Advertisement

ಸದ್ಯ ವಿಸ್ತರಣೆ ಮಾತ್ರ; ಜನವರಿಯಲ್ಲಿ ಪುನಾರಚನೆ? ಆರು ತಿಂಗಳು ಸಚಿವರ ಕಾರ್ಯವೈಖರಿ ಮೇಲೆ ನಿಗಾ

03:01 AM Jul 30, 2020 | Hari Prasad |

ಬೆಂಗಳೂರು: ರಾಜ್ಯ ಸರಕಾರಕ್ಕೆ ವರ್ಷ ಭರ್ತಿಯಾದ ಬೆನ್ನಲ್ಲೇ ಸಂಪುಟ ಸರ್ಜರಿಯ ಮಾತು ಕೇಳಿ ಬರುತ್ತಿದೆ.

Advertisement

ಆದರೆ ಸದ್ಯ ವಿಸ್ತರಣೆಯನ್ನಷ್ಟೇ ಮಾಡಿ, ಮುಂದಿನ ವರ್ಷ ಪುನಾರಚಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಈ ಬಗ್ಗೆ ಪಕ್ಷ ಉನ್ನತ ಮಟ್ಟದಲ್ಲೂ ಚರ್ಚೆಯಾಗಿದೆ.

ಕೋವಿಡ್ 19‌ ಸ್ಥಿತಿಗತಿ ಅವಲೋಕಿಸಿ ಜನವರಿ ಹೊತ್ತಿಗೆ ಸಂಪುಟ ಪುನಾರಚನೆ ಬಗ್ಗೆ ತೀರ್ಮಾನಿಸಬಹುದು ಎಂದು ಮೂಲಗಳು ತಿಳಿಸಿವೆ.

ಅಂತಿಮ ಕ್ಷಣದ ಬೆಳವಣಿಗೆ ಹೊರತುಪಡಿಸಿದರೆ ಪುನಾರಚನೆ ಸದ್ಯಕ್ಕಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ.

6 ತಿಂಗಳು ಪರೀಕ್ಷಾ ಅವಧಿ
ಹಾಗಾಗಿ ಹಾಲಿ ಸಚಿವರ ಕಾರ್ಯವೈಖರಿ ಮೇಲೆ ಪಕ್ಷ ನಿಗಾ ಇರಿಸಲಾರಂಭಿಸಿದೆ. ಸಚಿವರಾದಾಗಿನಿಂದ ಈವರೆಗಿನ ಕಾರ್ಯನಿರ್ವಹಣೆ ಹಾಗೂ ಮುಂದಿನ ಆರು ತಿಂಗಳ ಕಾರ್ಯವೈಖರಿಯನ್ನಾಧರಿಸಿ ಸಂಪುಟ ಪುನಾರಚನೆಯಾಗಲಿದೆ.  ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸರಕಾರ ರಚನೆಗೆ ನೆರವಾದ 17 ಮಂದಿ ಪೈಕಿ ಈಗಾಗಲೇ 10 ಮಂದಿ ಸಚಿವರಾಗಿದ್ದಾರೆ.

Advertisement

ಹಿಂದೆ ಕೊಟ್ಟ ಮಾತಿನಂತೆ ಉಪಚುನಾವಣೆಗೆ ಸ್ಪರ್ಧಿಸದ ಆರ್‌.ಶಂಕರ್‌ ಅವರಿಗೆ ಸಚಿವ ಸ್ಥಾನ ಖಚಿತ. ಜತೆಗೆ ಸಚಿವ ಸ್ಥಾನ ತೊರೆದು ಬಂದ ಎಂ.ಟಿ.ಬಿ. ನಾಗರಾಜ್‌ ಅವರಿಗೂ ಸಚಿವ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ಆಕ್ಷೇಪವೂ ಇದ್ದಂತಿಲ್ಲ. ಹಾಗಾಗಿ ಈ ಇವರಿಬ್ಬರು ಹಾಗೂ ಮೂಲ ಬಿಜೆಪಿಯಿಂದ ಒಬ್ಬರು ಅಥವಾ ಇಬ್ಬರಿಗೆ ಸಚಿವ ಸ್ಥಾನ ನೀಡಿ ಸಂಪುಟ ವಿಸ್ತರಣೆ ಮಾಡಬಹುದು ಎಂದು ಹೇಳಲಾಗಿದೆ.

ಸಚಿವರ ಮೌಲ್ಯಮಾಪನ
ಪ್ರಥಮ ಸಂಪುಟ ವಿಸ್ತರಣೆಯಲ್ಲಿ ಸಚಿವರಾದವರ ಒಂದು ವರ್ಷದ ಅಧಿಕಾರಾವಧಿ ಆ. 20ಕ್ಕೆ ಪೂರ್ಣಗೊಳ್ಳಲಿದೆ. ಈವರೆಗಿನ ಅವರ ಕಾರ್ಯ ನಿರ್ವಹಣೆ ಹಾಗೂ ಮುಂದಿನ 6 ತಿಂಗಳಲ್ಲಿ ಅವರ ನಿರ್ವಹಣೆ ಮೇಲೂ ನಿಗಾ ವಹಿಸಲಾಗುತ್ತದೆ. ಒಟ್ಟಾರೆ ಒಂದೂವರೆ ವರ್ಷದ ಕಾರ್ಯ ವೈಖರಿ ಮೌಲ್ಯಮಾಪನ ವರದಿ ಆಧಾರ ಮೇಲೆ ಸಂಪುಟ ಪುನಾಚರನೆ ನಿರ್ಧಾರವಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next