Advertisement
ಜಿಲ್ಲಾ ರಿಸರ್ವ್ ಗಾರ್ಡ್ಗೆ (DRG) ಸೇರಿದ ಹೆಡ್ ಕಾನ್ಸ್ಟೇಬಲ್ ಬುಧ್ರಾಮ್ ಕೊರ್ಸಾ, ಕಾನ್ಸ್ಟೆಬಲ್ಗಳಾದ ಡುಮ್ಮಾ ಮರ್ಕಮ್, ಪಂಡರು ರಾಮ್, ಬಮನ್ ಸೋಧಿ ಮತ್ತು ಬಸ್ತಾರ್ ಫೈಟರ್ಸ್ನ ಕಾನ್ಸ್ಟೆಬಲ್ ಸೋಮದು ವೆಟ್ಟಿ ಅವರು ಈ ಹಿಂದೆ ನಕ್ಸಲೈಟ್ಗಳಾಗಿ ಸಕ್ರಿಯರಾಗಿದ್ದರು. ಶರಣಾದ ನಂತರ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲಾಗಿತ್ತು ಎಂದು ಬಸ್ತರ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿ ಸುಂದರರಾಜ್ ಪಿ. ಪಿಟಿಐಗೆ ತಿಳಿಸಿದ್ದಾರೆ.
Related Articles
Advertisement
ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಸೋಮವಾರ ಭದ್ರತಾ ಸಿಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ನಕ್ಸಲರು ಸ್ಫೋಟಿಸಿದ ಪರಿಣಾಮ ಡಿಆರ್ಜಿ ಮತ್ತು ಬಸ್ತಾರ್ ಫೈಟರ್ಸ್ನ ಎರಡೂ ಘಟಕಗಳ ರಾಜ್ಯ ಪೊಲೀಸರ ತಲಾ ನಾಲ್ವರು ಮತ್ತು ಒಬ್ಬ ನಾಗರಿಕ ಚಾಲಕ ಸಾವನ್ನಪ್ಪಿದ್ದಾರೆ.