Advertisement
ಕಳೆದ ಜೂ.18ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿಯಾಗಿದ್ದ ವೇಳೆ, ರಾಜ್ಯದಲ್ಲಿನ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಅಡಚಣೆ ಉಂಟಾಗಿರುವ ಬಗ್ಗೆ ಪ್ರಸ್ತಾಪಿಸಿದ್ದ ನಿತಿನ್ ಗಡ್ಕರಿ, ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು. ಅದರಂತೆ ಮಂಗಳವಾರ ಸಮನ್ವಯತೆ ಸಾಧಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ರಸ್ತೆಗಳ ಪ್ರಗತಿ ಕುರಿತಂತೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಬೆಂಗಳೂರು-ಮೈಸೂರು ಹೆದ್ದಾರಿ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ
ಮನವಿ ಮಾಡಿದರು. ಅಲ್ಲದೆ, ಕೇಂದ್ರ ರಸ್ತೆ ನಿಧಿಯ (ಸಿಆರ್‌ಎಫ್) ಅನುದಾನದಿಂದ ರಾಜ್ಯದಲ್ಲಿ ಹಲವಾರು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಆದ್ದರಿಂದ ಕೇಂದ್ರದಿಂದ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೋರಿದಾಗ,
ಕಾಮಗಾರಿ ಪೂರ್ಣಗೊಂಡಿರುವುದನ್ನು ಪುಷ್ಟೀಕರಿಸುವ ಬಳಕೆ ಪ್ರಮಾಣಪತ್ರ ಸಲ್ಲಿಸಿದ ತಕ್ಷಣವೇ ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.
Related Articles
ಕರ್ನಾಟಕ ಮತ್ತು ಕೇರಳವನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿ 212 ಮಾರ್ಗವು ವನ್ಯಜೀವಿ ಪ್ರದೇಶದಲ್ಲಿ ಹಾದುಹೋಗಿರುವುದರಿಂದ ರಸ್ತೆ ನಿರ್ಮಾಣ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಈ ಮಾರ್ಗ ಮೈಸೂರು ಮೂಲಕ ಕೇರಳದ ಕೋಯಿಕ್ಕೋಡ್ ಸಂಪರ್ಕಿಸುತ್ತಿದ್ದು, ಮಾರ್ಗಮಧ್ಯೆ ಬಂಡೀಪುರ ರಾಷ್ಟ್ರೀಯ ಉದ್ಯಾನ ಬರುತ್ತದೆ. ಹೀಗಾಗಿ ಸುಮಾರು 5 ಕಿ.ಮೀ. ಮಾರ್ಗವನ್ನು ಮೇಲ್ಸೆತುವೆ ಹೆದ್ದಾರಿಯನ್ನಾಗಿಸಿ ಕೆಳಭಾಗದಲ್ಲಿ ಪ್ರಾಣಿಗಳಿಗೆ ಅಡಚಣೆ ಇಲ್ಲದಂತೆ ವಾಹನ ಸಂಚರಿಸಲು ಅನುಮಾಡಿಕೊಡಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆದ್ದರಿಂದ ಎರಡೂ ರಾಜ್ಯಗಳು ಈ ಬಗ್ಗೆ ಚರ್ಚಿಸಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ ವಿವಾದ ಇತ್ಯರ್ಥಪಡಿಸಿದರೆ ಮೇಲ್ಸೇತುವೆ ಮಾರ್ಗ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಸಲಹೆಯನ್ನು ಸ್ವಾಗತಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಬಂಧಿಸಿದವರಿಗೆ ಈ ಕುರಿತು ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.
Advertisement