ಮೈಸೂರು: ಕಳೆದ ಕೆಲವು ದಿನಗಳಿಂದ ಸುರಿದ ಭೀಕರ ಮಳೆಗೆ ಮಡಿಕೇರಿ ಮೈಸೂರು ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು ಜನತೆ ಯಾವುದೇ ಕಾರಣಕ್ಕೂ ಎದೆಗುಂದಬಾರದು ನಿಮ್ಮೊಂದಿಗೆ ನಾನಿದ್ದೇನೆ ಎಂದು ಮೈಸೂರಿನ ಜನತೆಗೆ ಧೈರ್ಯ ತುಂಬಿಸಿದರು.
ಮಡಿಕೇರಿ ಮೈಸೂರು ಪ್ರದೇಶಗಳಲ್ಲಿ ಸಂಭವಿಸಿದ ಪ್ರವಾಹದ ಭೀಕರತೆಗಳನ್ನು ಅವಲೋಕಿಸಿ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ನೀಡುವ ಭರವಸೆ ನೀಡಿದರು.
ಮೈಸೂರು ಜಿಲ್ಲೆ ನಂಜನಗೂಡಿಗೆ ಆಗಮಿಸಿದ ಬಿ ಎಸ್ ಯಡಿಯೂರಪ್ಪ ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ದರ್ಶನ ಬಳಿಕ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ಮೈಸೂರಿನಲ್ಲಿ ಪ್ರವಾಹ ಎದುರಾಗಿದೆ. ಪ್ರವಾಹದಲ್ಲಿ ಮೃತ ಪಟ್ಟವರಿಗೆ 5 ಲಕ್ಷ ಪರಿಹಾರ ನೀಡಲಾಗುವುದು .ಮನೆ ಕಳೆದುಕೊಂಡವರಿಗೆ 1 ಲಕ್ಷ ದುರಸ್ಥಿ ಪರಿಹಾರ, ನಿರಾಶ್ರಿತ ಶಿಬಿರದಲ್ಲಿರುವವರಿಗೆ 10 ಸಾವಿರ ಪರಿಹಾರ ಸೇರಿದಂತೆ ಯಾರು ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದಾರೆ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೆರವು ನೀಡುತ್ತೇವೆ ಎಂದು ತಿಳಿಸಿದರು.
ಆ.16 ರಂದು ದೆಹಲಿಗೆ ತೆರಳಿ ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೇಳುತ್ತೇನೆ. ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ದಸರಾ ಆಚರಣೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ:
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ನಂಜನಗೂಡಿನಲ್ಲಿ ಮಾತನಾಡಿದ ಬಿಎಸ್ ವೈ ಸರಳ ದಸರಾ ಬಗ್ಗೆ ಏನಾದ್ರೂ ಚಿಂತನೆಯಲ್ಲಿ ಇದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ
ಪ್ರವಾಹಕ್ಕೂ, ದಸರಾಗೂ ಯಾವುದೇ ಸಂಬಂಧವಿಲ್ಲ.
ದಸರಾ ಸಂಬಂಧ 14 ರಂದು ಎಲ್ಲಾ ಶಾಸಕರೊಂದಿಗೆ ದಸರಾ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.