ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯಲಿರುವ ಚೊಚ್ಚಲ “ಟಿ20 ಮ್ಯಾಕ್ಸ್’ ಸರಣಿಯಲ್ಲಿ ಭಾರತದ ಎಡಗೈ ಪೇಸ್ ಬೌಲರ್‌ಗಳಾದ ಚೇತನ್ ಸಕಾರಿಯಾ ಮತ್ತು ಮುಕೇಶ್ ಚೌಧರಿ ಆಡಲಿದ್ದಾರೆ.
ಸಕಾರಿಯ “ಸನ್‌ಶೈನ್ ಕೋಸ್ಟ್’ ಮತ್ತು ಚೌಧರಿ “ವಿನ್ನುಮ್ ಮ್ಯಾನ್ಲಿ’ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸದ್ಯ ಇವರಿಬ್ಬರೂ ಎಂಆರ್‌ಎಫ್ ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯದ “ಎಕ್ಸ್‌ಚೇಂಜ್ ಪ್ರೋಗ್ರಾಮ್’ನಂತೆ ಬ್ರಿಸ್ಬೇನ್‌ನಲ್ಲಿದ್ದಾರೆ.
ಕಳೆದ 20 ವರ್ಷಗಳಿಂದಲೂ ಇವೆರಡೂ ಸಂಸ್ಥೆಗಳು ಇಂಥದೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಲೇ ಬಂದಿವೆ. ಟಿ20 ಮ್ಯಾಕ್ಸ್ ಸರಣಿ ಕೂಡ ಬ್ರಿಸ್ಬೇನ್‌ನಲ್ಲೇ ಆ. 18ರಿಂದ ಸೆ. 4ರ ತನಕ ನಡೆಯಲಿದೆ.
ಚೇತನ್ ಸಕಾರಿಯಾ ಮತ್ತು ಮುಕೇಶ್ ಚೌಧರಿ ಕಳೆದ ಐಪಿಎಲ್‌ನಲ್ಲಿ ಡೆಲ್ಲಿ ಮತ್ತು ಚೆನ್ನೈ ಪರ ಆಡಿದ್ದರು. ಇವರಲ್ಲಿ ಸಕಾರಿಯಾ ಕಳೆದ ವರ್ಷ ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟಿ20ಗೆ ಪದಾರ್ಪಣೆ ಮಾಡಿದ್ದರು.