Advertisement

Chhattisgarh;ಮತ್ತೆ ಏಳು ನಕ್ಸಲರ ಹತ್ಯೆ: 112ಕ್ಕೇರಿದ ಮೃತರ ಸಂಖ್ಯೆ

12:59 AM May 24, 2024 | Team Udayavani |

ನಾರಯಣಪುರ: ಛತ್ತೀಸ್‌ಗಢದ ನಾರಾಯಣ್‌ಪುರ-ಬಿಜಾಪುರ ಜಿಲ್ಲಾ ಸರಹದ್ದಿನಲ್ಲಿ ಭದ್ರತಾ ಸಿಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಗುರುವಾರ 7 ಮಂದಿ ನಕ್ಸಲರನ್ನು ಹತ್ಯೆಗೈಯ್ಯಲಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಸಿಬಂದಿ ಕಾರ್ಯಾಚರಣೆಗೆ ತೆರಳಿದಾಗ ನಕ್ಸಲ್‌ ಹಾಗೂ ಸಿಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ನಾರಾಯಣ್‌ಪುರ ಎಸ್‌ಪಿ ಪ್ರಭಾತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Advertisement

ಮಾವೋವಾದಿಗಳ ಸಮವಸ್ತ್ರ ಧರಿಸಿದ್ದ 7 ನಕ್ಸಲರನ್ನು ಎನ್‌ಕೌಂಟರ್‌ ಮಾಡಲಾಗಿದೆ. ಜತೆಗೆ 7 ಬಂದೂಕು ಗಳನ್ನೂ ಸ್ಥಳದಿಂದ ವಶಪಡಿಸಿಕೊಳ್ಳಲಾ ಗಿದೆ. ನಕ್ಸಲರ ಇರುವಿಕೆ ಬಗ್ಗೆ ನಿಖರ ಮಾಹಿತಿ ದೊರೆತ ಕೂಡಲೇ ದಾಂತೇ ವಾಡ, ನಾರಾಯಣಪುರ ಹಾಗೂ ಬಸ್ತಾರ್‌ ಜಿಲ್ಲೆಗಳ ಜಿಲ್ಲಾ ಮೀಸಲು ಪಡೆಗಳು ಜಂಟಿಯಾಗಿ ಕಾರ್ಯಾ ಚರಣೆ ನಡೆಸಿವೆ.

ಈ ಎನ್‌ಕೌಂಟರ್‌ನೊಂದಿಗೆ ಈ ವರ್ಷ ಛತ್ತೀಸ್‌ಗಢ ರಾಜ್ಯವೊಂದರಲ್ಲೇ 112 ನಕ್ಸಲರ ಹತ್ಯೆಯಾದಂತಾಗಿದೆ. ಎಪ್ರಿಲ್‌ 16ರಂದು ಕಂಕೇರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 29 ನಕ್ಸಲರನ್ನು ಕೊಲ್ಲಲಾಗಿದ್ದು, ಇದು ಈ ವರ್ಷದ ಅತೀದೊಡ್ಡ ಕಾರ್ಯಾ ಚರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next