Advertisement

ಸಿಜೆಐ ಗೊಗೊಯ್‌ಗೆ ಆತ್ಮೀಯ ಬೀಳ್ಕೊಡುಗೆ

10:14 AM Nov 17, 2019 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಕೊಠಡಿ ಸಂಖ್ಯೆ 1ಕ್ಕೆ ಆಗಮನ, 4 ನಿಮಿಷ ಗಳ ಕಲಾಪ, 10 ನೋಟಿಸ್‌ಗಳ ಜಾರಿ ಮತ್ತು ಮೌನದ ಮಹತ್ವದ ಕುರಿತ ಟಿಪ್ಪಣಿ…

Advertisement

ಇದೇ 17ರಂದು ನಿವೃತ್ತಿಯಾಗಲಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ಕೊನೆಯ ದಿನದ ಕರ್ತವ್ಯದ ದಿನಚರಿ ಹೀಗಿತ್ತು. ಶುಕ್ರವಾರ ಅವರ ಕೆಲಸದ ಕೊನೆಯ ದಿನವಾಗಿದ್ದು, ಸುಪ್ರೀಂನ ಕೊಠಡಿ ಸಂಖ್ಯೆ 1ಕ್ಕೆ ಆಗಮಿಸಿ 4 ನಿಮಿಷಗಳ ಕಲಾಪದಲ್ಲಿ ಪಾಲ್ಗೊಂಡರು. ಅನಂತರ, ತಮ್ಮ ಮುಂದೆ ಬಂದ ಎಲ್ಲ 10 ಪ್ರಕರಣ ಗಳಿಗೆ ಸಂಬಂಧಿಸಿಯೂ ನೋಟಿಸ್‌ ಜಾರಿ ಮಾಡಿದರು. ಬಳಿಕ ನ್ಯಾಯಾಂಗದಲ್ಲಿ ಮೌನ ಎಷ್ಟು ಮುಖ್ಯ ಎಂಬ ಬಗ್ಗೆ ಟಿಪ್ಪಣಿಯೊಂದನ್ನು ಬರೆಯುವ ಮೂಲಕ ಕಿವಿಮಾತು ಹೇಳಿದರು.

ನ್ಯಾಯಾಂಗದ ಹುದ್ದೆಯಲ್ಲಿರುವವರು ತಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಲೇ ಹೇಗೆ ಮೌನ ವಹಿಸಬೇಕು ಎಂದು ತಿಳಿಸಿ ಕೊಟ್ಟರು. “ಮೌನ ವಹಿಸಬೇಕು ಎಂದಾಕ್ಷಣ ಜಡ್ಜ್ಗಳು ಮಾತನಾಡ ಲೇಬಾರದು ಎಂದರ್ಥವಲ್ಲ. ಕೇವಲ ಕಾರ್ಯ ನಿರ್ವಹಣೆಯಲ್ಲಿ ಅಗತ್ಯ ಎನಿಸಿದಾಗ ಮಾತ್ರವೇ ಮಾತನಾಡಿ’ ಎಂದರು.

ಜತೆಗೆ, ಕೆಲವೊಂದು ಕಹಿ ಸತ್ಯಗಳು ಸ್ಮತಿ ಪಟಲದಲ್ಲಷ್ಟೇ ಉಳಿಯಬೇಕಾಗುತ್ತದೆ ಎಂದೂ ಹೇಳಿದರು.

ಸಂದರ್ಶನ ನೀಡದ್ದಕ್ಕೆ ಸ್ಪಷ್ಟನೆ: ಮಾಧ್ಯಮ ಗಳಿಗೆ ಸಂದರ್ಶನ ನೀಡದೇ ಇದ್ದ ಬಗ್ಗೆ ಮಾತನಾಡಿದ ಅವರು, ನಾನು ಸಾರ್ವ ಜನಿಕರ ವಿಶ್ವಾಸ ಮತ್ತು ನಂಬಿಕೆಯನ್ನೇ ಅವಲಂಬಿಸಿರುವಂಥ ಸಂಸ್ಥೆಯೊಂದಕ್ಕೆ ಸೇರಿದವನು. ಹೀಗಾಗಿ, ಮಾಧ್ಯಮಗಳಿಂದ ದೂರ ಇರಲು ಬಯಸಿದ್ದೇನೆ ಎಂದರು. ಇದೇ ವೇಳೆ, ಮಾಧ್ಯಮಗಳು ಕೆಲವೊಂದು ಸಂದಿಗ್ಧ ಸಂದರ್ಭದಲ್ಲೂ ಪ್ರೌಢಿಮೆ ಮೆರೆದಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

Advertisement

ಸರಳ ಬೀಳ್ಕೊಡುಗೆ ಸಮಾರಂಭ: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿ ಯೇಷನ್‌ ವತಿಯಿಂದ ಶುಕ್ರವಾರ ಸಂಜೆ ಸಿಜೆಐ ಗೊಗೊಯ್‌ ಅವರ ಬೀಳ್ಕೊಡುಗೆ ಸಮಾರಂಭ ಅತ್ಯಂತ ಸರಳವಾಗಿ ನೆರವೇರಿತು. ನ್ಯಾ| ಗೊಗೊಯ್‌ ಸೂಚನೆ ಮೇರೆಗೆ ಔಪಚಾರಿಕ ಭಾಷಣಗಳೂ ನಡೆಯಲಿಲ್ಲ.

ನಿಯೋಜಿತ ಸಿಜೆಐ ಎಸ್‌.ಎ. ಬೋಬೆx ಸಹಿತ ಸುಪ್ರೀಂ ಕೋರ್ಟ್‌ನ ಬಹುತೇಕ ಎಲ್ಲ ನ್ಯಾಯಮೂರ್ತಿಗಳೂ ಕಾರ್ಯ ಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ, ಶುಕ್ರವಾರ ಸಿಜೆಐ ಗೊಗೊಯ್‌ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾನ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next