Advertisement

ಅಬಕಾರಿ ಆಯುಕ್ತರಿಗೆ ಮುಖ್ಯಮಂತ್ರಿ ಕ್ಲಾಸ್‌

06:10 AM Jun 09, 2018 | |

ಬೆಂಗಳೂರು: ಚುನಾವಣಾ ಕಾರ್ಯಕ್ಕಾಗಿ ವಿವಿಧೆಡೆ ನಿಯೋಜನೆಗೊಂಡಿದ್ದ ಸಿಬ್ಬಂದಿಯನ್ನು ಅವರ ಮೂಲ
ಸ್ಥಳಗಳಿಗೆ ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದರೂ ಅಬಕಾರಿ ಇಲಾಖೆ ಸಿಬ್ಬಂದಿಯನ್ನು
ಮೂಲ ಸ್ಥಳಗಳಿಗೆ ವರ್ಗಾವಣೆ ಮಾಡದಿರುವ ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್‌ ವಿರುದ್ಧ ಮುಖ್ಯಮಂತ್ರಿ
ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Advertisement

ಚುನಾವಣಾ ಕಾರ್ಯಕ್ಕಾಗಿ ವಿವಿಧೆಡೆ ನಿಯೋಜಿಸಿರುವ ಸಿಬ್ಬಂದಿಯವನ್ನು ಮೂಲ ಸ್ಥಾನಗಳಿಗೆ ವರ್ಗಾವಣೆ
ಮಾಡುವಂತೆ ಚುನಾವಣಾ ಆಯೋಗ ಮತ್ತು ಸರ್ಕಾರ ಸೂಚನೆ ನೀಡಿದ್ದರೂ ಅಬಕಾರಿ ಇಲಾಖೆಯಲ್ಲಿ ಈ ಆದೇಶ
ಪಾಲನೆ ಮಾಡಿಲ್ಲ ಎಂದರೆ ಹೇಗೆ? ಸರ್ಕಾರಕ್ಕಿಂತ ಒಬ್ಬ ಐಎಎಸ್‌ ಅಧಿಕಾರಿ ದೊಡ್ಡವನೇ ಎಂದು ಗುಡುಗಿದ್ದಾರೆ.

ಅಲ್ಲದೆ, ಸೋಮವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಮನೀಶ್‌ ಮೌದ್ಗಿಲ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿ ಕೇವಲ ಪ್ರಾಮಾಣಿಕನಾಗಿದ್ದರೆ ಸಾಲದು, ಮಾನವೀಯತೆಯೂ ಇರಬೇಕು. ಅಧಿಕಾರಿ ಎಷ್ಟೇ
ದೊಡ್ಡವನಿರಲಿ, ಸರ್ಕಾರದ ಆದೇಶ ಪಾಲಿಸಲೇ ಬೇಕು. ಇಲ್ಲದಿದ್ದರೆ ಕೆಲಸಕ್ಕೆ ಬಾರದ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಬೇಕಾಗುತ್ತದೆ. ಸಿಬ್ಬಂದಿ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಧಿಕ್ಕರಿಸಿರುವ ಅಧಿಕಾರಿಗೆ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಅಷ್ಟರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next