ಬೆಂಗಳೂರು: ನಾಯಕ ಸುನೀಲ್ ಚೆಟ್ರಿಯ ಹ್ಯಾಟ್ರಿಕ್ ಗೋಲ್‌ನಿಂದಾಗಿ ಬೆಂಗಳೂರು ಎಫ್ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಫೈನಲ್‌ಗೆ ಲಗ್ಗೆ ಹಾಕಿದೆ. ಈ ಮೂಲಕ ಬೆಂಗಳೂರು ತಂಡ ಐಎಸ್‌ಎಲ್ ಕೂಟಕ್ಕೆ ಸೇರಿದ ಮೊದಲ ವರ್ಷವೇ ಪ್ರಶಸ್ತಿ ಸುತ್ತಿಗೆ ಲಗ್ಗೆಹಾಕಿದೆ.
ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ 2ನೇ ಚರಣದಲ್ಲಿ ಬೆಂಗಳೂರು ತಂಡ 2-1 ಗೋಲುಗಳಿಂದ ಎಫ್ಸಿ ಪುಣೆ ಸಿಟಿ ತಂಡವನ್ನು ಸೋಲಿಸಿದೆ. ಫೈನಲ್ ಪ್ರವೇಶಿಸಬೇಕಾದರೆ ಬೆಂಗಳೂರು ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿತ್ತು. ಯಾಕೆಂದರೆ ಪುಣೆಯಲ್ಲಿ ನಡೆದ ಬೆಂಗಳೂರು, ಪುಣೆ ನಡುವಿನ ಸೆಮಿಫೈನಲ್‌ನ ಮೊದಲನೇ ಚರಣದ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗದೇ ಡ್ರಾದಲ್ಲಿ ಅಂತ್ಯವಾಗಿತ್ತು.
ಬೆಂಗಳೂರು ತಂಡದ ಪರ ನಾಯಕ ಸುನೀಲ್ ಚೆಟ್ರಿ (15, 65 ಮತ್ತು 89ನೇ ನಿಮಿಷ) ಮೂರು ಗೋಲು ಬಾರಿಸಿ ಗೆಲುವಿನ ರೂವಾರಿಗಳಾದರು. ಪುಣೆ ಪರ ಜೊನಾಟಾನುÉಕ್ಕಾ (82ನೇ ನಿಮಿಷ) ಏಕೈಕಗೋಲು ದಾಖಲಿಸಿದರು.
ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು. ಹೀಗಾಗಿ ನಿರೀಕ್ಷೆಯಂತೆಯೇ ಪಂದ್ಯದಲ್ಲಿ ಆರಂಭದಲ್ಲಿಯೇ ತೀವ್ರ ಸ್ಪರ್ಧೆ ಕಂಡುಬಂತು. 15ನೇ ನಿಮಿಷದಲ್ಲಿ ಸುನೀಲ್ ಚೆಟ್ರಿ ಆಕರ್ಷಕವಾಗಿ ಚೆಂಡನ್ನು ಬಲೆಯೊಳಗೆ ಸೇರಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ತಂದರು. ಇದೇ ಉತ್ಸಾಹದಲ್ಲಿ ಬೆಂಗಳೂರು ತಂಡ ಪಂದ್ಯವನ್ನು ಮುಂದುವರಿಸಿತು. ಎದುರಾಳಿಗಳು ಗೋಲು ಬಾರಿಸದಂತೆ ತಡೆಯಲೂ ಬಿಗಿ ರಕ್ಷಣಾ ತಂತ್ರ ಅನುಸರಿಸಿತು. ಇದರಿಂದಾಗಿ ಮೊದಲನೇ ಅವಧಿಯಲ್ಲಿ ಬೆಂಗಳೂರು 1-0 ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.
2ನೇ ಅವಧಿಯಲ್ಲೂ ಹೋರಾಟ ರೋಚಕವಾಗಿಯೇ ಇತ್ತು. 65ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಚೆಟ್ರಿ ಗೋಲಾಗಿಸಿದರು. ನಂತರ 82ನೇ ನಿಮಿಷದಲ್ಲಿ ಪುಣೆ ತಂಡದ ಜೊನಾಟಾನುÉಕ್ಕಾ ಪ್ರೀ ಕಿಕ್‌ಲ್ಲಿ ಅದ್ಭುತ ಗೋಲು ಸಿಡಿಸಿ ಬೆಂಗಳೂರಿಗೆ ಆತಂಕ ಸೃಷ್ಟಿಸಿದ್ದರು. ಆದರೆ ತನ್ನ ಹೋರಾಟವನ್ನು ಬಿಡದ ಚೆಟ್ರಿ 89ನೇ ನಿಮಿಷದಲ್ಲಿ ಮತ್ತೂಂದು ಗೋಲು ಸಿಡಿಸಿ ಗೆಲುವು ತಂದರು.