ಹೊಸದಿಲ್ಲಿ: ಸೋಮವಾರ ಸುಪ್ರೀಂ ಕೋರ್ಟ್ ಆವರಣ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ಹಾರ್ವರ್ಡ್ ಕಾನೂನು ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ನಾಲ್ಕು ದಶಕಗಳ ಅನಂತರಪರಸ್ಪರ ಭೇಟಿಯಾದರು.
ಸಿಜೆಐ ಡಿ.ವೈ.ಚಂದ್ರಚೂಡ್, ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ಹಿಲರಿ ಚಾರ್ಲ್ಸ್‌ವರ್ತ್ ಮತ್ತು ಹಿರಿಯ ನ್ಯಾಯವಾದಿ ಪರಾಗ್ ತ್ರಿಪಾಠಿ ವಿಶೇಷ ವಿಚಾರಣೆಯ ಭಾಗವಾದರು. ಇವರು ಮೂವರು ಹಾರ್ವರ್ಡ್ ಕಾನೂನು ಕಾಲೇಜಿನ 1983ರ ಬ್ಯಾಚ್‌ನ ಸಹಪಾಠಿಗಳಾಗಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಮೂವರೂ ತಮ್ಮ ತಮ್ಮ ವೃತ್ತಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್‌ನ ಸಂಸ್ಥಾಪನ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಹಿಲರಿ ಚಾರ್ಲ್ಸ್‌ವರ್ತ್ ಅವರನ್ನು ಸಿಜೆಐ ಆತ್ಮೀಯವಾಗಿ ಬರಮಾಡಿಕೊಂಡರು. ಅನಂತರ ಕೋರ್ಟ್ ಹಾಲ್‌ನಲ್ಲಿ ನಡೆದ ವಿವಿಧ ಪ್ರಕರಣಗಳ ವಿಚಾರಣೆಯನ್ನು ಸಿಜೆಐ ಅವರ ಪಕ್ಕದಲ್ಲಿ ಕುಳಿತು ಹಿಲರಿ ಅವರು ಆಲಿಸಿದರು. ಇದೇ ವೇಳೆ ಪ್ರಕರಣವೊಂದರಲ್ಲಿ ಹಿರಿಯ ನ್ಯಾಯವಾದಿ ಪರಾಗ್ ತ್ರಿಪಾಠಿ ವಾದಿಸಿದರು. ಈ ದೃಶ್ಯಕ್ಕೆ ಅಲ್ಲಿದ್ದವರು ಸಾಕ್ಷಿಯಾದರು.
ಅನಂತರ ಮೂವರು ಹಳೆಯ ಸ್ನೇಹಿತರು ಪರಸ್ಪರ ಮಾತುಕತೆ ನಡೆಸಿದರು.