Advertisement
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಮಾಡುವ ರೈತರು ಹಾಗೂ ಫಾರಂ ಕೋಳಿ ಸರಬರಾಜು ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಮಧ್ಯೆ ಜಗಳ ಮುಂದುವರೆದಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯ ವಹಿಸಿರುವುದನ್ನು ಪ್ರತಿರೋಧ ವ್ಯಕ್ತಪಡಿಸಿರುವ ಕೋಳಿ ಸಾಕಾಣಿಕೆದಾರರು ಪರವಾನಿಗೆ ರಹಿತವಾಗಿ ಬರುವ ವಾಹನವನ್ನು ನಿಲ್ಲಿಸಿ ಫಾರಂ ಕೋಳಿ ಮರಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟುಬಂದಿದ್ದು ಅದನ್ನು ನೋಡಿದ ಸುತ್ತಮುತ್ತಲಿನ ಗ್ರಾಮಾಸ್ಥರು ಬ್ಯಾಗ್, ಚೀಲ ಪ್ಲಾಸ್ಟೀಕ್‍ಗಳಲ್ಲಿ ಮನೆಗೆ ಕೊಂಡೊಯ್ದಿದ್ದಾರೆ.
Related Articles
Advertisement
ರಾಜ್ಯದಲ್ಲಿ ಫಾರಂ ಕೋಳಿ ಸಾಕಾಣಿಕೆದಾರ ರೈತರು ಹಾಗೂ ಚಿಕನ್‍ಗೆ ಕೋಳಿ ಸರಬರಾಜು ಮಾಡುವ ಬಹುರಾಷ್ಟ್ರೀಯ ಕಂಪನಿಗಳ ನಡುವೆ ಜಟಾಪಟಿ ನಡೆಯುತ್ತಿದ್ದು ಕಂಪನಿಗಳ ವಿರುದ್ದ ಸಾಕಾಣಿಕೆದಾರರು ಹೋರಾಟ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಬೆಂಗಳೂರಿನ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಕೋಳಿ ಸಾಕಾಣಿಕೆ ಮಾಡುವ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಮಾಡುವ ಭರವಸೆ ನೀಡಿದ್ದಾರೆ. ಆದರೆ ಕೋಳಿ ಸಾಕಾಣಿಕೆ ಮಾಡುವ ರೈತರು ಬಹುರಾಷ್ಟ್ರೀಯ ಕಂಪನಿಗಳ ಕೋಳಿ ಮರಿಗಳನ್ನು ಸಾಗಾಣಿಕೆ ಮಾಡುವ ವಾಹನಗಳನ್ನು ತಡೆದು ವಾಹನದಲ್ಲಿರುವ ಕೋಳಿ ಮರಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡುವ ಕೆಲಸವನ್ನು ಮಾಡುತ್ತಿದ್ದಾರೆ.