Advertisement

Chhattisgarh ಸಿಎಂ ಭೂಪೇಶ್‌ ಭಗೇಲ್‌ಗೆ 508 ಕೋಟಿ?

12:12 AM Nov 04, 2023 | Team Udayavani |

ಹೊಸದಿಲ್ಲಿ: ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ ಮಹದೇವ್‌ನ ಪ್ರವರ್ತಕರು ಛತ್ತೀಸ್‌ಗಢ ಸಿಎಂ ಭೂಪೇಶ್‌ ಭಗೇಲ್‌ ಅವರಿಗೆ ಒಟ್ಟು 508 ಕೋಟಿ ರೂ. ಪಾವತಿ ಮಾಡಿದ್ದಾರೆ. ಹೀಗೆಂದು ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪಿಸಿದೆ.

Advertisement

ಛತ್ತೀಸ್‌ಗಢದ ಕಾಂಗ್ರೆಸಿಗರಿಗೆ ಹಣ ತಲುಪಿಸಲು ಬಂದಿದ್ದ ಅಸೀಮ್‌ ದಾಸ್‌ ಎಂಬಾತನನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಆತನಿಂದ 5.39 ಕೋಟಿ ರೂ. ನಗದನ್ನೂ ವಶಪಡಿಸಿಕೊಂಡಿದ್ದರು. ಆತನ ವಿಚಾರಣೆ ನಡೆಸಿ, ಹೇಳಿಕೆಯನ್ನು ಆಮೂಲಾಗ್ರವಾಗಿ ತನಿಖೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ತನಿಖೆ ವೇಳೆ ಅಸೀಮ್‌, ಹಣ ಹೊಂದಿಸಿದ್ದು ಆ್ಯಪ್‌ನ ಪ್ರವರ್ತಕರು ಇದನ್ನು ಬಘೇಲ್‌ ಅವರಿಗೆ ನೀಡಲು ಕೊಟ್ಟಿದ್ದರು. ಸಿಎಂ ಅವರಿಗೆ ಒಟ್ಟು 508 ಕೋಟಿ ರೂ. ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ. ಅದರ ಬಗ್ಗೆ ತನಿಖೆ ನಡೆಸುವುದಾಗಿ ಇ.ಡಿ.ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next