Advertisement

ಛತ್ತೀಸ್‌ಗಡದಲ್ಲಿ ಮೀಸಲಾತಿ ಪ್ರಮಾಣ ಶೇ.76ಕ್ಕೇರಿಕೆ

10:00 PM Dec 03, 2022 | Team Udayavani |

ರಾಯ್ಪುರ: ಮೀಸಲಾತಿಗೆ ಸಂಬಂಧಪಟ್ಟ 2 ವಿಧೇಯಕಗಳು ಛತ್ತೀಸ್‌ಗಡ ವಿಧಾನಸಭೆಯಲ್ಲಿ ಶನಿವಾರ ಅವಿರೋಧವಾಗಿ ಅಂಗೀಕಾರಗೊಂಡಿದ್ದು, ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.76ಕ್ಕೇರಿದಂತಾಗಿದೆ.
ಅದರಂತೆ, ಇನ್ನು ಮುಂದೆ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಾಗ ಪರಿಶಿಷ್ಟ ಪಂಗಡಕ್ಕೆ ಶೇ.32, ಇತರೆ ಹಿಂದುಳಿದ ವರ್ಗಗಳಿಗೆ ಶೇ.27, ಪರಿಶಿಷ್ಟ ಜಾತಿಗೆ ಶೇ.13 ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(ಇಡಬ್ಲ್ಯುಎಸ್‌) ಶೇ.4 ಮೀಸಲಾತಿ ದೊರೆಯಲಿದೆ. ರಾಜ್ಯದಲ್ಲಿ ವಿವಿಧ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಈ ಮೀಸಲಾತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹೇಳಿದ್ದಾರೆ.

Advertisement

ಮತಾಂತರಗೊಂಡರೆ ಮೀಸಲಾತಿ ಇಲ್ಲ
ಚೆನ್ನೈ: ಮದ್ರಾಸ್‌ ಹೈಕೋರ್ಟ್‌ ಶನಿವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ಒಬ್ಬ ವ್ಯಕ್ತಿಯು ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ಬಳಿಕ, ಜಾತಿ ಆಧಾರದಲ್ಲಿ ಮೀಸಲಾತಿ ಕೇಳುವಂತಿಲ್ಲ ಎಂದು ಹೇಳಿದೆ.

ತೀರಾ ಹಿಂದುಳಿದ ವರ್ಗಕ್ಕೆ ಸೇರಿದ ಹಿಂದೂ ವ್ಯಕ್ತಿಯೊಬ್ಬರು ಇಸ್ಲಾಂಗೆ ಮತಾಂತರಗೊಂಡಿದ್ದರು. ನಂತರ ಸರ್ಕಾರಿ ಉದ್ಯೋಗದಲ್ಲಿ ಜಾತಿ ಆಧರಿತ ಮೀಸಲಾತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇಸ್ಲಾಂನಲ್ಲಿ ಜಾತಿ ಪದ್ಧತಿ ಇಲ್ಲದ ಕಾರಣ, ಜಾತಿ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಜಿ.ಆರ್‌.ಸ್ವಾಮಿನಾಥನ್‌ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next