುಂಡಿ ಮುಚ್ಚಲು ಮುಖ್ಯಮಂತ್ರಿಗಳು ಗಡುವು ನೀಡಿದ ದಿನದಿಂದ ನಿತ್ಯ ಪಾಲಿಕೆಯ ಅಧಿಕಾರಿಗಳು ಎಲ್ಲಿ? ಎಷ್ಟು? ಗುಂಡಿಗಳನ್ನು ಮುಚ್ಚಿದ್ದಾರೆ ಹಾಗೂ ಎಲ್ಲಿ ಮುಚ್ಚಬೇಕು ಮಾಹಿತಿ ನೀಡುವ “ಆಪರೇಷನ್ ಗುಂಡಿ’ ಎಂಬ ವಿಶೇಷ ಕಾಲಂನ್ನು “ಉದಯವಾಣಿ’ ಆರಂಭಿಸಿತ್ತು. “ಉದಯವಾಣಿ’ ಈ ವಿಶೇಷ ಪ್ರಯತ್ನಕ್ಕೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಲಂ ಕುರಿತು ಮಾತನಾಡಿದ ಅವರು, ನಾವು ಎಲ್ಲಿ ಗುಂಡಿ ಮುಚ್ಚುತ್ತಿದ್ದೇವೆ ಎಂಬ ಮಾಹಿತಿ ಸಾರ್ವಜನಿಕರಿಗೆ ನೀಡಿದ್ದೀರಾ. ಜತೆಗೆ ಜನರು ಕಳುಹಿಸುವ ಗುಂಡಿಗಳ ಫೋಟೋಗಳನ್ನು ವಿಳಾಸದೊಂದಿಗೆ ಪ್ರಕಟಿಸಿದ್ದು, ಗುಂಡಿಗಳನ್ನು ಮುಚ್ಚಲು ಪರೋಕ್ಷವಾಗಿ ಪಾಲಿಕೆಗೆ ಸಹಾಯವಾಗಿತ್ತು ಎಂದು ಹೇಳಿದ್ದಾರೆ. ನಿರ್ವಹಣೆಯ ರಸ್ತೆಗಳ ವಲಯವಾರು ವಿವರ
ವಲಯ ಕಿಲೋ ಮೀಟರ್
-ಪೂರ್ವ 60
-ಪಶ್ಚಿಮ 71
-ದಕ್ಷಿಣ 161
-ದಾಸರಹಳ್ಳಿà 13
-ಯಲಹಂಕ 19
-ರಾಜರಾಜೇಶ್ವರಿ ನಗರ 50
-ಮಹದೇವಪುರ 60
-ಬೊಮ್ಮನಹಳ್ಳಿ 96
-ಒಟ್ಟು 530 ನಿರ್ವಹಣಾ ಅವಧಿ ಮುಗಿಯದಿರುವ ರಸ್ತೆಗಳಲ್ಲಿನ ಗುಂಡಿ ದುರಸ್ತಿಯ ವೆಚ್ಚವನ್ನು ಗುತ್ತಿಗೆದಾರರೆ ಭರಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ನೀಡಿದ ಗಡುವಿನೊಳಗೆ ಗುಂಡಿಗಳ ದುರಸ್ತಿ ಕಾಮಗಾರಿ ನಡೆಸಲಾಗಿದ್ದು, ಡಾಂಬರೀಕರಣ ಮಾಡಲು ಉದ್ದೇಶಿಸಿರುವ ರಸ್ತೆಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ