Advertisement

ಒಂದು ತಿಂಗಳ ಹಿಂದೆ ಕುಸಿದ ಕೋಳಿ ದರ ಈಗ ಏರಿಕೆ

10:58 PM Apr 17, 2020 | Sriram |

ಮಲ್ಪೆ: ಕೋವಿಡ್ 19 ವೈರಸ್‌ ಹರಡಿದ ಭೀತಿಯಿಂದ ತಿಂಗಳ ಹಿಂದೆ ಪಾತಾಳಕ್ಕೆ ಇಳಿದು ಕೇವಲ 35ರೂ. ಆಗಿದ್ದ ಬಾಯ್ಲರ್‌ ಮಾಂಸದ ಕೋಳಿ ದರ ಇದೀಗ ಕೋವಿಡ್ 19 ಲಾಕ್‌ಡೌನ್‌ನಿಂದಾಗಿ 200, 210ಕ್ಕೆ ಏರಿಕೆ ಕಂಡಿದೆ. ಈಸ್ಟರ್‌ ಹಬ್ಬದ ವೇಳೆ 220ರಿಂದ 230ರ ವರೆಗೂ ಏರಿಕೆಯಾಗಿತ್ತು.

Advertisement

ಕಳೆದ ಮಾರ್ಚ್‌ ತಿಂಗಳು ಕೋವಿಡ್ 19 ವೈರಸ್‌ ಭೀತಿ ಮತ್ತು ಹಕ್ಕಿಜ್ವರದ ವದಂತಿಯ ಹಿನ್ನೆಲೆಯಲ್ಲಿ ಫಾರಂ ಕೋಳಿ ವ್ಯಾಪಾರಕ್ಕೆ ಸಾಕಷ್ಟು ಹೊಡೆತ ಬಿದ್ದು, ಕೋಳಿ ಮಾಂಸ ಕೊಳ್ಳುವವರಿಲ್ಲದೆ ಕೋಳಿ ಫಾರಂ ಮಾಲಕರು ತಲೆ ಮೇಲೆ ಕೈ ಇಟ್ಟು ಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಕೆ.ಜಿ. 170 ರೂ. ಇದ್ದ ಬಾಯ್ಲರ್‌ ಕೋಳಿ ಮಾ. 13ರ ವೇಳೆ ದಿಢೀರ್‌ 30ಕ್ಕೆ ಕುಸಿದಿತ್ತು. ಆದರೂ ಜನರು ಕೋಳಿ ಅಂಗಡಿಗೆ ಬಳಿ ಬರಲು ಹಿಂದೇಟು ಹಾಕಿದ್ದರು.

ಪ್ರಸ್ತುತ ಬೇಡಿಕೆಗೆ ತಕ್ಕಷ್ಟು ಕೋಳಿ ಪೂರೈಕೆಯಾಗುತ್ತಿಲ್ಲ. ಸಾರಿಗೆ ವ್ಯವಸ್ಥೆಯಿಲ್ಲದೆ ಹೊರಗಿನಿಂದ ಕೋಳಿ ಬರುತ್ತಿಲ್ಲ, ವಿದ್‌ಸ್ಕಿನ್‌ 180 ರೂ., ಸ್ಕಿನ್‌ಔಟ್‌ 210 ರೂ. ಜೀವಂತ ಕೋಳಿಗೆ 130 ರೂ. ಇದೆ.

ಇದೀಗ ಹೊಟೇಲ್‌, ಶುಭ ಸಮಾರಂಭಕ್ಕೆ ಪೂರೈಕೆ ಇಲ್ಲದಿದ್ದರೂ, ಮನೆ ಮಂದಿಗಳು ಕೊಳ್ಳುವುದರಿಂದ ಇದುವರೆಗೆ ಬೇಡಿಕೆ ಇತ್ತು. ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದ್ದರಿಂದ ಮೂರ್‍ನಾಲ್ಕು ದಿನಗಳಲ್ಲಿ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮಲ್ಪೆಯ ಸ್ವರ್ಣ ಚಿಕನ್ಸ್‌ ಮಾಲಕ ಭಾಸ್ಕರ್‌ ಪಾಲನ್‌ ಬಾಚನಬೈಲು ಅವರು.

ಆಹಾರ ಪದಾರ್ಥ ಆಮದು ಇಲ್ಲ
ಕೋಳಿ ಸಾಕಣಿಕೆಗೆ ಬಳಸುತ್ತಿದ್ದ ಸೊಯಾಬೀನ್‌ ಧಾನ್ಯ ಹೆಚ್ಚಾಗಿ ಮಹಾರಾಷ್ಟ್ರ, ಮಧ್ಯಪ್ರದೇಶದಿಂದ, ಮೆಕ್ಕೆಜೋಳವನ್ನು ತಮಿಳುನಾಡಿನಿಂದ ತರಿಸಿಕೊಳ್ಳಲಾಗುತ್ತು. ಕೋವಿಡ್ 19 ವೈರಸ್‌ ಹಾವಳಿ ತಪ್ಪಿಸಲು ರಾಜ್ಯಗಳ ಗಡಿ ಬಂದ್‌ ಮಾಡಿರುವುದರಿಂದ ಕೋಳಿಯ ಆಹಾರ ಪದಾರ್ಥಗಳು ಆಮದು ಆಗುತ್ತಿಲ್ಲ ಎನ್ನಲಾಗುತ್ತಿದೆ.

Advertisement

ಮುಂದಿನ ದಿನಗಳಲ್ಲಿ ಕೊರತೆಯಾಗುವ ಸಾಧ್ಯತೆ
ಕೋಳಿ ಆಹಾರ ಉತ್ಪಾದನೆ ಸ್ಥಗಿತವಾಗಿರುವುದರಿಂದ, ಕೋಳಿ ಸಾಕಣಿಕೆಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಮಂದಿನ ಎರಡು ಮೂರು ತಿಂಗಳಲ್ಲಿ ಮಾಂಸದ ಕೊರತೆ ಉಂಟಾಗುವ ಸಾಧ್ಯತೆ ಇದೆ.
-ರಮೇಶ್‌ ಶೆಟ್ಟಿಗಾರ್‌, ಸಾಯಿನಾಥ್‌ ಪೌಲಿó ಉದ್ದಿನಹಿತ್ಲು

Advertisement

Udayavani is now on Telegram. Click here to join our channel and stay updated with the latest news.

Next