Advertisement
ತಾಲೂಕಿನ ಹೂವಿನಬಾವಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಭಾಗವಹಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ನಂತರ ಗ್ರಾಮಸ್ಥರನ್ನುದ್ದೇಶಿಸಿ ಅವರು ಮಾತನಾಡಿದರು. ಹಳ್ಳಿಯ ಜನರಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಯೋಜನೆಗಳ ಮಾಹಿತಿ ಇರುವುದಿಲ್ಲ. ಈ ಕುರಿತು ಅವರಿಗೆ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ. ಶಿಕ್ಷಣ, ಕೃಷಿ, ಜಿಪಂ, ತಾಪಂ,ಪಶು ಸಂಗೋಪನೆ, ಗ್ರಾಪಂ, ತೋಟಗಾರಿಕೆ ಇಲಾಖೆಗಳಿಂದ ರೈತರಿಗಾಗಿ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಯೋಜನೆಗಳಿವೆ. ಅವುಗಳ ಕುರಿತು ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
Related Articles
Advertisement
ರುಸ್ತಂಪುರ ಗ್ರಾಮದ ಶ್ರೀಕಾಂತ ಮಾತನಾಡಿ, ನಮ್ಮ ಗ್ರಾಮದಲ್ಲಿ ಬೀದಿ ದೀಪಗಳಿಲ್ಲ. ಹೀಗಾಗಿ ಜನರು ರಾತ್ರಿ ತಿರುಗಾಡಲು ಭಯಪಡಬೇಕಾಗಿದೆ. ಅಲ್ಲದೇ ಕುಡಿಯಲು ನೀರು ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಬಸ್ಸಿನ ಅನುಕೂಲವಿಲ್ಲ, ಶಿಕ್ಷಕರ ಕೊರತೆ ಇದೆ ಎಂದು ಶಾಸಕರ ಗಮನಕ್ಕೆ ತಂದರು.
ಸುಲೇಪೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ ಔಷಧಿ ಮಾತ್ರ ಹೊರಗೆ ಬರೆದುಕೊಡಲಾಗುತ್ತಿದೆ ಎಂದು ಟಿಹೆಚ್ಒ ಅವರಿಗೆ ತಿಳಿಸಿದಾಗ, ಸ್ಥಳದಲ್ಲಿಯೇ ಇದ್ದ ಡಾ| ವಿಜಯಕುಮಾರ ಜಾಪಟ್ಟಿ ಮಾತನಾಡಿ ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ 200ರಿಂದ 300 ಹೊರ ರೋಗಿಗಳು ಬರುತ್ತಾರೆ. ಅವರಿಗೆ ಮಾತ್ರೆ ಮತ್ತು ಔಷಧ ನೀಡಲಾಗುತ್ತಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಗಿರುವುದರಿಂದ ಹೆಚ್ಚಿನ ಔಷಧ, ಮಾತ್ರೆಗಳು ಸರಬರಾಜು ಆಗುತ್ತಿಲ್ಲ. ಕೇವಲ ಒಬ್ಬ ವೈದ್ಯರು ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ತಾಪಂ ಅಧಿಕಾರಿ ಮಹಮ್ಮದ ಮೈನೋದ್ದೀನ ಪಟಿಕರ, ಡಾ| ಮಹ್ಮದ ಗಫಾರ ಅಹೆಮದ್, ಕೃಷಿ ಅಧಿಕಾರಿ ಅನೀಲಕುಮಾರ ರಾಠೊಡ, ಡಾ| ಧನರಾಜ ಬೊಮ್ಮ, ಎಇಇ ಮಹ್ಮದ ಹುಸೇನ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಎಇಇ ಪರಮೇಶ್ವರ ಬಿರಾದಾರ, ಶಾಂತವೀರ ಮಠ, ಶರಣಬಸಪ್ಪ ಪಾಟೀಲ, ಅಜೀಮ ಪಟೇಲ್ ಹಾಗೂ ಇನ್ನಿತರ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ತಿಳಿಸಿದರು. ತಹಶೀಲ್ದಾರ್ ಪಂಡಿತ ಬಿರಾದಾರ ಸ್ವಾಗತಿಸಿದರು, ಪಿಡಿಒ ಪವನ ಮೇತ್ರಿ ವಂದಿಸಿದರು.