Advertisement

ಕೈಗಾರಿಕಾ ವಲಯಕ್ಕೆ ಮೂರು ಲಕ್ಷ ಕೋಟಿ ಆರ್ಥಿಕ ನೆರವು ಸ್ವಾಗತಾರ್ಹ: ಬಿ.ಎಸ್. ಯಡಿಯೂರಪ್ಪ

08:30 AM May 14, 2020 | Hari Prasad |

ಬೆಂಗಳೂರು: ನಿನ್ನೆ ಪ್ರಧಾನಿಯವರು ಆರ್ಥಿಕ ಪುನಶ್ಚೇತನಕ್ಕಾಗಿ 20 ಲಕ್ಷ ಕೋಟಿಗಳ ಪ್ಯಾಕೇಜ್ ಘೋಷಿಸಿದ್ದರು.

Advertisement

ಇದಕ್ಕೆ ಅನುಗುಣವಾಗಿ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೂರು ಲಕ್ಷ ಕೋಟಿ ಹಣಕಾಸು ನೆರವನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚಿದ್ದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೂರು ಲಕ್ಷ ಕೋಟಿ ಹಣಕಾಸು ಸಹಾಯ ಕೇವಲ ಆರ್ಥಿಕ ಸಹಾಯವಾಗಿರದೆ ದೇಶದ ಉದ್ಯಮಿಗಳಿಗೆ ಮತ್ತು ಕಾರ್ಮಿಕ ವರ್ಗಕ್ಕೆ ಆರ್ಥಿಕವಾಗಿ ಪುನಶ್ಚೇತನಗೊಳ್ಳುವಲ್ಲಿ ವರದಾನವಾಗಲಿದೆ ಎಂಬುದು ಬಿ.ಎಸ್.ವೈ. ಅಭಿಪ್ರಾಯವಾಗಿದೆ.

ಈ ಆರ್ಥಿಕ ಪುನಶ್ಚೇತನ, ಸಮಯೋಚಿತ ಮತ್ತು ವೈಜ್ಞಾನಿಕವಾಗಿದ್ದು, ಬಹಳ ಆರ್ಥಿಕ ನೈಪುಣ್ಯತೆಯಿಂದ ಕೂಡಿದ್ದು, ಎಂ.ಎಸ್.ಎಂ.ಇ.ಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಯೋಜನೆ ಘೋಷಣೆ ತಕ್ಷಣ ಕೈಗಾರಿಕೆಗಳನ್ನು ಪುನರಾರಂಭಿಸಲು ಉತ್ತೇಜನಕಾರಿಯಾಗಿ ಪರಿಣಮಿಸುತ್ತದೆ.

ಈ ಹಣಕಾಸು ನೆರವು ದೇಶದ 45 ಲಕ್ಷ ಎಂ.ಎಸ್.ಎಂ.ಇ. (MSME) ಗಳಿಗೆ ಲಾಭವಾಗಲಿದೆ.  ಇದರ ಜೊತೆಗೆ ರಾಜ್ಯದ ವಿದ್ಯುತ್ ಕಂಪನಿಗಳಿಗೆ 90 ಸಾವಿರ ಕೋಟಿ ಧನ ಸಹಾಯ, 50 ಸಾವಿರ ಕೋಟಿ ಆದಾಯ ತೆರಿಗೆ ಬಾಕಿ ವಾಪಾಸ್ ಮತ್ತು ತೆರಿಗೆ ವಿನಾಯಿತಿ, 6750 ಕೋಟಿ ರೂ ನೌಕರದಾರರ ಭವಿಷ್ಯ ನಿಧಿಗೆ ನೌಕರದಾರರ ಮತ್ತು ಉದ್ಯಮಿಗಳ ವಂತಿಗೆ ಪಾವತಿ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ಹಣಕಾಸು ಸಹಾಯ ಇವುಗಳು ಕೋವಿಡ್-19ರಿಂದ ತತ್ತರಿಸಿದ ಔದ್ಯೋಗಿಕ ವಲಯಕ್ಕೆ ಸಂಜೀವಿನಿಯಾಗಿ ಪರಿಣಮಿಸಲಿದೆ.

Advertisement

ಇವತ್ತಿನ ವಿಶೇಷತೆ ಏನೆಂದರೆ, 200 ಕೋಟಿವರೆಗಿನ ಟೆಂಡರ್ ಪ್ರಕ್ರಿಯೆಯಲ್ಲಿ ಭಾರತೀಯ ಕಂಪನಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮಾತ್ರ ಭಾಗವಹಿಸಲು ಅನುವು ಮಾಡಿಕೊಟ್ಟಿದ್ದು ಸ್ವದೇಶಿ ಕಂಪನಿಗಳು ಬೆಳೆಯುವಲ್ಲಿ ದೊಡ್ಡ ಪ್ರೇರಕ ಯೋಜನೆಯಾಗಲಿದೆ.

ಕೋವಿಡ್-19ರಿಂದ ತತ್ತರಿಸಿದ ಜಗತ್ತಿನ ಯಾವುದೇ ದೇಶ ಔದ್ಯೋಗಿಕ ವಲಯಕ್ಕೆ ಇಂತಹ ಆರ್ಥಿಕ ಪುನಶ್ಚೇತನ ಕಾರ್ಯಕ್ರಮವನ್ನು ಘೋಷಿಸಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಲಾಕ್ ಡೌನ್ ವ್ಯವಸ್ಥೆಯಿಂದ ಹೊರಬಂದು ಜನತೆ ತಮ್ಮ ತಮ್ಮ ದಿನನಿತ್ಯದ ದುಡಿಮೆಯನ್ನು ಪ್ರಾರಂಭಿಸಲು ಪ್ರೇರೇಪಿಸಿದ ಮೊದಲ ದಿಟ್ಟ ಹೆಜ್ಜೆ ಇದಾಗಿದೆ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next