Advertisement

ಛತ್ತೀಸ್‌ಗಢ: 9 ನಕ್ಸಲರ ಹತ್ಯೆಗೈದ ಭದ್ರತಾ ಪಡೆ

06:00 AM Nov 27, 2018 | Team Udayavani |

ರಾಯಪುರ: ನಿರಂತರ ನಕ್ಸಲ್‌ ದಾಳಿಯಿಂದ ತತ್ತರಿಸುತ್ತಲೇ ಇರುವ ಛತ್ತೀಸ್‌ಗಢದಲ್ಲಿ ಶುಕ್ರವಾರದಿಂದ ಸತತವಾಗಿ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಮವಾರ ತೆಲಂಗಾಣದ ಗಡಿ ಭಾಗದಲ್ಲಿರುವ ಕಿಸ್ತಾರಾಮ್‌ ಅರಣ್ಯ ಮತ್ತು ಚಿಂತಗುಫಾ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 9 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಇಬ್ಬರು ಪೊಲೀಸ್‌ ಸಿಬಂದಿ ಹುತಾತ್ಮರಾಗಿದ್ದಾರೆ. ನಕ್ಸಲರ ವಿರುದ್ಧ ತೊಡೆ ತಟ್ಟಿರುವ ನಕ್ಸಲ್‌ ನಿಗ್ರಹ ಪಡೆ ಸುಕ್ಮಾ ಜಿಲ್ಲೆಯ 2 ಕಡೆ ಈ ಕಾರ್ಯಾ ಚರಣೆ ನಡೆಸಿದೆ. ಈ ವೇಳೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

9 ಮಾವೋವಾದಿಗಳ ಹತ್ಯೆ
ಜಂಟಿ ಕಾರ್ಯಾಚರಣೆ ಪಡೆಯು ಶೋಧ ಕಾರ್ಯ ನಡೆಸುತ್ತಿದ್ದಂತೆ ಎಚ್ಚೆತ್ತ ನಕ್ಸಲರು ಒಂದೇ ಸಮನೆ ಗುಂಡಿನ ದಾಳಿ ನಡೆಸ ಲಾರಂಭಿ ಸಿದರು. ಈ ವೇಳೆ ಪರಸ್ಪರ ಗುಂಡಿನ ಚಕಮಕಿ ನಡೆದಿದ್ದು, 8 ಮಂದಿ ನಕ್ಸಲರನ್ನು ಹೊಡೆದುರುಳಿಸ ಲಾಯಿತು. ಈ ಪೈಕಿ ವಿಭಾ ಗೀಯ ಸಮಿತಿ ಸದಸ್ಯರಾದ ತತಿ ಭೀಮಾ ಮತ್ತು ಮಹಿಳಾ ನಕ್ಸಲ್‌ ಪೋಡಿಯಂ ರಾಜೇ ಅವರನ್ನೂ ಹತ್ಯೆಗೈಯಲಾಗಿದೆ. ಇವರಿಬ್ಬರ ತಲೆಗೂ ತಲಾ 8 ಲಕ್ಷ ರೂ. ಬಹುಮಾನವನ್ನು ಈ ಹಿಂದೆಯೇ ಘೋಷಿಸಲಾಗಿತ್ತು. ಇದೇ ವೇಳೆ, ಡಿಆರ್‌ಜಿ ಸಿಬಂದಿ ದಿಡೋì ರಾಮಾ ಮತ್ತು ಮಾದ್ವಿ ಜೋಗ ಅವರು ಹುತಾತ್ಮರಾಗಿದ್ದು, ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ ಮೂಲಕ ಅವರ ಪಾರ್ಥಿವ ಶರೀರಗಳನ್ನು ರಾಯು³ರಕ್ಕೆ ಒಯ್ಯಲಾಗಿದೆ. ಮತ್ತೂಂದು ಕಾರ್ಯಾಚರಣೆಯಲ್ಲಿ, ಕೋಬ್ರಾ ಪಡೆಯ ಸಿಬಂದಿ ಓರ್ವ ನಕ್ಸಲನನ್ನು ಚಿಂತಗುಫಾದಲ್ಲಿ ಹೊಡೆ ದುರುಳಿಸಿದ್ದಾರೆ.

1,200 ಯೋಧರು ಭಾಗಿ
ಕಿಸ್ತಾರಾಮ್‌ ಪ್ರದೇಶದಲ್ಲಿ ಹಾಗೂ ದಕ್ಷಿಣ ಸುಕ್ಮಾದ ಚಿಂತಗುಫಾದಲ್ಲಿ ನಡೆದ ಈ ಪ್ರಮುಖ ಕಾರ್ಯಾಚರಣೆಗೆ “ಆಪರೇಷನ್‌ ಪ್ರಹಾರ್‌ 4′ ಎಂದು ಹೆಸರಿಡಲಾಗಿತ್ತು. ಇದರಲ್ಲಿ 1,200 ಮಂದಿ ಯೋಧರು ಪಾಲ್ಗೊಂಡಿದ್ದರು. ರವಿವಾರ ತಡರಾತ್ರಿ ಸಕ್ಲೇರ್‌ ಅರಣ್ಯಪ್ರದೇಶ, ತೊಂಡಮಾರ್ಕ ಮತ್ತು ಸೇಲ್‌ಟಾಂಗ್‌ ಗ್ರಾಮಗಳಲ್ಲಿ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್), ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ಸಿಆರ್‌ಪಿಎಫ್ನ ಕೋಬ್ರಾ ಕಮಾಂಡೋಗಳು ಹಾಗೂ ತೆಲಂಗಾಣ ಪೊಲೀಸರು ಜಂಟಿಯಾಗಿ ಈ ಆಪರೇಷನ್‌ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next