Advertisement

45 ವರ್ಷಗಳ ಗರಿಷ್ಠ ನಿರುದ್ಯೋಗ ಇರುವಾಗ ಶೇ.7 GDP ಹೇಗೆ ಸಾಧ್ಯ ? ಚಿದು

05:47 AM Feb 01, 2019 | udayavani editorial |

ಹೊಸದಿಲ್ಲಿ : ದೇಶದಲ್ಲಿ ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಇರುವಾಗ ದೇಶದ ಆರ್ಥಿಕತೆ (GDP) ಶೇ.7ರ ಮಟ್ಟದಲ್ಲಿ  ಬೆಳೆಯಲು ಹೇಗೆ ಸಾಧ್ಯ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪ್ರಶ್ನಿಸಿದ್ದಾರೆ. 

Advertisement

ಸರಕಾರ ನಿನ್ನೆ ಗುರವಾರ ಪ್ರಕಟಿಸಿರುವ ಜಿಡಿಪಿ ಸಂಖ್ಯೆಯನ್ನು ಶಂಕಿಸಿರುವ ಚಿದಂಬರಂ, “ಸರಕಾರ ಜಿಡಿಪಿ ಸಂಖ್ಯೆಯನ್ನು ಪರಿಷ್ಕರಿಸುವಾಗ ನಿರುದ್ಯೋಗದ ಸಂಖ್ಯೆಯನ್ನು ಪರಿಷ್ಕರಿಸಲು ಮರೆತಿರುವಂತಿದೆ’ ಎಂದು ವ್ಯಂಗ್ಯವಾಡಿದರು. 

ದೇಶದಲ್ಲಿನ ನಿರುದ್ಯೋಗವು 2017-18ರಲ್ಲಿ  ಕಳೆದ 45 ವರ್ಷಗಳಲ್ಲೇ ಗರಿಷ್ಠ ಎನ್ನುವಂತೆ ಶೇ.6.1ರ ಪ್ರಮಾಣದಲ್ಲಿ ಇದೆ ಎನ್ನಲಾಗಿರುವ ನಡುವೆಯೇ ತಾನು ದೇಶದ ಕಾರ್ಮಿಕ ಶಕ್ತಿಯ ಸಮೀಕ್ಷೆಯನ್ನು ಅಂತಿಮಗೊಳಿಸಿಲ್ಲ ಎಂದು ಕೇಂದ್ರ ಸರಕಾರ ನಿನ್ನೆ ಜಿಡಿಪಿ ಸಂಖ್ಯೆಯನ್ನು ಪ್ರಕಟಿಸುವಾಗ ಹೇಳಿತ್ತು.   

ಇಂದು ಶುಕ್ರವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಮಂಡನೆಗೆ ಮುನ್ನ ಚಿದಂಬರಂ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ರೀತಿಯಿಲ್ಲಿ ಶೇ.7ರ ಜಿಡಿಪಿ ಸಂಖ್ಯೆಯನ್ನು ಶಂಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next